ಭಾನುವಾರ, ಸೆಪ್ಟೆಂಬರ್ 27, 2015

ಗೂಗಲ್ ಹುಟ್ಟಿದ ಹಬ್ಬ

ಗೂಗಲ್ ಹುಟ್ಟಿದ ಹಬ್ಬ

ಇಂದು ಮಕ್ಕಳಿಂದ ಹಿರಿಯರವರೆಗೆ, ಎಲ್ಲ ದೇಶ ಪ್ರಾಂತ್ಯಗಳ ಎಲ್ಲರಿಗೂ ಯಾವುದೇ ವಿಚಾರ ಬೇಕಾದರೂ ಮೊದಲು ನೆನಪಾಗುವ ಹೆಸರು ಗೂಗಲ್.  ಕೆಲವೇ ವರ್ಷಗಳ ಹಿಂದೆ ಏನಾದರೂ ವಿಚಾರ ತಿಳಿಯಬೇಕಾದರೆ ಊರೂರು ಅಲೆದು, ದೊಡ್ಡ ದೊಡ್ಡ ಗ್ರಂಥಾಲಯಗಳಲ್ಲಿ ಪುಸ್ತಕದ ಧೂಳಿನ ಮಧ್ಯೆ ಜನ ಕಳೆದುಹೋಗಬೇಕಿತ್ತು.  ಸಹಸ್ರಾರು ಪುಟಗಳ ಮಧ್ಯೆ ತಮಗೆ ಬೇಕಿದ್ದ ವಿಚಾರಗಳನ್ನು ಅರಸಿ ಕಣ್ಣಲ್ಲಿ ಕಣ್ಣಿಟ್ಟು ಹುಡುಕಬೇಕಿತ್ತು.  ಇಂದು ವಿಶ್ವದಲ್ಲಿ ಸಣ್ಣ ಸೂಜಿಯಿಂದ ಮೊದಲ್ಗೊಂಡು ಬೃಹತ್ ಬ್ರಹ್ಮಾಂಡದವರೆವಿಗೆ ಯಾವುದೇ ಜ್ಞಾನವನ್ನು ಬೇಕಾದರೂ ಈ ಗೂಗಲ್ ಎಂಬ ಕಿಂಡಿಯ ಮೂಲಕ ನಾವು ಪಡೆದುಕೊಳ್ಳಬಹುದಾಗಿದೆ. ಎಲ್ಲಿಗೆ ಹೋಗಬೇಕಾದರೂ 'ದಾರಿ ಯಾವುದಯ್ಯಾ?' ಎಂದು ದಾಸರಪದ ಹಾಡಬೇಕಿಲ್ಲ.  ಗೂಗಲ್ ಇದೆಯಲ್ಲಾ ಇನ್ಯಾಕೆ ಚಿಂತೆ?  

ಈ ಗೂಗಲ್ ಎಂಬ ಸುಲಭಸಾದ್ಯತೆಯ ಅಸಾಮಾನ್ಯತೆಗೆ, ಇಂತಹ ಸೃಷ್ಟಿಯನ್ನು ಯೋಚಿಸಿದಾಗ ಮನುಷ್ಯನಿಗಿರುವ ಅಪರಿಮಿತ ಸೃಷ್ಟಿ ಸಾಧ್ಯತೆಗಳಿಗೆ, ಇಂತಹ ಏನನ್ನು ಬೇಕಾದರೂ ಸೃಷ್ಠಿಯನ್ನು ಮಾಡಲು ಸಮಗ್ರತೆಯ ಸೃಷ್ಠಿಕರ್ತ ನೀಡಿರುವ ಸ್ವಾತಂತ್ರ್ಯಕ್ಕೆ  ಮೆಚ್ಚುಗೆ ಮತ್ತು ವಂದನೆಗಳನ್ನು ಸೂಚಿಸುತ್ತಾ ಈ ವಿಶ್ವಪ್ರಿಯ ಗೂಗಲ್ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಸಲ್ಲಿಸೋಣ.

Tag: Googleಕಾಮೆಂಟ್‌ಗಳಿಲ್ಲ: