ಭಾನುವಾರ, ಫೆಬ್ರವರಿ 16, 2014

ನೀನೆಲ್ಲಿ ನಡೆವೆ ದೂರ ಎಲ್ಲೆಲ್ಲೂ ಲೋಕವೇ

ನೀನೆಲ್ಲಿ ನಡೆವೆ ದೂರ ಎಲ್ಲೆಲ್ಲೂ ಲೋಕವೇ
ಈ ಲೋಕವೆಲ್ಲ ಘೋರ, ಎಲ್ಲೆಲ್ಲೂ ಶೋಕವೇ

ನಗುವಾಗ ಎಲ್ಲ ನೆಂಟರು, ಅಳುವಾಗ ಯಾರೂ ಇಲ್ಲ
ಮುಳ್ಳಲ್ಲಿ ನಿನ್ನ ನಡೆಸಿ ನಲಿವಾ ನಗುವೆ ವಿಕಾರ

ನೆರಳನ್ನು ನೀಡುವಂತಹ ಮರವನ್ನೇ ಕಡಿವರಲ್ಲ
ನಿಸ್ವಾರ್ಥ ಜೀವಿಗಳಿಗೆ ಜಗದೇ ಕಹಿಯೇ ಅಪಾರ

ಅಪಕಾರವನ್ನೇ ಕಾಣುವೆ, ಉಪಕಾರವನ್ನು ಕಾಣೆ
ಅನುರಾಗವಿಲ್ಲಿ ಇಲ್ಲವೆ? ಮನದೆ ಇದುವೇ ವಿಚಾರ

ಚಿತ್ರ: ಒಂದೇ ಬಳ್ಳಿಯ ಹೂಗಳು.
ಸಾಹಿತ್ಯ: ಗೀತಪ್ರಿಯ
ಸಂಗೀತ: ಸತ್ಯಂ.
ಗಾಯನ: ಮಹಮ್ಮದ್ ರಫಿ.


 Tag: Neenelli nadeve doora


ಕಾಮೆಂಟ್‌ಗಳಿಲ್ಲ: