ಭಾನುವಾರ, ಡಿಸೆಂಬರ್ 23, 2018

ಶ್ಯಾಮಲಾ ಜಾಗೀರ್ದಾರ್

ಶ್ಯಾಮಲಾ ಜಾಗೀರ್ದಾರ್ ಇನ್ನಿಲ್ಲ

ಹಿರಿಯ ಸುಗಮ ಸಂಗೀತ ಕಲಾವಿದೆ ಶ್ಯಾಮಲಾ ಜಾಗೀರ್ದಾರ್ ಅವರು  ದಿನಾಂಕ 21.12.2018ರಂದು  ನಿಧನರಾಗಿದ್ದಾರೆ.

1941ರ ವರ್ಷದಲ್ಲಿ ಮೈಸೂರಿನಲ್ಲಿ ಜನಿಸಿದ  ಶ್ಯಾಮಲಾ ಜಾಗೀರ್ದಾರ್ ಅವರು ತಮ್ಮ ಏಳನೆಯ ವಯಸ್ಸಿನಲ್ಲೇ ಹಿಂದೂಸ್ಥಾನಿ ಸಂಗೀತದ ಕಲಿಕೆ ಆರಂಭಿಸಿದರು.  ಮುಂದೆ ಆರು ದಶಕಗಳ ಕಾಲ ಅವರ ಸಂಗೀತ, ಅದರಲ್ಲೂ ವಿಶೇಷವಾಗಿ ಸುಗಮ ಸಂಗೀತ  ನಾಡಿನೆಲ್ಲೆಡೆಯಲ್ಲದೆ, ಹೊರನಾಡಿನಲ್ಲೂ ಪಸರಿಸಿತ್ತು. 

ಸುಗಮ ಸಂಗೀತ ಸಮ್ಮೇಳನದ ಅಧ್ಯಕ್ಷತೆ, ಸುಗಮ ಸಂಗೀತ ಕ್ಷೇತ್ರದ ಅತ್ಯುನ್ನತ ಪುರಸ್ಕಾರವಾದ  ‘ಸಂತ ಶಿಶುನಾಳ ಪ್ರಶಸ್ತಿ’, ರಾಜ್ಯೋತ್ಸವ ಪ್ರಶಸ್ತಿ,  ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪುರಸ್ಕಾರಗಳೂ ಸೇರಿದಂತೆ ಅನೇಕ ಗೌರವಗಳು ಶ್ಯಾಮಲಾ ಜಾಗೀರ್ದಾರ್ ಅವರನ್ನು ಅರಸಿ ಬಂದಿದ್ದವು. 

ಅಗಲಿದ ಕಲಾಚೇತನಕ್ಕೆ ನಮ್ಮ ನಮನ.

Shyamala Jagirdar

ಕಾಮೆಂಟ್‌ಗಳಿಲ್ಲ: