ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೋಳಿ ಕೂಗಿತಕ್ಕ


ಕೋಳಿ ಕೂಗಿತಕ್ಕ ನಂದನವನಕ್ಕ
ಬೆಳಗಾಗಿ ಬೆಳ್ಳಿಯ ಚುಕ್ಕಿ ಉದಯಾದ ಬಳಿಕ
ಕೋಳಿ ಕೂಗಿತಕ್ಕ

ಮಂದಗಮನೇಯರೆದ್ದು ಹೊರಟಾರು ಬೀಸಾಕ್ಕ
ಓಂ ನಮಃ ಶಿವಾಯೆಂದು ಹಾಡು ಹೇಳಾಕ್ಕ
ಮರೀಬಾರದಂಥಾ ಶಬ್ಧಾ
ಮೂರು ಲೋಕಾಕ

ಸಮ ಸಮ ಎರಡು ಪರಡಿ ಕಲ್ಲೂ ಸಮತೂಕ
ನಡುಮಧ್ಯದಲ್ಲಿ ಹಾಯ್ವಂ ತ್ಯಜಿಸವೇಳಾದಕ
ಕಂಠ ಸ್ಥಾನದೊಲಿಂದ ಮುದ್ದು
ಓಲಾಡ್ಯಳ ಬಲಕ

ಕಾಲಕರ್ಮ ಕಾವಲುಗಾರ ಗೂಟೊಂದು ಅದಕ
ಅಷ್ಟಮದ ಬುಟ್ಟಿಯ ಕೇರಿ ಹಾಕಲು ಬೀಸಾಕ
ಸಾಕು ಬೇಕು ತೂಕ ಮಾಡಿ
ಹಾಕು ಎರಡು ಮುಕ

ಸಾಹಿತ್ಯ: ಜಾನಪದ ಗೀತೆ

Tag: Koli koogitakka

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ