ಬುಧವಾರ, ಮೇ 28, 2014

ಕುಣಿದಾಡೊ ಕೃಷ್ಣ ಕುಣಿದಾಡೊಕುಣಿದಾಡೊ ಕೃಷ್ಣ ಕುಣಿದಾಡೊ
ಫಣಿಯ ಮೆಟ್ಟಿ ಬಾಲವ ಪಿಡಿದು
ಕುಣಿಕುಣಿದಾಡುವ ಪಾದದೊಳೊಮ್ಮೆ

ಮುಂಗುರುಳುಂಗುರ ಜಡೆಗಳರಳೆಲೆ
ಪೊಂಗೊಳಲಲಿ ರಾಗಂಗಳ ನುಡಿಸುತ್ತ ತ್ರಿ-
ಭಂಗಿಯಲಿ ನಿಂದು ಧಿಗಿಧಿಗಿತಾಂಗಿಣ-
ತಾಂಗಿಣಾ ಥಕ್ಕಥಕ್ಕಧಿಮಿಯೆಂದು

ಮುಖಜಾರಿದು ಫುಲ್ಲಗವಾಜಿಯೆ
ಝೆಂ ಝೆಂ ಝೆಂ ಚುಂಬನಕಾಗಿ
ಝಣಾಂ ಝಣಾ ಝೆಂ ಕಿಟತಾಕಿಟಕಿಟ ತೋಂಗಿಣತೋ-
ಧೆಮಿ ತೋಂಗಿಣ ಪಾದದೊಳೊಮ್ಮೆ|

ಪ್ರಕಟದಿ ದಿನಗಳು ಪರಿಚಾರಂಗಳು
ವಿಕಲಿತ ನಾಟಕಭೇರಿಗಳು
ತೊಂಕಿಣಿ ತೊಂಹಿರಿ ತೊಂತರಿ ತರಿಗಿಟ
ತಕ್ಕಿಟತರಿಕಿಟ ತಕಿಟ ಶಬ್ದದಿ

ಪೆರಣಗಾಂಚಿತ್ತಲೆದಂವೆಗಂ
ಸರಹರಪ್ರತಿಜವಾಗರಶೆಂದ
ಶ್ರುಣಾಂ ಉರ್ರಾಂ ಎಂದು ಧಿಮಿಕಿಟ ಧಿಮಿಕಿಟ
ತಧಿಕುತ ಧಿಕುತ ತದ್ದಾಥೈ ಎಂದು

ಪಂಚಸ್ಥಳದಲಿ ಲಘುವಿಡಿದೊಮ್ಮೆ
ಗಣಪತಿ ನರಸಿಂಹ ಕೋನೇರಿ ತಿಮ್ಮ
ಪಂಚನಾಟಕಭೇದವ ವಾಜಿಸುತ್ತ
ಉಡುಪಿಲಿ ನಿಂದನು ಪುರಂದರವಿಠಲ


ಸಾಹಿತ್ಯ: ಪುರಂದರದಾಸರು

ಕಾಮೆಂಟ್‌ಗಳಿಲ್ಲ: