ಗುರುವಾರ, ಮಾರ್ಚ್ 27, 2014

ನನ್ನವರಾರೂ ನನಗಿಲ್ಲ,

ನನ್ನವರಾರೂ ನನಗಿಲ್ಲ,
ನೀನಲ್ಲದೆ ಬೇರೆ ಗತಿ ಇಲ್ಲ;
ನನ್ನಲಿ ಏಕೆ ಕೃಪೆ ಇಲ್ಲ?
ಗುರುರಾಯನೆ ನೀನೇ ನನಗೆಲ್ಲ.

ಹೊಸ ಹೊಸ ಆಸೆಯು ದಿನವೆಲ್ಲ,
ಈ ಮನವನು ಹಿಂಡಿದೆ ಸುಖವಿಲ್ಲ;
ಮೂಡುವ ಬಯಕೆಗೆ ಕೊನೆಯಿಲ್ಲ,
ಅದು ಮುಗಿಯದೆ ಶಾಂತಿಯು ನನಗಿಲ್ಲ.

ಕತ್ತಲೆ ತುಂಬಿದೆ ಇಲ್ಲೆಲ್ಲ,
ನೀ ಬೆಳಕನು ತೋರದೆ ಬದುಕಿಲ್ಲ;
ಕಂಬನಿ ಮಿಡಿದರೂ ಯಾರಿಲ್ಲ,
ನಿನ್ನ ಬೆಂಬಲವಿಲ್ಲದೆ ಸುಖವಿಲ್ಲ.

ನೊಂದೆನು ನಾನು ಬಾಳೆಲ್ಲ,
ಈ ಕಂದನ ನೆನಪು ಏಕಿಲ್ಲ?
ನೆಮ್ಮದಿಯೊಂದನೆ ಬೇಡುವೆನು,
ನೀ ನೀಡದೆ ಹೋದರೆ ನಾನಿಲ್ಲ.

ಸಾಹಿತ್ಯ: ಚಿ. ಉದಯಶಂಕರ

ಗಾಯನ: ರಾಜ್ ಕುಮಾರ್

Tag: Nannavaraaroo nanagilla

ಕಾಮೆಂಟ್‌ಗಳಿಲ್ಲ: