ಸ್ವಾಗತ
‘ಸಂಸ್ಕೃತಿ ಸಲ್ಲಾಪ’  ತಾಣಕ್ಕೆ ಆತ್ಮೀಯ ಸುಸ್ವಾಗತ.

ಸಾಮಾಜಿಕ ಜೀವನದಲ್ಲಿನ  ವಿವಿಧ ಸಾಂಸ್ಕೃತಿಕ ಸದಭಿರುಚಿಗಳತ್ತ ಆತ್ಮೀಯವಾದ ಸಲ್ಲಾಪಕ್ಕೆ ಆಸ್ಪದ ನೀಡುವುದು ಈ ತಾಣದ ಆಶಯ.  ನಮ್ಮ ಸಾಮಾಜಿಕ ಜೀವನದಲ್ಲಿ ಕಂಡು ಬರುವ ಹಲವು ಪ್ರಸಿದ್ಧ ಘಟನೆಗಳು, ವ್ಯಕ್ತಿತ್ವಗಳು, ಸಾಧನೆಗಳು, ಕಲಾವಂತಿಕೆಗಳು, ನೈಪುಣ್ಯತೆಗಳು, ಸಜ್ಜನಿಕೆಗಳು ಇತ್ಯಾದಿ ಇತ್ಯಾದಿಗಳು ಒಂದಿಲ್ಲೊಂದು ರೀತಿಯಲ್ಲಿ ನಮ್ಮ ಗಮನಕ್ಕೆ ಬಂದಿರುತ್ತವೆ.  ಇಂತಹ ಅಂಶಗಳು ಕಾಲಾನುಕ್ರಮದಲ್ಲಿ ನಮ್ಮ ಆಂತರ್ಯದಲ್ಲಿ ಸುಪ್ತವಾಗಿ ಅಡಗಿಕೊಂಡಿದ್ದು, ಅವುಗಳ ಬಗ್ಗೆ ಮಾಧ್ಯಮಗಳ ಮೂಲಕವೋ, ಇತರರೊಂದಿಗೆ ಒಂದಿನಿತು ಮೆಲುಕು ಹಾಕುವಂತಹ ಸಂದರ್ಭಗಳೋ ಬಂದಾಗ ನಮಗೆ ಮುದ ನೀಡುತ್ತಿರುತ್ತವೆ.

ಆದರೆ ಇಂದಿನ ಬದುಕು ಸೃಷ್ಟಿಸುತ್ತಿರುವ ಯಾಂತ್ರಿಕತೆ; ವ್ಯಾವಹಾರಿಕತೆಯ ಮಾಧ್ಯಮ ಪ್ರಸರಣಗಳಲ್ಲಿರುವ ಏಕತಾನತೆ;  ವಿಭಿನ್ನ ಸಂಸ್ಕೃತಿ, ಪರಿಸರ, ಮನೋಭಾವಗಳೊಡನೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ ಮುಂತಾದವುಗಳಿಂದ, ಇಂದಿನ ದೈನಂದಿನ ಬದುಕು, ನಮ್ಮಲ್ಲಿ ಅಂತರಂಗಿಕವಾಗಿ ಹುದುಗಿಕೊಂಡಿರುವ ಸುಪ್ತತೆಗಳಿಗೆ ಆತ್ಮೀಯ ಸ್ಪರ್ಶಗಳೇ ದೊರಕದಂತಹ ಅನಾಥ ಪ್ರಜ್ಞೆಗಳನ್ನು ಹುಟ್ಟುಹಾಕಿಬಿಡುತ್ತಿವೆ.   ಈ ನಿಟ್ಟಿನಲ್ಲಿ ಅಂತರ್ಜಾಲ ಸಂಪರ್ಕಗಳು ಇಂದಿನ ಯುಗದಲ್ಲಿ ಒಂದಿಷ್ಟು ಆಶಾದಾಯಕ ಸಾಧ್ಯತೆಗಳನ್ನು ನಮ್ಮ ಮುಂದೆ ತೆರೆದಿಟ್ಟಿವೆ.  ಬದುಕು ತರುವ ಹತ್ತು ಹಲವು ನಿಟ್ಟಿನ ಯಾಂತ್ರಿಕತೆ, ಅಶಿಸ್ತು, ಬೇಡದ ಜಂಜಾಟ ತಲೆನೋವುಗಳಿಗೆ ಅಂತರ್ಜಾಲ ಸಂಪರ್ಕಗಳೂ ಹೆಚ್ಚು ಹೆಚ್ಚು ಉಪಯೋಗಿಸಲ್ಪಡುತ್ತಿವೆ ಎಂಬುದು ನಿಜವಾದರೂ, ಈ ವ್ಯವಸ್ಥೆಯನ್ನು ಸದುಪಯೋಗಕ್ಕೆ ಬಳಸಿಕೊಂಡಲ್ಲಿ ಅದು, ನಮ್ಮ ಬದುಕಿಗೆ ಒಂದಿಷ್ಟು ಉತ್ತಮ ಚಿಂತನ ಮಂಥನದ ಹವೆಯನ್ನೂ, ಉತ್ಸಾಹವನ್ನೂ, ಇವು ನಮ್ಮ ಬದುಕಿಗೆ ನೀಡಬಲ್ಲದು ಎಂಬುದರಲ್ಲಿ ಸಂದೇಹವಿಲ್ಲ.  ಇಂಥಹ ಒಂದು ಆಶಯ ಇಲ್ಲಿನ ಸಂಸ್ಕೃತಿ ಸಲ್ಲಾಪದಲ್ಲಿದೆ.

'ಸಂಸ್ಕೃತಿ ಸಲ್ಲಾಪ' ತಾಣದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಸಾಹಿತ್ಯ, ಸಿನಿಮಾ, ಸಂಗೀತ, ನಾಟಕ,  ನೃತ್ಯ, ಕಲೆ, ಕ್ರೀಡೆ, ಆಧ್ಯಾತ್ಮ  ಹೀಗೆ ಹಲವು ವಿಚಾರಗಳ ಹರವು ಇದೆ.  600ಕ್ಕೂ ಹೆಚ್ಚು ವ್ಯಾಪ್ತಿಯ ಗೀತೆಗಳಿವೆ.  

ಇಲ್ಲಿನ ಸಲ್ಲಾಪಗಳು  ಸೆಪ್ಟೆಂಬರ್ ೧೪, ೨೦೧೦ರ ವರ್ಷದಿಂದ ಫೇಸ್ಬುಕ್ ಮಾಧ್ಯಮದಲ್ಲಿರುವ ನಮ್ಮ ಕನ್ನಡ ಸಂಪದಪುಟದಲ್ಲಿ ಒಂದೊಂದಾಗಿ ರೂಪುಗೊಂಡದ್ದಾಗಿವೆ.  ಫೇಸ್ಬುಕ್ ಮಾಧ್ಯಮದಲ್ಲಿ ಹಳೆಯ ಸಲ್ಲಾಪಗಳನ್ನು ಹುಡುಕುವುದಕ್ಕೆ ಇರುವ ಮಿತಿಗಳ ಹಿನ್ನೆಲೆಯಲ್ಲಿ ಇಂಥಹ ಒಂದು ತಾಣದ ನಿರ್ಮಾಣದ ಅವಶ್ಯಕತೆಯನ್ನು ಬಹಳಷ್ಟು ಆತ್ಮೀಯ ಬಂಧುಗಳು ಪದೇ ಪದೇ ಗಮನಕ್ಕೆ ತಂದ  ದೆಸೆಯಿಂದ ಸೆಪ್ಟೆಂಬರ್ 14, 2013ರ ದಿನಾಂಕದಿಂದ ಈ ತಾಣ ಮೂಡಿಬಂದಿದೆ. ಇದು ನಿಂತ ನೀರಾಗದೆ ಸಕ್ರಿಯವಾಗಿರುತ್ತದೆ ಎಂಬ ನಂಬಿಕೆಯಿದೆ.  

ಈ ತಾಣವನ್ನು ಅಂತರಜಾಲದಲ್ಲಿ  


ಅಥವ


ವಿಳಾಸಗಳ ಮೂಲಕ ತಲುಪಬಹುದಾಗಿದೆ.

ತಮ್ಮ ಸಹಕಾರ, ಪ್ರೋತ್ಸಾಹ, ಬೆಂಬಲ, ಭಾಗವಹಿಕೆ, ಸದುಪಯೋಗ ಇವೆಲ್ಲವುಗಳಿಂದ ಈ ಸಂಸ್ಕೃತಿ ಸಲ್ಲಾಪತಾಣವನ್ನು ಶಕ್ತಿಯುತವಾಗಿ ಮಾಡುವುದು ನಿಮ್ಮ ಕೈಯಲ್ಲಿದೆ.  76 ಕಾಮೆಂಟ್‌ಗಳು:

mudgal venkatesh ಹೇಳಿದರು...

Sir,
Your blog is an encyclopedia for Kannada language. It has so much incredible information. Congrats

mudgal venkatesh ಹೇಳಿದರು...

Sir,
your new blog is an encyclopedia for Kannada language. It is loaded with so much incredible information. Congratulations.

ತಿರು ಶ್ರೀಧರ ಹೇಳಿದರು...

ಧನ್ಯವಾದಗಳು ಮುದ್ಗಲ್ ವೆಂಕಟೇಶ್ ಸಾರ್

Ram Naresh Manchi ಹೇಳಿದರು...

ಅಭಿನಂದನೆಗಳು.. ಹೊಸ ಪ್ರಯತ್ನಕ್ಕೆ ಶುಭವಾಗಲಿ

Lakshmi Shrinath ಹೇಳಿದರು...

ನಿಜಕ್ಕೂ ಇದು ಕನ್ನಡದ ವಿಕಿಪೀಡಿಯ. ನೀವು ನಮಗೆ ನೀಡಿರುವ ಈ ಅತ್ಯಮೂಲ್ಯ ಕೊಡುಗೆಗೆ ನಾವು ಆಭಾರಿಗಳು. ಈ ಜಾಲತಾಣದಿಂದ ಖಂಡಿತ ನಮಗೆ ನೆರವಾಗಲಿದೆ.

sritri ಹೇಳಿದರು...

ಗಣೇಶ ಹಬ್ಬದ ಶುಭಾಶಯಗಳು! ಹೊಸ ತಾಣಕ್ಕೆ ಅಭಿನಂದನೆಗಳು! - ತ್ರಿವೇಣಿ

ತಿರು ಶ್ರೀಧರ ಹೇಳಿದರು...

ರಾಮ್ ನರೇಶ್ ಮಂಚಿ, ಲಕ್ಷ್ಮೀ ಶ್ರೀನಾಥ್, ಶ್ರೀತ್ರಿ ಅವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು

ಅನಾಮಧೇಯ ಹೇಳಿದರು...

ನಿಮ್ಮದು ಅದ್ಭುತ ಕೆಲಸ :)

Vittal Hegde ಹೇಳಿದರು...

E blognalli sangeeta, saahitya, chalanachitra, kreede, samskrukatikadantaha ella karyakramaglu onde kade siguttade.Bahala stutyarha kaarya

ತಿರು ಶ್ರೀಧರ ಹೇಳಿದರು...

ಪ್ರಮೋದ್ ಮತ್ತು ವಿಟ್ಟಲ್ ಹೆಗ್ಡೆ ಅವರಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು.

Rajath Udaykumar ಹೇಳಿದರು...

ಆತ್ಮೀಯರೇ,

ಈ ಸಂಸ್ಕೃತಿ ಸಲ್ಲಾಪವು ನಿಮ್ಮ ವ್ಯಕ್ತಿತ್ವದ ಇನ್ನೊಂದು ರೂಪವೇ ಸರಿ. ಕನ್ನಡ ನಾಡು, ನುಡಿ, ಸಂಸೃತಿಯ ಬಗ್ಗೆ ತಮ್ಮಲ್ಲಿರುವ ತೀವ್ರವಾದ ಆಸಕ್ತಿ ನಿಜಕ್ಕೂ ಅನುಪಮವಾದದ್ದು. ಕುವೆಂಪು ಅವರ 'ಸತ್ತಂತಿಹರನು ಬಡಿದೆಚ್ಚರಿಸು' ಎಂಬ ಮಾತಿನಂತೆ ನಿಮ್ಮ ಲೇಖನಗಳು ನಮ್ಮಲ್ಲಿ ಸುಪ್ತವಾಗಿದ್ದ ಭಾವನೆಗಳನ್ನು ಎಚ್ಚರಿಸುತ್ತಿವೆ. ಕನ್ನಡ ಸಾರಸ್ವತ ಲೋಕದ ಆಶೀರ್ವಾದ ನಿಮಗಿರಲಿ. ನಿಮ್ಮ ಎಲ್ಲ ಪ್ರಯತ್ನಗಳು ಯಶಸ್ವಿಯಾಗಲಿ. ನನ್ನ ಮನದಾಳದಿಂದ ಅಭಿನಂದನೆಗಳು.

ತಿರು ಶ್ರೀಧರ ಹೇಳಿದರು...

ಹೃದಯಪೂರ್ವಕ ಧನ್ಯವಾದಗಳು ರಜತ್ ಸಾರ್.

rudra(puttu) ಹೇಳಿದರು...

ಗುರುಗಳೇ ನಿಮ್ಮ ಸತ್ಕಾರ್ಯದಿಂದ ನನ್ನ & ನನ್ನಾತ ಎಸ್ಟೋ ಮಂದಿಗಳಿಗೆ ಜ್ಞಾನದ ಬೆಳವಣಿಗೆ ಸಹಕಾರಿಯಾಗಿದಿರಿ ನಿಮ್ಮಗೆ ನನ್ನ ಹೃತ್ಪೂರ್ವಕ ವಂದನೆಗಳು.
ನಿಮ್ಮಗೆ ದೇವರು ಸಕಲ ಸಂಪನಗಳನು ನೀಡಿಲಿ ಎಂದು ಬೇಡಿಕೊಳುತೇನೆ.

ತಿರು ಶ್ರೀಧರ ಹೇಳಿದರು...

rudr(puttu) ನಿಮ್ಮ ಆತ್ಮೀಯ ಸವಿ ಮಾತುಗಳಿಗೆ ನಾನು ಕೃತಜ್ಞನಾಗಿದ್ದೇನೆ. ನಮಸ್ಕಾರಗಳು'

Dinamani ಹೇಳಿದರು...

ಸರಳ ಹಾಗೂ ಕಣ್ಣಿಗೊಪ್ಪುವ ವಿನ್ಯಾಸ... ಕನ್ನಡಕ್ಕೊಂದು ಉಲ್ಲೇಖನೀಯ ಜ್ನಾನ ತಾಣ.... ಧನ್ಯವಾದಗಳು :)

ತಿರು ಶ್ರೀಧರ ಹೇಳಿದರು...

ದಿನಮಣಿ ಅವರಿಗೆ ಹೃದಯಪೂರ್ವಕ ಧನ್ಯವಾದಗಳು

S N Deepak ಹೇಳಿದರು...

The blog is itself an encyclopedia. Good work.

ತಿರು ಶ್ರೀಧರ ಹೇಳಿದರು...

ಧನ್ಯವಾದಗಳು ಎಸ್. ಎನ್. ದೀಪಕ್ ಸಾರ್

Sati ಹೇಳಿದರು...

ಕನ್ನಡ ಸಾಹಿತ್ಯ, ಸಂಸ್ಕೃತಿ , ಕವಿಗಳು, ಗೀತ ರಚನೆಗಾರರು, ಸಿನಿಮಾ, ನಾಟಕ, ಪ್ರೇಕ್ಷಣೀಯ ಸ್ಥಳಗಳು...... ಇವುಗಳ ಬಗ್ಗೆ ಸವಿವರವಾಗಿ ಒಂದೇ ತಾಣದಲ್ಲಿ ಸಿಗುವಂತೆ ಮಾಡಿರುವ ನಿಮ್ಮ ಪ್ರಯತ್ನ ನಿಜಕ್ಕೂ ಶ್ಲಾಘನೀಯ.......... ಸಂಸ್ಕೃತಿ ಸಲ್ಲಾಪಕ್ಕೆ ನನ್ನ ಹೃದಯಪೂರ್ವಕ ನಮನಗಳು!
ಸತೀಶ್ ಜೋಗಯ್ಯ

rajesh ಹೇಳಿದರು...

Neevu maaduttiruva ee mahatkaryakke hrutpuurvaka namanagalu,,,,

rajesh ಹೇಳಿದರು...

Neevu maaduttiruva ee mahatkaryakke hrutpuurvaka namanagalu,,,,

Aparna Rao ಹೇಳಿದರು...

ಯಾಂತ್ರಿಕತೆಯಿಂದ.. ಭಾವುಕತೆ ತುಂಬುವ ಜೀವನದೆಡೆಗೆ ನಿಮ್ಮ ನಮ್ಮ ಪಯಣ ಮತಿಯ ಮಿತಿಯನ್ನ್ನು ಹೆಚ್ಚಿಸಲಿ.

Kruthi Mowna ಹೇಳಿದರು...

ಆತ್ಮೀಯ ಸಹೋದರ, ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ದೀಪದಿಂದ ದೀಪವ ಹಚ್ಚೊಣ

gopal ಹೇಳಿದರು...

priya Sridhar,
ideega taane nimma blog praveshiside...Abba anisithu.sogasaada kelasa,khushi koduvanthaha bennu thattalebekaada karya nirvahane maaduththiddiri..koncha atta tirugi,nimma bennu thattuththene !

ತಿರು ಶ್ರೀಧರ ಹೇಳಿದರು...

ಹೃದಯಪೂರ್ವಕ ಧನ್ಯವಾದಗಳು ಗೋಪಾಲ್ ಸಾರ್.

ashokloni ಹೇಳಿದರು...

ಸರಳ ಹಾಗೂ ಕಣ್ಣಿಗೊಪ್ಪುವ ವಿನ್ಯಾಸ... ಕನ್ನಡಕ್ಕೊಂದು ಉಲ್ಲೇಖನೀಯ ಜ್ನಾನ ತಾಣ....
ಹೀಗೇಯೇ ಮುಂದುವರಸಿ . ಧನ್ಯವಾದಗಳು

gopal ಹೇಳಿದರು...

HAMSAGEETHEya haadu ideega kelide-38 varsh hindakke hoda haagaayitu,Sridhar Thank u and Thank u !-Gopalkrishna

hpsetty ಹೇಳಿದರು...

nimmadu adbutavada kelasa

jayavagali

vinayak ಹೇಳಿದರು...

ಪ್ರೈಮರಿ ಸ್ಕೂಲ್ ಲೆವಲ್ ಗೆ ಯೋಗ್ಯ ಕ್ವಿಜ್ ಕೂಡ ಇದ್ದರೆ ತುಂಬಾ ಉಪಯುಕ್ತ ಅನಿಸುತ್ತದೆ.ನಿಮ್ಮ ಈ ಅಮೂಲ್ಯ ಕೊಡುಗೆಗೆ ಧನ್ಯವಾದಗಳು

gopal ಹೇಳಿದರು...

priya Sridhar,
ideega taane ivattina nimma blog odide..Mithra avara kuritha lekhana bahala hidisitu.Thamma kelasa Abba anisithu.sogasaada kelasa,khushi koduvanthaha bennu thattalebekaada karya nirvahane maaduththiddiri..koncha atta tirugi,nimma bennu thattuththene ! thamma kaaryadalli shubha koruve..

ತಿರು ಶ್ರೀಧರ ಹೇಳಿದರು...

ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಪ್ರೋತ್ಸಾಹಗಳಿಗೆ ಋಣಿಯಾಗಿದ್ದೇನೆ. ನಮಸ್ಕಾರ

sunitha ಹೇಳಿದರು...

dr. Ra Na someshvara avarannu pratidina chandana dalli that anta nodiye nodutteve.. adare avara bagge bareda lekhanavannu odide.. avaru aushadhiya dactaru.. anta gottiralilla.....nijakku great.. avara bhasha pandityakke avare sati..-malati mudakavi

ShivaRam H ಹೇಳಿದರು...

ನಮ್ಮ ಸಂಸ್ಕೃತಿ,ಸಾಹಿತ್ಯ ಕಲೆಗಳನ್ನು ಇಂದಿನ ಯುವಜನಾಂಗಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಇಂತಹ ತಾಣಗಳು ಹೆಚ್ಚಬೇಕು. ನಿಮ್ಮ ಪ್ರಯತ್ನ ಯಶಸ್ವಿಯಾಗಲೆಂದು ಹಾರೈಸುವ
-ಎಚ್.ಶಿವರಾಂ ಬೆಂಗಳೂರು

Talaku Srinivas ಹೇಳಿದರು...

ಈ ತಾಣ, ’ಕನ್ನಡದ ಖಜಾನೆ’ ಆಗಲಿ - ಉತ್ತಮ ತಾಣವಾಗಿದೆ

shrinivaspanchamukhi ಹೇಳಿದರು...

ಅಭಿನದನೆಗಳು ಕನ್ನಡದ ಸಂಪೂರ್ಣ ಮಾಹಿತಿಯನ್ನೋಳಗೊಂಡ ತಾಣ.ನಿಜಕ್ಕೂ ಇದೊಂದು ಅದ್ಭುತ ಉಪಯುಕ್ತ ಬ್ಲಾಗ್.ಹ್ಯಾಟ್ಸ್ ಆಫ್ ಟು ಯು. ನಿಮ್ಮ ಪ್ರಯತ್ನ ಹೀಗೆ ನಿರಂತರವಾಗಿ ಸಾಗಲಿ ಹಾಗೂ ಯಶಸ್ಸಿನ ಉತ್ತುಂಗಕ್ಕೇರಲಿ.
ಮತ್ತೊಮ್ಮೆ ಶುಭ ಹಾರೈಕೆಗಳು.

ಶ್ರೀನಿವಾಸ ಎನ್ ಪಂಚಮುಖಿ.

shivas cn ಹೇಳಿದರು...

ಅಭಿನದನೆಗಳು

Jayashree Deshpande ಹೇಳಿದರು...

ಸಮೃದ್ಧ ವಸ್ತು ವೈವಿಧ್ಯ, ಹೃದ್ಯ, ಸರಳ ನಿರೂಪಣೆಯೊ೦ದಿಗೆ ಮೂಡಿ ಬರುತ್ತಿರುವ ಜ್ಞಾನ ತಾಣವಿದು, ಯಶಸ್ಸು ನಿರ೦ತರವಾಗಲಿ. ಅಭಿನ೦ದನೆಗಳು.

manjunath ಹೇಳಿದರು...

ನಿಜಕ್ಕೂ ಈ ಬ್ಲಾಗಿನಲ್ಲಿ ನನಗೆ ಸಿಕ್ಕ ಹಲವಾರು ಮೇರು ವ್ಯಕ್ತಿಗಳ ಬಗ್ಗಿನ ಅಧಿಕೃತ ಮಾಹಿತಿ ಬೆರಗು ಮೂಡಿಸಿತು ಮತ್ತು ಇದನ್ನು ಬಹಳ ಎಚ್ಚರದೊಂದಿಗೆ ಇಲ್ಲಿ ಓದುಗರಿಗೆ ಒದಗಿಸಲಾಗಿದೆ. ಇದೊಂದು ಉತ್ತಮ ಕನ್ನಡ ಸೇವೆಯೆಂದರೆ ತಪ್ಪಾಗಲಾಗದು. ಇದರಲ್ಲಿ ಲಭ್ಯವಿರುವ ಮಹನೀಯರುಗಳ ಅವರವರ ಕ್ಷೇತ್ರದಲ್ಲಿನ ಉತ್ಕೃಷ್ಟ ಕೊಡುಗೆ ಅನನ್ಯವಾದದ್ದು. ಇದರ ನಿರ್ವಾಹಕರಿಗೆಲ್ಲರಿಗೂ ನನ್ನ ಪ್ರೀತಿಪೂರ್ವಕ ಅಭಿನಂದನೆಗಳು. ದಯವಿಟ್ಟು ಸಾದ್ಯವಾದರೆ ಡಾ. ಗುರುರಾಜ ಕರ್ಜಗಿ ರವರ ಬಗ್ಗೆ ಲೇಖನವೊಂದನ್ನು ಇಲ್ಲಿ ಲಭ್ಯವಾಗುವಂತೆ ಮಾಡಿರೆಂದು ಸಣ್ಣ ಸಲಹೆ ನೀಡಬಯಸುತ್ತಿದ್ದೇನೆ (ಅದು ನನಗೆ ಕಾಣಲಿಲ್ಲ, ಒಂದು ವೇಳೆ ಆಗಲೇ ಇದ್ದಲ್ಲಿ ಈ ಸಲಹೆಯನ್ನು ತಿರಸ್ಕರಿಸತಕ್ಕದ್ದು)

Rajkumar Bandgar ಹೇಳಿದರು...

ಸರ ನೀವು ಮಾಡುತ್ತಿರುವ ಕಾರ್ಯಕ್ಕೆ ಶುಭಾಶಯಗಳು. ಈ ಬ್ಲಾಗು ಜನಪ್ರಿಯ ವಾಗಿ ಬೆಳೆಯಲಿ .ತಮ್ಮ ಅಭಿನಂದನೆಗಳು 💐 👏 👏 👏 👌 🌷 🌷 🙌 🙌

Sumedh Guddu ಹೇಳಿದರು...

ಇನ್ನು ಸಾಕಷ್ಟು ಜನರಿಗೆ ತಲುಪಿಸಲು ಪ್ರಯತ್ನಿಸೊಣ.

ಶುಭವಾಗಲಿ

Sumedh Guddu ಹೇಳಿದರು...

ಇನ್ನು ಸಾಕಷ್ಟು ಜನರಿಗೆ ತಲುಪಿಸಲು ಪ್ರಯತ್ನಿಸೊಣ.

ಶುಭವಾಗಲಿ

SHYAM PRAKASH ಹೇಳಿದರು...

Thanks for making me to joining this group-very much happy to know more & more different information from you-once again i say heartful thanks to one & all. . . . . Shyam Prakash Manam.

RAVISHANKAR A.K ANKURA ಹೇಳಿದರು...

ಉತ್ತಮ ಉಪಯುಕ್ತ ಬರಹಗಳ ಕೊಂಡಿ

RAVISHANKAR A.K ANKURA ಹೇಳಿದರು...

ಉತ್ತಮ ಉಪಯುಕ್ತ ಬರಹಗಳ ಕೊಂಡಿ

Karanam Arunachala ಹೇಳಿದರು...

Congrats

srinivasa n ಹೇಳಿದರು...

ಕನ್ನಡಿಗರು ಹೆಮ್ಮೆಪಡುವಂತಹ ಅಂತರಜಾಲ ತಾಣ ನಿರ್ವಾಹಕರಿಗೆ ಅಭಿನಂದನೆಗಳು
-ಕೈವಾರ ಎನ್ ಶ್ರೀನಿವಾಸ ಕಸಾಪ ಜಿಲ್ಲಾಧ್ಯಕ್ಷರು ಚಿಕ್ಕಬಳ್ಳಾಪುರ ಜಿಲ್ಲೆ

srinivasa n ಹೇಳಿದರು...

ಕನ್ನಡಿಗರು ಹೆಮ್ಮೆಪಡುವಂತಹ ಅಂತರಜಾಲ ತಾಣ ನಿರ್ವಾಹಕರಿಗೆ ಅಭಿನಂದನೆಗಳು
-ಕೈವಾರ ಎನ್ ಶ್ರೀನಿವಾಸ ಕಸಾಪ ಜಿಲ್ಲಾಧ್ಯಕ್ಷರು ಚಿಕ್ಕಬಳ್ಳಾಪುರ ಜಿಲ್ಲೆ

Mohan Creations ಹೇಳಿದರು...

ಸಲ್ಲಾಪವನ್ನು ಪೂರ್ತಿಯಾಗಿ ನೋಡಿರಲಿಲ್ಲ.ಇವತ್ತು ಸಮಗ್ರ ದರ್ಶನವಾಯಿತು. ಇದರ ಹಿಂದಿರುವ ಅಪಾರ ಪರಿಶ್ರಮದ ಬಗ್ಗೆ ಯೋಚಿಸಿದಾಗ ನಿಮ್ಮ ಬಗ್ಗೆ ಗೌರವಾಭಿಮಾನ ಎರಡೂ ಉಂಟಾಯಿತು. ನಿಜಕ್ಕೂ ಸಲ್ಲಾಪ ಕನ್ನಡದ ಒಂದು ಹೆಮ್ಮೆ. ನನ್ನ ಹಾರ್ದಿಕ ಅಭಿನಂದನೆಗಳು.

Mohan Creations ಹೇಳಿದರು...

ಸಲ್ಲಾಪವನ್ನು ಪೂರ್ತಿಯಾಗಿ ನೋಡಿರಲಿಲ್ಲ.ಇವತ್ತು ಸಮಗ್ರ ದರ್ಶನವಾಯಿತು. ಇದರ ಹಿಂದಿರುವ ಅಪಾರ ಪರಿಶ್ರಮದ ಬಗ್ಗೆ ಯೋಚಿಸಿದಾಗ ನಿಮ್ಮ ಬಗ್ಗೆ ಗೌರವಾಭಿಮಾನ ಎರಡೂ ಉಂಟಾಯಿತು. ನಿಜಕ್ಕೂ ಸಲ್ಲಾಪ ಕನ್ನಡದ ಒಂದು ಹೆಮ್ಮೆ. ನನ್ನ ಹಾರ್ದಿಕ ಅಭಿನಂದನೆಗಳು.

Mohan Creations ಹೇಳಿದರು...

ಕನ್ನಡದ ಹೆಮ್ಮೆ

Mohan Creations ಹೇಳಿದರು...

ಕನ್ನಡದ ಹೆಮ್ಮೆ

Unknown ಹೇಳಿದರು...

ತುಂಬಾ ತುಂಬಾ ಧನ್ಯವಾದಗಳು

Unknown ಹೇಳಿದರು...

ತುಂಬಾ ತುಂಬಾ ಧನ್ಯವಾದಗಳು

shantha mn ಹೇಳಿದರು...

Sir niu Kannadavanna belesuvantah karya madutiddire nimage tumbu hrudayada dhanyavadagalu.

sannjeevkumar s mailare ಹೇಳಿದರು...

Super

Jayarama Somayaji ಹೇಳಿದರು...

ಶ್ರೀ ತಿರು ಶ್ರೀಧರ್ ಅವರಿಗೆ ಅಭಿನಂದನೆಗಳು. ನಿಮ್ಮ ಈ ಕಾರ್ಯ ಶ್ಲಾಘನೀಯವಾದದ್ದು. ಇದು ನಿರಂತರವಾಗಿ ಮುಂದುವರಿಯಲಿ ಎಂದು ಶುಭ ಹಾರೈಕೆಗಳು.

Jayarama Somayaji ಹೇಳಿದರು...

ಶ್ರೀ ತಿರು ಶ್ರೀಧರ್ ಅವರಿಗೆ ಅಭಿನಂದನೆಗಳು. ನಿಮ್ಮ ಈ ಕಾರ್ಯ ಶ್ಲಾಘನೀಯವಾದದ್ದು. ಇದು ನಿರಂತರವಾಗಿ ಮುಂದುವರಿಯಲಿ ಎಂದು ಶುಭ ಹಾರೈಕೆಗಳು.

Prasanna Rai ಹೇಳಿದರು...

ನಮಸ್ತೆ.
ಬಹಳ ಒಳ್ಳೆಯ ಕೆಲಸ, ತಮ್ಮದು.ತಾವು ದಿ.ಕಯ್ಯಾರರ 'ಹಣ್ಣು ಮಾರುವವನ ಹಾಡು' ಎಂಬ ಕವನವನ್ನು ಸೆ.3, 2013 ರಂದು ಪ್ರಕಟಿಸಿರುವಿರಿ. ದಯವಿಟ್ಟು ಅದು ರೈಗಳ ಯಾವ ಕವನ ಸಂಕಲನದಿಂದ ಆರಿಸಲಾಗಿದೆ,ತಿಳಿಸಿರಿ.
:ಕೆ. ಪ್ರಸನ್ನ ರೈ, ಕಾರ್ಯದರ್ಶಿ, ಕವಿತಾ ಕುಟೀರ,
ಪೆರಡಾಲ.

Dr.Sreepad,H.R. ಹೇಳಿದರು...

Dear Sir, you are doing a great job!!! Inspirational work!!! Congratulations and all the best!!!

Unknown ಹೇಳಿದರು...

ನಿಜಕ್ಕೂ ಮೆಚ್ಚಿದೆ.. ಧನ್ಯವಾದಗಳು ಅಪರೂಪದ ಕೆಲವು ಕವಿತೆಗಳು ನನಗೆ ಇಲ್ಲಿ ದೊರಕಿತು..

Reddy digital studio ಹೇಳಿದರು...

very nice web page

Nagesh Talekar ಹೇಳಿದರು...

Nice web y

Holalkere Laxmivenkatesh ಹೇಳಿದರು...

nimma kaaryave namma mumde kannadiyamtiruvaaga enu taane helalu saadhya ?
naanu nimage koTTa nvartha namavE sariyAgide. arjunanataraha earaDU kaigalalli bANabiduva niShNAtaru tAvu. igO nimagenamaskAragaLu.
SSS-3, S3sarre

Unknown ಹೇಳಿದರು...

ದಲಿತ ಸಾಹಿತ್ಯ ಇನ್ನು ಹೆಮ್ಮರಾವಗಿ ಮುಖ್ಯವಾಹಿನಿಗೆ ಅರ್ಥಯ್ಸಲಿ.....ಸುನೀಲ್.. ಚಿನ್ನದ ನಾಡು ಕೋಲಾರ

Unknown ಹೇಳಿದರು...

Its very Nice .It's one stop getting all the busses.

Unknown ಹೇಳಿದರು...

ಆಲೂರು ವೆಂಕಟರಾಯರ ಬಗೆಗಿನ ಬರಜ ನೋಡಿದೆ. ನಿಮ್ಮ ಓ ಉತ್ಕೃಷ್ಠ ಪ್ರಯತ್ನಕ್ಕೆ ಧನ್ಯವಾದಗಳು

Unknown ಹೇಳಿದರು...

ಹೊಸದಾಗಿ ವೀಕ್ಷಿಸುತ್ತಿದ್ದೇನೆ.

Unknown ಹೇಳಿದರು...

ಬಹಳ ಚೆನ್ನಾಗಿದೆ. ಇಂದೇ ನೋಡುತ್ತಿದೇನೆ

Vidyasagar H ಹೇಳಿದರು...

adhbutavagide..yella vishayagala sangamaveyagide...PRAVASA vandu serisdre valleyadu.

Unknown ಹೇಳಿದರು...

ನಮಗೆ ಗಳಗನಾಥರು ರಚಿಸಿದ ಮಾಧವ ಕರುಣಾವಿಲಾಸ ಕಾದಂಬರಿ ಲಭ್ಯವಿದ್ದರೆ ತಿಳಿಸಿರಿ ನಾವು ತರಿಸಿಕೊಳ್ಲುತೆವೆ ದಯವಿಟ್ಟು 9620332933 ಈ ನಂಬರ್ ಗೆ ಮಾಹಿತಿ ತಿಳಿಸಿರಿ (ವಾಟ್ಸ ಆ್ಯಪ) ಗೆ ತಿಳಿಸಿರಿ

Unknown ಹೇಳಿದರು...

lingojiraok933com

ಶ್ರೀರಂಗ ವಿಠ್ಠಲ ಹೇಳಿದರು...

ಸರ್ ನಾನು ನಾ.ಶ್ರೀ.ರಾಜ ಪುರೋಹಿತ ಅವರು ಬರೆದು ಅವರ ಮಗಳು ಸಂಪಾದಿಸಿದ ಶುಕ್ಲಯಜುರ್ವೇದಿ ಮಾಹಾತ್ಮರು ೨೦೦೨ ಪು. ೨೬೧ ಪುಸ್ತಕ ಸಿಗುವ ಸ್ಥಳ ವಿವರ ತಿಳಿಸಿ ಸರ್..

Unknown ಹೇಳಿದರು...

ಸರ್ ಚದುರಂಗರ ವೈಶಾಖ ಕಾದಂಬರಿಯ ಬಗೆಗಿರುವ ವಿಮರ್ಶಾಲೇಖನಗಳಿದ್ದರೆ ತಿಳಿಸಿ ಸರ್

Unknown ಹೇಳಿದರು...

ಸಂಸ್ಕ್ರತಿ ಸಲ್ಲಪ.ಕ್ಕೆಧನ್ಯವಾದಗಲು. 🙏🙏

Veena DhanuGowda ಹೇಳಿದರು...

ನಿಮ್ಮ ಕನ್ನಡ ಅಭಿಮಾನಕ್ಕೆ 🙏🙏🙏 ಅದ್ಭುತವಾದ ಮಾಹಿತಿ

Unknown ಹೇಳಿದರು...

ನಿಮ್ಮ ಉತಮ ಪ್ರಯತ್ನಕ್ಕೆ all the best👍👍