ಶುಕ್ರವಾರ, ಅಕ್ಟೋಬರ್ 3, 2014

ಮೈಸೂರ್ ಪಾಕ್

ಮೈಸೂರ್ ಪಾಕ್ ಇತಿಹಾಸ


1935ರ ವರ್ಷದ ಒಂದು ದಿನ ಅರಮನೆಯ ಪ್ರಧಾನ ಅಡುಗೆಯವರಾದ ಮಾದಪ್ಪನವರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭೋಜನಕ್ಕೆ ಎಲ್ಲವನ್ನೂ ಅಣಿಗೊಳಿಸಿದ್ದರು.  ಆದರೆ ರಾಜಭೋಜನದಲ್ಲಿ ಸಿಹಿ ತಿಂಡಿಯ ಜಾಗ ಖಾಲಿ ಇದ್ದು ಅದಕ್ಕೆ ಏನನ್ನು ಸಿದ್ಧಗೊಳಿಸುವುದು ಎಂದು ಮಾದಪ್ಪನವರು ಚಿಂತಿಸುತ್ತಾ ಕಡಲೆ ಹಿಟ್ಟು, ತುಪ್ಪ, ಸಕ್ಕರೆ ಇವುಗಳ ಪಾಕದ ಒಂದು ಪ್ರಯೋಗವನ್ನು ಮಾಡಿದರು.  ಮಹಾರಾಜರು ಊಟ ಮುಗಿಸುವ ವೇಳೆಗೆ ಪಾಕ ಗಟ್ಟಿಯಾದಾಗ  ಅದನ್ನು ಮಾದಪ್ಪನವರು ಮಹಾರಾಜರಿಗೆ ಅಳುಕಿನಿಂದಲೇ ನೀಡಿದರು.  ಈ ಸಿಹಿಯನ್ನು ಚಪ್ಪರಿಸಿ ಸವಿದ ಮಹಾರಾಜರು “ಇದೇನಿದು ಹೊಸ ರುಚಿ, ಇಷ್ಟು ಚೆನ್ನಾಗಿದೆ, ಇದರ ಹೆಸರೇನು?” ಎಂದು ಕೇಳಿದಾಗ ತಬ್ಬಿಬ್ಬಾದ ಮಾದಪ್ಪನವರು ಇದು ‘ಮೈಸೂರು ಪಾಕ’ ಎಂದರಂತೆ.  ಅಂದಿನಿಂದ ಈ ಮೈಸೂರು ಪಾಕ್ ವಿಶ್ವಪ್ರಸಿದ್ಧ.   

Tag: Mysore Pak

1 ಕಾಮೆಂಟ್‌:

Ramachandran.P.V ಹೇಳಿದರು...

ಮಸೂರ ಪಾಕ ಕಾಲಾಂತರದಲ್ಲಿ ಮೈಸೂರ್ ಪಾಕ್ ಆಯಿತೆಂದು ಹಿಂದೆಲ್ಲೋ ಪ್ರಜಾವಾಣಿಯಲ್ಲಿ ಓದಿದ ನೆನಪು.