ಶುಕ್ರವಾರ, ಫೆಬ್ರವರಿ 14, 2014

ಬಾಲು ಮಹೇಂದ್ರ ಇನ್ನಿಲ್ಲ

ಬಾಲು ಮಹೇಂದ್ರ 
‘ಕೋಕಿಲ’ ಕನ್ನಡ ಚಲನಚಿತ್ರವೂ ಸೇರಿದಂತೆ ಅನೇಕ  ಪ್ರಖ್ಯಾತ ಚಲನಚಿತ್ರಗಳ ನಿರ್ದೇಶನಕ್ಕೆ ಮತ್ತು ಶ್ರೇಷ್ಠ ಛಾಯಾಗ್ರಹಣಕ್ಕೆ ಹೆಸರಾಗಿದ್ದ  ಬಾಲು­ಮಹೇಂದ್ರ ಅವರು ಗುರುವಾರ ಹೃದಯಾಘಾತ­ದಿಂದ ನಿಧನರಾಗಿದ್ದಾರೆ. 1939ರ ಮೇ 20ರಂದು ಶ್ರೀಲಂಕಾದಲ್ಲಿ  ಜನಿಸಿದ ಬಾಲು ಮಹೇಂದ್ರ ಅವರು, ಚಲನಚಿತ್ರ ಛಾಯಾಗ್ರಾಹಕರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ನಂತರ ಚಲನಚಿತ್ರ ನಿರ್ದೇಶಕರಾಗಿ ಮುಂಚೂಣಿಗೆ ಬಂದ ಅವರು, ಪ್ರಶಸ್ತಿ ಪುರಸ್ಕೃತ ಚಿತ್ರಗಳಾದ ಮೂನ್‌ಡ್ರಾಂ ಪಿರೈ’ (ಇದೇ ಚಿತ್ರ ಹಿಂದಿಯಲ್ಲಿ ಸದ್ಮಾಹೆಸರಿನಲ್ಲಿ ಹೆಸರು ಗಳಿಸಿದೆ) ಹಾಗೂ ವೀಡುಚಿತ್ರಗಳನ್ನು ನಿರ್ದೇಶಿಸಿದ್ದರು.

1974ರಲ್ಲಿ ನೆಲ್ಲುಎಂಬ ಮಲ­ಯಾಳಂ ಚಿತ್ರದ ಮೂಲಕ ಚಲನ ಚಿತ್ರ ನಿರ್ದೇಶಕರಾದರು. ಇದೇ ಚಿತ್ರಕ್ಕೆ ಕೇರಳ ಸರ್ಕಾರದಿಂದ ಉತ್ತಮ ಚಲನ­ಚಿತ್ರ ಛಾಯಾ­ಗ್ರಾಹಕಪ್ರಶಸ್ತಿಗೆ ಭಾಜನರಾಗಿದ್ದರು.ಪ್ರಥಮ ಬಾರಿಗೆ 1977ರಲ್ಲಿ ಕನ್ನಡದಲ್ಲಿ ಕೋಕಿಲಚಿತ್ರ ನಿರ್ದೇಶನ ಮಾಡಿದರು.ಅವರು ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿಯಲ್ಲಿ 20ಕ್ಕೂ ಹೆಚ್ಚು ಚಿತ್ರಗಳನ್ನು  ನಿರ್ದೇಶಿಸಿ­ದ್ದಾರೆ.

ಕೋಕಿಲಚಿತ್ರದ ಮೂಲಕ ನಾಯಕ­ನಾಗಿ ಪರಿಚಿತರಾದ ಮೋಹನ್ ಅವರು, ಮುಂದೆ ಕೋಕಿಲ ಮೋಹನ್‌ಎಂದೇ ಪ್ರಸಿದ್ಧಿಯಾದರು.ಬಾಲು ನಿರ್ದೇಶನದ ವೀಡು’ (1988) ಹಾಗೂ ವನ್ನ ವನ್ನ ಪೂಕ್ಕಲ್‌’  (1992) ಚಿತ್ರಗಳು ರಾಷ್ಟ್ರ­ಪ್ರಶಸ್ತಿಗೆ ಭಾಜನವಾಗಿವೆ. ಸಂಧ್ಯಾ ರಾಗಂ’ (1990) ಚಿತ್ರ ಉತ್ತಮ ಕೌಟುಂಬಿಕ ಸಂದೇಶ ಪ್ರಶಸ್ತಿಗೆ ಪಾತ್ರವಾಗಿದೆ.

ಬಾಲು ಅವರು ಇತ್ತೀಚೆಗಷ್ಟೇ ಥಲೈ ಮುರೈಗಲ್‌ಎಂಬ ತಮಿಳು ಚಿತ್ರ ನಿರ್ದೇ­ಶಿಸಿದ್ದರು. ಅಜ್ಜಮೊಮ್ಮಗನ ಸಂಬಂಧದ ಕಥೆಯುಳ್ಳ ಈ ಚಿತ್ರದಲ್ಲಿ ಬಾಲು ಅವರು ಪ್ರಮುಖ ಪಾತ್ರವನ್ನೂ ವಹಿಸಿದ್ದರು.ಸಿನಿಮಾ ಛಾಯಾಗ್ರಹಣದಲ್ಲಿ ಅವರಿ­ಗಿದ್ದ ಪ್ರತಿಭೆ ಮತ್ತು ಕೌಶಲ­ದಿಂದಾಗಿ ಹೆಸರು­ವಾಸಿಯಾಗಿದ್ದ ಬಾಲು ಅವರು, ಅನೇಕ ಪ್ರತಿಭಾ­ವಂತರಿಗೆ ಗುರುವಾಗಿ­ದ್ದರು."

ದಕ್ಷಿಣ ಭಾರತೀಯ ಸಿನಿಮಾ ರಂಗದಲ್ಲಿ ಮೊದಲ ಬಾರಿಗೆ ನವೀನ ಶೈಲಿಯ ಕ್ಯಾಮೆರಾ ಬಳಸಿ, ನೈಸರ್ಗಿಕ ಬೆಳಕಿನಲ್ಲಿ ಚಿತ್ರ ನಿರ್ಮಿಸಿದ್ದ ಕೀರ್ತಿ ಅವರದಾಗಿತ್ತು.  ಬೆಂಗಳೂರು ಕಬ್ಬನ್ ಪಾರ್ಕಿನಲ್ಲಿರುವ ಒಂದು ಕಲ್ಲು ಬಂಡೆಯನ್ನು ಹಲವಾರು ಕೋನಗಳಿಂದ ಚಿತ್ರೀಕರಿಸುವುದು ಅವರಿಗೆ ಪ್ರಿಯವಾಗಿತ್ತು. 


Tag: Balu Mahendra

ಕಾಮೆಂಟ್‌ಗಳಿಲ್ಲ: