ಮಂಗಳವಾರ, ಮಾರ್ಚ್ 11, 2014

ಸರ್ವಮಂಗಲಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇಓಂ ಸರ್ವಮಂಗಲಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ
ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋsಸ್ತುತೇ

ಸೃಷ್ಟಿಸ್ಥಿತಿವಿನಾಶಾನಾಂ ಶಕ್ತಿಭೂತೇ ಸನಾತನಿ
ಗುಣಾಶ್ರಯೇ ಗುಣಮಯೇ ನಾರಾಯಣಿ ನಮೋsಸ್ತುತೇ

ಶರಣಾಗತದೀನಾರ್ತಪರಿತ್ರಾಣಪರಾಯಣೇ
ಸರ್ವಸ್ಯಾರ್ತಿಹರೇ ದೇವಿ ನಾರಾಯಣಿ ನಮೋsಸ್ತುತೇ
ಜಯ ನಾರಾಯಣಿ ನಮೋsಸ್ತುತೇ

ಓಂ ಸಮಸ್ತ ಮಂಗಳಗಳ ಮೂಲಭೂತೆ, ಶುಭಸ್ವರೂಪಿಣಿ, ಸಕಲ ಪುರುಷಾರ್ಥದಾಯಿನಿ, ಆಶ್ರಯದಾತೆ, ಜ್ಞಾನನೇತ್ರೆ, ಗೌರಿ, ನಾರಾಯಣಿ ನಿನಗೆ ನಮಸ್ಕಾರ.

ಸೃಷ್ಟಿ ಸ್ಥಿತಿ ಸಂಹಾರಗಳ ಶಕ್ತಿ, ಸನಾತನಿ, ಗುಣಗಳಿಗೆ ಆಶ್ರಯಳೆ, ಸುಗುಣಮಯಿ, ನಾರಾಯಣಿ, ನಿನಗೆ ನಮಸ್ಕಾರ’.

ಶರಣಾಗತರಾದ ದೀನರನ್ನೂ ದುಃಖಿಗಳನ್ನೂ ಉದ್ಧರಿಸುವುದರಲ್ಲಿ ನಿರತೆಯಾದ ಎಲ್ಲರ ಕಷ್ಟಗಳನ್ನೂ ನಿವಾರಿಸುವ ತೇಜೋಮಯಿಯಾದ ನಾರಾಯಣಿ, ನಿನಗೆ ನಮಸ್ಕಾರ.


ಕಾಮೆಂಟ್‌ಗಳಿಲ್ಲ: