ಚೆಲುವಿನ ಕಲೆ ಬಾಳ ಲೀಲೆ
ಚೆಲುವಿನ
ಕಲೆ ಬಾಳ ಲೀಲೆ
ಭಾವದ
ಅಲೆ ಮೇಲೆ
ಜೀವದ
ಉಯ್ಯಾಲೆ
ಮೌನದ
ಭಾಷೆಯ ಮನಸಿನ ಗೀತೆ
ನಾದದ
ಲೀಲೆಯ ಆಡಿದೆಯಂತೆ
ಎಂದಿಗು
ಒಂದೇ ಪಲ್ಲವಿಯಂತೆ
ಆದರು
ಅದುವೆ ಹೊಸ ಕವಿತೆ
ಚೆಲುವಿನ
ಕಲೆ ಬಾಳ ಲೀಲೆ
ಭಾವದ
ಅಲೆ ಮೇಲೆ
ಜೀವದ
ಉಯ್ಯಾಲೆ
ಪ್ರೀತಿಯ
ಪ್ರಭೆಯೆ ಚಿರವಾಗಿರಲಿ
ನೂರು
ವಸಂತವೂ ಸಂತಸ ತರಲಿ
ನಾಳಿನನಾಟ
ಔತಣದಲ್ಲಿ
ರಸಿಕತೆಯೆಲ್ಲ
ತುಂಬಿಸಿ ನಗಲಿ
ಚೆಲುವಿನ
ಕಲೆ ಬಾಳ ಲೀಲೆ
ಭಾವದ
ಅಲೆ ಮೇಲೆ
ಜೀವದ
ಉಯ್ಯಾಲೆ
ಸಾಹಿತ್ಯ: ವಿಜಯನಾರಸಿಂಹ
Tag: Cheluvina kale baala leele
ಕಾಮೆಂಟ್‌ಗಳು