ಭಾನುವಾರ, ಡಿಸೆಂಬರ್ 25, 2016

ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ

ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ

ನಮ್ಮ ಕಾಲಮಾನದಲ್ಲಿ ನಾವು ಕಂಡ ಶ್ರೇಷ್ಠ ರಾಜಕಾರಣಿ, ಪ್ರಧಾನಮಂತ್ರಿಕವಿ, ವಾಗ್ಮಿ, ಸಹೃದಯಿ, ಮಾನವತಾವಾದಿ, ನಿಷ್ಠಾವಂತ ಕಾರ್ಯಕರ್ತ, ಸರಳಜೀವಿ ಅಟಲ್ ಬಿಹಾರಿ ವಾಜಪೇಯಿ.  ಇಂದು ಅವರ 92ನೇ ಜನ್ಮದಿನ.  ಅವರೊಬ್ಬ ಅಪೂರ್ವ ಭಾರತರತ್ನ.

ವಾಜಪೇಯಿ ಅವರಿಗೆ ಹಿರಿತನದಲ್ಲಿನ ಬದುಕು ಯಾವುದೇ ನೋವಿಲ್ಲದಂತೆ ಸಹ್ಯವಾಗಿ ಶಾಂತಿಯುತವಾಗಿರಲಿ ಎಂಬುದು ಅವರ ಅಭಿಮಾನಿಗಳೆಲ್ಲರ ಆಶಯ.  ಅಂತೆಯೇ ಈ ಮಹಾತ್ಮನ ಆಶೀರ್ವಾದ ಈ ದೇಶದ ಸಕಲ ಜನರ ಮೇಲೂ ಇರಲಿ.  ಇಂತಹ ಮಹಾತ್ಮರು ಈ ದೇಶದಲ್ಲಿ ಹೆಚ್ಚು ಹೆಚ್ಚು ಜನ್ಮ ತಾಳುವಂತಾಗಲಿ.  ಅವರಲ್ಲಿದ್ದ ಒಳ್ಳೆಯತನ, ಸಾಮರ್ಥ್ಯ, ಸಂಕಲ್ಪ ಶಕ್ತಿ ನಮ್ಮಲ್ಲೂ ಕಿಂಚಿತ್ತಾದರೂ ಮೂಡಲಿ.

Tag: Atal Bihari Vajpayee

ಕಾಮೆಂಟ್‌ಗಳಿಲ್ಲ: