ಗುರುವಾರ, ಜನವರಿ 21, 2016

ಮಹಾನ್ ನೃತ್ಯ ಕಲಾವಿದೆ ಮೃಣಾಲಿನಿ ಸಾರಾಭಾಯಿ ನಿಧನ

 ಮೃಣಾಲಿನಿ ಸಾರಾಭಾಯಿ

ಪ್ರಖ್ಯಾತ ನೃತ್ಯ ಕಲಾವಿದೆ ಮೃಣಾಲಿನಿ ಸಾರಾಭಾಯಿ ತಮ್ಮ 97ನೇ ವಯಸ್ಸಿನಲ್ಲಿ ಅಹಮದಾಬಾದಿನಲ್ಲಿ ನಿಧನರಾಗಿದ್ದಾರೆ.  ಹಿರಿಯ ವಯಸ್ಸಿನ  ಸಂಬಂಧಿತಾವಾಗಿ ಕೆಲಕಾಲ  ಕಾಯಿಲೆಯಿಂದ ಬಳಲುತ್ತಿದ್ದ ಮೃಣಾಲಿನಿ ಅವರು ಹಲವು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಭರತನಾಟ್ಯಂ, ಕಥಕ್ಕಳಿ, ಮೋಹಿನಿಯಾಟ್ಟಂ ನೃತ್ಯ ಪ್ರಕಾರಗಳಲ್ಲಿ ಪ್ರಸಿದ್ಧಿ ಪಡೆದಿದ್ದ ಮೃಣಾಲಿನಿ ಅವರು ರಬೀಂದ್ರನಾಥ ಠಾಗೂರರ  ಮಾರ್ಗದರ್ಶನದಲ್ಲಿ  ಶಾಂತಿ ನಿಕೇತನದಲ್ಲಿ  ವಿದ್ಯಾರ್ಥಿನಿಯಾಗಿದ್ದರು. 

ಪಾಲಕ್ಕಾಡ್ ಆನಕ್ಕರ ವಡಕ್ಕತ್ ತರವಾಡು ಮನೆಯ ಡಾ. ಸ್ವಾಮಿನಾಥನ್ ಮತ್ತು ಅಮ್ಮ ಸ್ವಾಮಿನಾಥನ್ ಮಗಳಾಗಿರುವ ಮೃಣಾಲಿನಿ, ಐಎನ್‌ಎ ಸೇನೆಯಲ್ಲಿದ್ದ ಕ್ಯಾಪ್ಟನ್ ಲಕ್ಷ್ಮಿ ಅವರ ಸಹೋದರಿ.  ಬಾಹ್ಯಾಕಾಶ ಸಂಶೋಧನೆಯ ಪಿತಾಮಹರಾದ  ವಿಜ್ಞಾನಿ ವಿಕ್ರಂ ಸಾರಾಭಾಯಿ ಅವರೊಡನೆ ಮೃಣಾಲಿನಿ  ಸಾರಾಭಾಯಿ ಅವರ ವಿವಾಹ ನಡೆದಿತ್ತು.   ಮತ್ತೊವ್ರ ಪ್ರಸಿದ್ಧ ನೃತ್ಯ ಕಲಾವಿದೆ ಮಲ್ಲಿಕಾ ಸಾರಾಭಾಯಿ ಈ ದಂಪತಿಗಳ ಪುತ್ರಿ.   ಮೃಣಾಲಿನಿ ಅವರು  ನೃತ್ಯಕಲೆಯಲ್ಲಷ್ಟೇ ಅಲ್ಲದೆ  ಕವಯತ್ರಿಯಾಗಿ, ಬರಹಗರ್ತಿಯಾಗಿ  ಹಾಗೂ ಸಮಾಜಪರ ಹೋರಾಟದ ನಿಲುವುಗಳಿಂದ ಸಹಾ  ಸುದ್ಧಿಯಲ್ಲಿದ್ದರು.   

ಭಾರತದ ಶಾಸ್ತ್ರೀಯ ನೃತ್ಯಕಲೆಯನ್ನು ಜಗತ್ತಿಗೆ ಪರಿಚಯಿಸಿ, ಅದರ ಮಹತ್ವನನ್ನು ಸಾರಿದ ಮಹಾನ್ ಪ್ರತಿಭೆ ಮೃಣಾಲಿನಿ. 1949ರಲ್ಲಿ ಅಹಮ್ಮದಾಬಾದ್‌ನಲ್ಲಿ ದರ್ಪಣಂ ಎಂಬ ಕಲಾಕೇಂದ್ರವನ್ನು ಸ್ಥಾಪಿಸುವ ಮೂಲಕ ನೃತ್ಯ ಕಲೆಯ ಕಂಪನ್ನು ಪಸರಿಸಿದ್ದರು.


1992ರಲ್ಲಿ ಭಾರತ ಸರ್ಕಾರ ಇವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು.  ಈ ಮಹಾನ್ ಕಲಾಚೆತನದ ಆತ್ಮಕ್ಕೆ ಶಾಂತಿ ಸಿಗಲಿ. 

Tag: Mrinalini Sarabhai


ಕಾಮೆಂಟ್‌ಗಳಿಲ್ಲ: