ಮಂಗಳವಾರ, ಫೆಬ್ರವರಿ 4, 2014

ವಸಂತ ಪಂಚಮಿ

ವಸಂತ ಪಂಚಮಿ

ಇಂದು ವಸಂತ ಪಂಚಮಿ.  ಉತ್ತರ ಭಾರತೀಯರು ಅದರಲ್ಲೂ ಹಬ್ಬ ಮಾಡುವುದರಲ್ಲಿ ಮೇಲ್ಪಂಕ್ತಿಗರಾದ ಬಂಗಾಳಿಯರು ‘ವ’ ಎಂಬುದನ್ನೆಲ್ಲಾ ‘ಬ’ ಎನ್ನುವುದರಿಂದ ಅದು ‘ಬಸಂತ ಪಂಚಮಿ’ಯಾಗಿದೆ.  ಇದು ಗಾಳೀಪಟದ ಹಬ್ಬವೆಂತಲೂ ಪ್ರಸಿದ್ಧಿ.

ಇದು ವಸಂತದ ಆಗಮನದ ಸಂಕೇತ, ಶೃಂಗಾರ ಪ್ರಧಾನವಾದದ್ದು ಎಂಬ ನಂಬಿಕೆ ಕಾಲಾನುಕ್ರಮದಲ್ಲಿ ಮೂಡಿದ್ದು ಇದು ಕಾಮದೇವ, ಆತನ ಸತಿ ರತಿ ಮತ್ತು ಕಾಮದೇವನ ಗೆಳೆಯ ವಸಂತ ಇವರುಗಳ ನೆನಪಿನ ಪ್ರಧಾನ ಹಬ್ಬವಾಗಿತ್ತು.  ಮುಂದೆ ವಿದ್ಯೆ ಸಂಗೀತ ಕಲೆ ಇವುಗಳ ವೈಭವೀಕರಣದ ಕುರುಹಾಗಿ ಉತ್ತರ ಭಾರತೀಯರು ಇದನ್ನು ವಿದ್ಯಾದೇವತೆ ಸರಸ್ವತೀ ಹಬ್ಬವನ್ನಾಗಿ ಆಚರಿಸುವ ಪದ್ಧತಿಯನ್ನು ರೂಢಿಗೊಳಿಸಿಕೊಂಡಿದ್ದಾರೆ.  ವಸಂತ ಪಂಚಮಿ, ಮಾತೆ ಸರಸ್ವತಿಯ ಜನ್ಮದಿನವೆಂಬ ನಂಬಿಕೆಯೂ ಜನರಲ್ಲಿದೆ.

ದೇಶದ ನಾನಾ ಕಡೆಗಳಲ್ಲಿ ವಸಂತ ಪಂಚಮಿ ಹಬ್ಬದ ಆಚರಣೆ ಚಾಲ್ತಿಯಿದ್ದು ಬಹಳಷ್ಟು ಜನ  ಗಾಳಿಪಟವನ್ನು ಹಾರಿಸಿ ಸಂತಸ ಪಡುತ್ತಾರೆ.  ಸಿಖ್ಖರ ಪವಿತ್ರ ದೇಗುಲವಾದ ಅಮೃತಸರದ ಹರಮಂದಿರ್ ಸಾಹೇಬ್ನಲ್ಲಿ ಸಂಗೀತಗಾರರು ಬಸಂತ ರಾಗವನ್ನು ಹಾಡುತ್ತಾರೆ.  ಪವಿತ್ರ ನದಿಗಳಲ್ಲಿ ಮುಳುಗು ಹಾಕಿ ಸಂಭ್ರಮಿಸುವ ಭಕ್ತರೂ ಲಕ್ಷಾಂತರ ಜನ.  ಕಾವಿ ಬಣ್ಣದ ಬಟ್ಟೆಯುಟ್ಟು ಜನ ಬಗೆ ಬಗೆಯ ಸಿಹಿ ಖಾದ್ಯಗಳನ್ನೂ ಈ ಸಂದರ್ಭದಲ್ಲಿ ಅನುಭಾವಿಸುತ್ತಾರೆ.

ಲೋಕದ ಈ ಸುಂದರ ಆಚರಣೆಯ ಜೊತೆಗೆ ನಮ್ಮ ಹರ್ಷವನ್ನೂ  ಜೊತೆಗೂಡಿಸೋಣ.

Tag: Vasantha Panchami, Basnat Panchamiಕಾಮೆಂಟ್‌ಗಳಿಲ್ಲ: