ಸುಭಾಷಿತ"ಬದುಕೆಂಬುದಕ್ಕೆ ಅರ್ಥ ಇಷ್ಟೇ,   ಒಂದೋ ಅದು ಧೈರ್ಯದಿಂದ  ಎದುರಿಸಬೇಕಾದ ಸವಾಲು, ಇನ್ನೊಂದೋ ಅದು ಏನೂ ಅಲ್ಲ.  ನಮಗೆ ಯಾವುದು ಬೇಕೋ  ಅದನ್ನು ಆರಿಸಿಕೊಳ್ಳಬಹುದು."

-ಹೆಲೆನ್ ಕೆಲರ್

ಕೋsತಿಭಾರಃ ಸಮರ್ಥಾನಾಂ ಕಿಂ ದೂರಂ ವ್ಯವಸಾಯಿನಾಮ್
ಕೋ ವಿದೇಶಃ ಸವಿದ್ಯಾನಾಂ  ಕಃ ಪರಃ ಪ್ರಿಯವಾದಿನಾಮ್

ಸಮರ್ಥರಾದವರಿಗೆ ಯಾವುದು ಭಾರದುಡಿಯುವ ಮನುಷ್ಯನಿಗೆ ದೂರ ಯಾವುದಿದೆ?
ವಿದ್ಯೆ ಇದ್ದವನಿಗೆ ಯಾವ ದೇಶವಾದರೇನುಪ್ರೀತಿಯಿಂದ ಮಾತನಾಡುವವನಿಗೆ ಶತ್ರುಗಳಾದರೂ ಎಲ್ಲಿಂದಇಂಥ ಜನರು ಎಲ್ಲಿದ್ದರೂ ಸಹ ಸುಖದಿಂದ ಬದುಕಬಲ್ಲರು.

-ಹಿತೋಪದೇಶ.  

"ಲೋಕೋದ್ಧಾರಕ್ಕಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಯಾರೂ ತಿಳಿಯಬಾರದು. ನಮ್ಮ ಪ್ರಯತ್ನ ನಮ್ಮ ಏಳಿಗೆಗಾಗಿ; ನಮ್ಮ ಬಾಳಿನ ಸಫಲತೆಗಾಗಿ."


-ಡಿವಿಜಿ

ಆಕೆಯು ಗುರುವನ್ನು ಕೇಳಿದಳು: "ನಿಮ್ಮ ಹಾಗೆ ನಾನು ಆಗುವುದು ಹೇಗೆ?" ಎಂದು.

ಅದಕ್ಕೆ ಗುರು ಉತ್ತರಿಸಿದರು: "ನನ್ನ ಹಾಗೆ ಆಗುವುದಕ್ಕೆ ಬಹಳ ಉತ್ತಮ ಉಪಾಯವೆಂದರೆ "ನಿನ್ನ ಹಾಗೆ ನೀನು ಆಗುವುದು".  "


- ಅಲನ್ ಕೊಹೆನ್

ಭವ್ಯ ಸಾಗರ.  ಅಲ್ಲೊಂದು ಮೀನು ಕುಟುಂಬ.  ಅದರಲ್ಲಿ ಹತ್ತಾರು ಮೀನುಗಳು.  ಒಂದು ಮರಿ ಮೀನು.  ಒಮ್ಮೆ ಸಾಗರದಲ್ಲಿ ಅದು ತೇಲಾಡುತ್ತಾ ದೂರ ಹರಿದು ಹೋಯಿತು.  ತಿರುಗಿ ಬರುವುದರಲ್ಲಿ ಅದರ ಕುಟುಂಬದವರು ಯಾರೂ ಇರಲಿಲ್ಲ.  ಅವರೆಲ್ಲರೂ ಮೀನುಗಾರನ ಬಲೆಗೆ ಬಿದ್ದುಹೋಗಿದ್ದರು.  ತಾಯಿ ತಂದೆ, ಬಂಧು-ಬಳಗ ಎಲ್ಲವನ್ನೂ ಕಳೆದುಕೊಂಡು ಮರಿಮೀನು ದುಃಖಿಸತೊಡಗಿತು.  ನನಗೆ ಯಾರೂ ಇಲ್ಲ.  ನಾನು ಅನಾಥನಾದೆಎಂದು ಅದು ಗೋಳಿಡತೊಡಗಿತು. 

ಅಷ್ಟರಲ್ಲಿ ನಾನಿದ್ದೇನೆ, ಚಿಂತಿಸಬೇಡಎಂಬ ಧ್ವನಿ ಹತ್ತಿರದಲ್ಲೇ ಕೇಳಿಬಂತು.

ಮರಿಮೀನು ಸಂತಸದಿಂದ ಯಾರವರು?’ ಎಂದು ಪ್ರಶ್ನಿಸಿತು.

ನಾನು ಸಾಗರ!ಎಂದಿತು ಆ ಧ್ವನಿ.

ನೀನು ಎಲ್ಲಿರುವೆ?’ ಎಂದು ಮತ್ತೆ ಕೇಳಿತು ಮೀನು.

ನೀನು ಇರುವಲ್ಲಿಯೇ ನಾನು ಇರುವೆ.  ನೀನು ಜನಿಸಿದ್ದು, ಬಾಳಿ ಬೆಳೆಯುತ್ತಿರುವುದು ನನ್ನಲ್ಲಿಯೇ!  ನಾನು ಸದಾ ನಿನ್ನನ್ನು ರಕ್ಷಿಸುತ್ತೇನೆ, ಚಿಂತಿಸದಿರು!ಎಂದಿತು ಸಾಗರ.

ಅದನ್ನು ಕೇಳಿದ ಮರಿಮೀನು ಮತ್ತೆ ಉತ್ಸಾಹದಿಂದ ಬದುಕಲು ಅಣಿಯಾಯಿತು. 

ದಯಾಸಾಗರನಾದ ದೇವನು ಸಕಲ ಜೀವರಾಶಿಯನ್ನೂ ಪೊರೆಯುವನು.  ಅವನೇ ನಮ್ಮೆಲ್ಲರ ಶಾಶ್ವತ ಮಿತ್ರನು!!


(ಶ್ರೀ ಸಿದ್ದೇಶ್ವರ ಸ್ವಾಮಿ, ಜ್ಞಾನಯೋಗಾಶ್ರಮ, ವಿಜಾಪುರ)

ನಿಷ್ಠುರ ಸತ್ಯ!

ಹಣವಿಲ್ಲದ ವ್ಯಕ್ತಿಯ ಸಂಗವನ್ನು ಸಂಗಾತಿ, ಸ್ನೇಹಿತರು ಮತ್ತು ಹಿತೈಷಿಗಳು ಸದ್ದಿಲ್ಲದೆ ತೊರೆಯುತ್ತಾರೆ. ಹಣ ಸಂಪಾದನೆ ಮಾಡಿದ ತಕ್ಷಣವೇ ಅವರೆಲ್ಲರೂ ಮರಳಿ ಬರುತ್ತಾರೆ. ಈ ಜಗದಲ್ಲಿ ಹಣವೇ ಮನುಜನ ನಿಜ ಸ್ನೇಹಿತ.


- ಚಾಣಕ್ಯ

ದುಃಖವೆಂಬುದು ದುರಾಸೆಯ ಫಲವು

-ಗೌತಮ ಬುದ್ಧ

(ಹಿಂದೂ ಚರಿತ್ರಸಾರ - ಡಾ. ಎಂ. ಎಚ್. ಕೃಷ್ಣ)

ಬ್ಯಾಂಕಿನಲ್ಲಿರುವ ಹಣ ನಳಿಕೆಯಲ್ಲಿರುವ ಟೂಥ್ಪೇಸ್ಟಿನಂತೆ.  ತೆಗೆಯುವುದು ಸುಲಭ.  ತುಂಬುವುದು ಬಲು ಕಠಿಣ.


-ಅರ್ಲ್ ವಿಲ್ಸನ್, ಪತ್ರಕರ್ತ ಮತ್ತು ಬರಹಗಾರ

ನಗುನಗುತ್ತಾ ಕೆಲಸ ಮಾಡು. ನಗುನಗುತ್ತಾ ಬೇರೆಯವರೂ ಕೆಲಸ ಮಾಡುವಂತೆ ನೋಡಿಕೋ.


-ಎಂ.ಆರ್.ಶ್ರೀನಿವಾಸಮೂರ್ತಿ

ದುಃಖ ಎನ್ನುವುದು ಸೋಮಾರಿತನದ ಇನ್ನೊಂದು ಮುಖ.

-ಫ್ರಾನ್ಸಿಸ್ ಬೇಕನ್

ಪ್ರಾರ್ಥನೆ

ಪ್ರಾರ್ಥನೆಯೆಂದರೆ ಭಗವಂತನನ್ನು ಬರೀ ಕೇಳಿಕೊಳ್ಳುವುದಲ್ಲ; ಅದು ಜೀವಿಯ ಕಾತರದ ಸಂಕೇತ.  ನಮ್ಮ ದೌರ್ಬಲ್ಯಗಳನ್ನು ನಿತ್ಯವೂ ಒಪ್ಪಿಕೊಳ್ಳುವುದು.  ಪ್ರಾರ್ಥನೆಯಲ್ಲಿ ಹೃದಯವಿಲ್ಲದ ಬರಡು ಮಾತುಗಳಿಗಿಂತ, ಮಾತುಗಳಿಲ್ಲದ ಕಾತರ ಹೃದಯವನ್ನು ಇಟ್ಟುಕೊಂಡಿರುವುದು ಒಳ್ಳೆಯದು.

-ಮಹಾತ್ಮ ಗಾಂಧಿ

ನೀವು ಸಂಕಷ್ಟದ ಸಮಯದಲ್ಲಿ ಪ್ರಾರ್ಥಿಸುತ್ತೀರಿ.  ಅವಶ್ಯಕತೆ ಇದ್ದಾಗ ಮಾತ್ರ ಪ್ರಾರ್ಥಿಸುತ್ತೀರಿ.  ಆದರೆ ನೀವು ಸಂತೋಷದಲ್ಲಿ ಮುಳುಗೇಳುತ್ತಿರುವಾಗಲೂ ಪ್ರಾರ್ಥಿಸಬೇಕುಸಂಪತ್ತು ಮತ್ತು ಸಮೃದ್ಧಿಯ ನಡುವೆಯೂ ಪ್ರಾರ್ಥಿಸಬೇಕು.

-ಖಲೀಲ್ ಗಿಬ್ರಾನ್

ಯಾವತ್ತೂ ಪ್ರಾರ್ಥನೆ ಮಾಡುವುದನ್ನು ಮರೆಯದಿರೋಣ.  ಭಗವಂತನು ಇದ್ದಾನೆ.  ಅವನು ಹತ್ತಿರದಲ್ಲಿಯೇ ಇದ್ದಾನೆ.  ಅವನು ನೈಜವಾಗಿದ್ದಾನೆ.  ಅವನಿಗೆ ನಮ್ಮ ಬಗ್ಗೆ ಅರಿವು ಇರುವುದು ಮಾತ್ರವಲ್ಲ, ಅವನು ನಮ್ಮನ್ನು ಖಂಡಿತ ರಕ್ಷಿಸುತ್ತಾನೆ, ಕೂಡ.  ಅವನು ನಮ್ಮ ತಂದೆ.  ಯಾರು ಅವನನ್ನು ಅನ್ವೇಷಿಸುತ್ತಾರೋ, ಅವರಿಗೆಲ್ಲರಿಗೂ ಅವನು ದೊರಕಬಲ್ಲ.

-ಗೋರ್ಡನ್ ಬಿ. ಹಿನ್ಕ್ಲಿ

ಪ್ರಾರ್ಥನೆಯ ಕಾರ್ಯವೆಂದರೆ ಭಗವಂತನ ಮೇಲೆ ಪ್ರಭಾವ ಬೀರುವುದಲ್ಲ, ಪ್ರಾರ್ಥನೆ ಮಾಡುವವನ ಸ್ವಭಾವವನ್ನು ಪರಿವರ್ತಿಸುವುದು.

-ಸೊರೆನ್ ಕೀರ್ಕ್ ಗಾರ್ಡ್

ನಾನು ದೇವರನ್ನು ನಂಬುವುದಿಲ್ಲ. ಏಕೆಂದರೆ ನಾನು ನೋಡಿಲ್ಲ. ನನಗೆ ಯಾವುದು ಗೊತ್ತಿಲ್ಲವೋ ಅದನ್ನು ನಂಬುವುದಿಲ್ಲ. ರಾಮಕೃಷ್ಣ ಪರಮಹಂಸರು ನಂಬಿದ್ದರು. ಅದನ್ನು ತಪಸ್ಸಿನಿಂದ ಕಂಡುಕೊಂಡರು. ನನಗೆ ರಾಮ ಎಂದರೆ ರಾಜಾ ರವಿವರ್ಮ ಅವರ ಚಿತ್ರ. ಕೃಷ್ಣ ಎಂದರೆ ಗುಬ್ಬಿ ವೀರಣ್ಣನವರ ಕೃಷ್ಣಲೀಲಾ ನೆನಪಿಗೆ ಬರುತ್ತದೆ. ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ನಾವು ನಂಬಿ ಬಂದಿದ್ದೇವೆ. ಆದರೆ, ಆ ರೀತಿ ಆಗಿಲ್ಲ. ನನಗೆ ಅನುಕೂಲವಾದಾಗ ಮಾತ್ರ ದೇವರನ್ನು ನಂಬುತ್ತೇನೆ ಎಂಬುದು ಸರಿಯಲ್ಲ.


-ಡಾ. ಕೆ. ಶಿವರಾಮ ಕಾರಂತರು


"ನೀನು ನಿನ್ನ ಆನಂದವನ್ನು ಹಿಂಬಾಲಿಸು....
 ಆಗ ನೋಡು, ಈ ಜಗವು, ಬರೀ ಗೋಡೆಗಳಿದ್ದೆಡೆಗಳಲ್ಲಿ ಕೂಡಾ  ನಿನಗಾಗಿ ತನ್ನ ಬಾಗಿಲುಗಳನ್ನು ತೆರೆಯುತ್ತದೆ.  (Follow your bliss and the universe will open doors where there were only walls.) 
ಜೋಸೆಫ್ ಕಾಂಪ್ಬೆಲ್. 

ನಮ್ಮ ನಾರಾಯಣ ಮೂರ್ತಿಯವರು  ತಮ್ಮ ಪುಸ್ತಕ 'A Better India A Better World' ಪುಸ್ತಕದಲ್ಲಿ ಈ ಮಾತು ತಮ್ಮ ಮೇಲೆ ಅಪಾರವಾಗಿ ಪ್ರಭಾವ ಬೀರಿದ್ದಾಗಿ ಹೇಳಿದ್ದಾರೆ.


ಆಪಲ್ ಸಂಸ್ಥೆಯ ಮಹಾನ್ ಸಾಧಕ ದಿವಂಗತ ಸ್ಟೀವ್ ಜಾಬ್ಸ್ ಕೂಡಾ ಇದನ್ನೇ ಹೀಗೆ ಹೇಳುತ್ತಾರೆ.  ಮೊದಲು ನಿನ್ನ ಪ್ರೀತಿ ಏನು, ನೀನು ಏನು ಇಷ್ಟ ಪಡ್ತೀಯ ಅದನ್ನು ಮೊದಲು ಕಂಡುಕೋ”. ( 'You've got to find what you love'.)

ನಮ್ಮ ಅರ್ಹತೆ ಎಷ್ಟೋ, ಅಷ್ಟೇ ಸಿಗುವ ವ್ಯವಸ್ಥೆಗೆ ಪ್ರಜಾಪ್ರಭುತ್ವ ಎಂದು ಹೆಸರು.


-ಜಾರ್ಜ್ ಬರ್ನಾಡ್ ಷಾ

ಹಣ ಎಂದರೆ ಉಪ್ಪು ಇದ್ದಂತೆ.  ಅದನ್ನು ತುಸುವೇ ನಾಲಿಗೆಯ ಮೇಲಿರಿಸಿಕೊಂಡರೆ ರುಚಿ, ಹೆಚ್ಚಾಗಿ ತಿಂದರೆ ದಾಹ.


-ಶಿವರಾಮ ಕಾರಂತರು

ಬೇರೆಯವರ ಬುದ್ಧಿವಾದಕ್ಕೆ ಕಿವಿಕೊಡುವ ಸದ್ಬುದ್ಧಿ ಇದ್ದರೆ ನಾವು ನಮ್ಮ ಜೀವನದಲ್ಲಿನ  ಎಷ್ಟೋ ಅನಾಹುತಗಳನ್ನು ತಪ್ಪಿಸಬಹುದು.


ಕೆ.ಪಿ.ಪೂರ್ಣಚಂದ್ರ ತೇಜಸ್ವಿ

ಧ್ಯಾನವು ಅನಂತ ಆನಂದಕ್ಕೆ ಇರುವ ಹೆಬ್ಬಾಗಿಲು.

- ಸ್ವಾಮಿ ವಿವೇಕಾನಂದರುದೊಡ್ಡದಾಗಿ ಹೊತ್ತಿ ಉರಿಯುವ ದೀಪ ಬಹಳ ಹೊತ್ತು ಬೆಳಗುವುದಿಲ್ಲ. ನಂದಾದೀಪದ ಹಾಗೆ ಸಣ್ಣಗೆ, ಮಿನುಗುತ್ತಾ, ಬೆಳಕು ನೀಡುತ್ತಾ ಇರಬೇಕು.


-ತರಾಸು

ಎದೆಗೆ ಬಿದ್ದ ಬೆಂಕಿಯ ಬೆಳಕಿನಲ್ಲೇ
ಬದುಕಿನರ್ಥವ ಹುಡುಕಬೇಕು


-ಶಶಿಕಲಾ ವೀರಯ್ಯಸ್ವಾಮಿ

ಕೆಲವೊಮ್ಮೆ ಒಂದು ಸಾಲು
ಒಂದು ಮಂತ್ರ
ಒಂದು ಪದ
ತೆಗೆಯಬಹುದು ಸೌಭಾಗ್ಯದ ಕದ


-ಬಿ. ಆರ್ ಲಕ್ಷ್ಮಣರಾವ್
ಛಾಯಾಚಿತ್ರ: ವಿ. ಡಿ. ಭಟ್, ಸುಗಾವಿ
ಮಕ್ಕಳ ಸಂಗದೊಳೆಚ್ಚರಗೊಳ್ಳಲಿ
ಆನಂದದ ಆ ದಿವ್ಯ ಶಿಶು


-ಕುವೆಂಪು.


ಅಂದಂದಿನ ಕೆಲಸವನ್ನು ಅಂದಂದೇ ಮಾಡಿ. ಅದರ ಕುರಿತು ಬಹಳ ಚಿಂತೆ ಮಾಡದೆ ಇರಬೇಕು. ಇದೇ ಒಳ್ಳೆಯ ಜೀವನ.


ಮಾಸ್ತಿ ವೆಂಕಟೇಶ ಅಯ್ಯಂಗಾರ್. 

ಯಾವ ವ್ಯಕ್ತಿ ಕಡೆಯವರೆಗೆ ತನ್ನ ಶಿಶುಸಹಜ ಸ್ವಭಾವವನ್ನು ಉಳಿಸಿಕೊಂಡಿರುತ್ತಾನೋ ಆತನೇ ನೈತಿಕವಾಗಿ ಹಿರಿಯನೆನಿಸಿಕೊಳ್ಳುತ್ತಾನೆ 

- ತತ್ವಜ್ಞಾನಿ ಮೆನ್ಸಿಯಸ್

ಆತಂಕ, ಭಯ, ದೈನಂದಿನ ಪೈಪೋಟಿ, ಹಿಂದಿನ ಮೌಲ್ಯಗಳ ತಿರಸ್ಕಾರ ಮಾನವನನ್ನು ಮಾನವ ಪ್ರಾಣಿಯಾಗಿಸಿದೆ.


ಕೆ.ಎಸ್. ನಿಸಾರ್ ಅಹಮದ್

“ದೇಶ ತಮಗೇನು ಮಾಡಬಲ್ಲದು ಎಂದು ಕೇಳಬೇಡಿ.  ದೇಶಕ್ಕಾಗಿ ತಾವೇನು ಮಾಡಬಲ್ಲಿರಿ ಎಂಬುದನ್ನು ಕೇಳಿಕೊಳ್ಳಿ”

-ಜಾನ್ ಎಫ್ ಕೆನಡಿ

ಸನ್ಮಾನ, ಬಿರುದುಗಳು ಸಾಮಾನ್ಯರನ್ನು ಎತ್ತಿ ತೋರಿಸುತ್ತವೆ’; ಅಸಾಮಾನ್ಯರಿಗೆ ಮುಜುಗರ ಉಂಟುಮಾಡುತ್ತವೆ; ಅಯೋಗ್ಯರಿಂದ ಗೌರವ ಕಳೆದುಕೊಳ್ಳುತ್ತವೆ.


ಜಾರ್ಜ್‌ ಬರ್ನಾರ್ಡ್‌ ಷಾಅನುಯಾಯಿಗಳನ್ನು ನೋಡಿ ನಾವು ಮತದ ಬಗ್ಗೆ ನಿರ್ಣಯ ನೀಡಬಾರದು.  ಮತವನ್ನು ನೋಡಿ ಅನುಯಾಯಿಗಳನ್ನು ನಿರ್ಧರಿಸಬೇಕು.  ಮನಸ್ಸನ್ನು ವಿಶಾಲಗೊಳಿಸುವ ಎಲ್ಲವನ್ನೂ ಸ್ವೀಕರಿಸಬೇಕು, ಸಂಕುಚಿತಗೊಳಿಸುವುದನ್ನು ಬಿಟ್ಟುಬಿಡಬೇಕು.”

- ಸು. ರಂ. ಎಕ್ಕುಂಡಿ

ಆತ್ಮವಿಶ್ವಾಸದಂತಹ ಮಿತ್ರ ಬೇರೆ ಇಲ್ಲ.

ಸ್ವಾಮಿ ವಿವೇಕಾನಂದ

ಈ ಪ್ರಪಂಚದಲ್ಲಿ ಒಳ್ಳೆಯದನ್ನೆಲ್ಲಾ ಹೇಳಿ ಆಗಿದೆ. ಉಳಿದಿರುವುದು ಆಚರಣೆ ಮಾತ್ರ.

ಸಾಕ್ರೆಟಿಸ್ಒಬ್ಬ ಪರಿಪೂರ್ಣ ವ್ಯಕ್ತಿಯ ಮನಸ್ಸು ಕನ್ನಡಿಯಂತೆ. ಎಲ್ಲವನ್ನೂ ಪ್ರತಿಬಿಂಬಿ­ಸುತ್ತದೆ. ಯಾವುದನ್ನೂ ತಿರಸ್ಕರಿಸುವುದಿಲ್ಲ. ಎಲ್ಲವನ್ನೂ ಸ್ವೀಕರಿಸುತ್ತದೆ. ಆದರೆ ಏನನ್ನೂ ಉಳಿಸಿಕೊಳ್ಳುವುದಿಲ್ಲ.


- ಸ್ವಾಮಿ ಚಿನ್ಮಯಾನಂದ

ವಿವೇಕಿಯಾದ ಮನುಷ್ಯ ಬೇರೆಯವರ ತಪ್ಪನ್ನು ಕಂಡು ತನ್ನ ತಪ್ಪನ್ನು ಸರಿಪಡಿಸಿಕೊಳ್ಳುತ್ತಾನೆ.

ಸ್ವಾಮಿ ವಿವೇಕಾನಂದನಮ್ಮ ಶತ್ರುಗಳನ್ನು ಮಿತ್ರರನ್ನಾಗಿ ಮಾಡಿದಾಗ ಶತ್ರುಗಳನ್ನು ನಾಶ ಮಾಡಿದಂತೆ. ಆದ್ದರಿಂದ ಸೋಲು ಗೆಲುವು ಬಹಳಷ್ಟು ನಮ್ಮ ಕೈಯಲ್ಲಿಯೇ ಇದೆ.

ಅಬ್ರಹಾಂ ಲಿಂಕನ್
ಏನು ಬೇಡ ಎಂದು ಎಲ್ಲರಿಗೂ ಗೊತ್ತು.  ಏನುಬೇಕೆಂದು ತಿಳಿದವರು ಅಲ್ಪ ಮಂದಿ. ಅಲ್ಪವಲ್ಲದ್ದನ್ನು ಹುಡುಕುವರಂತೂ ಅತ್ಯಲ್ಪ.   ಹುಡುಕುವುದರಲ್ಲಂತೂ ಸರ್ವರೂ ಸದಾನಿರತರು.  

ಎಡರು ತೊಡರುಗಳೆಂದರೆ ನಾವು ನಮ್ಮ ದೃಷ್ಟಿಯನ್ನು ನಮ್ಮ ಗುರಿಯತ್ತ ಬಿಟ್ಟು ಬೇರೆಡೆಗೆ ಹೊರಳಿಸಿದಾಗ ಮಾತ್ರ ಕಾಡುವ ಭಯಾನಕಗಳು.


-ಹೆನ್ರಿ ಫೋರ್ಡ್
5 ಕಾಮೆಂಟ್‌ಗಳು:

Unknown ಹೇಳಿದರು...

really good proverbs.... i like it.. tumba danyavadagalu.

Unknown ಹೇಳಿದರು...

tumba danyavadagalu..... e website tumba chennagi moodi baruthidi...

Unknown ಹೇಳಿದರು...

Thumba danyavadagalu olleya mahithigagi,
Kantharaju BS.

Unknown ಹೇಳಿದರು...

Thanks you sir good valuable information.

Chand ಹೇಳಿದರು...

e website tumba chennagi moodi baruthidi and also good valuable information.
Thanks u so much..