ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವೆಂಕಟಗಿರಿಯಪ್ಪ


 ನಮ್ಮ  ನಡುವಿನ  ವಿಶಿಷ್ಟರು


ಈ  ಮಹನೀಯರನ್ನು  ನಾನು  ಪ್ರತೀದಿನ  ಲಾಲ್ಬಾಗ್  ಪ್ರವೇಶಿಸುವಾಗ  ಗಮನಿಸುತ್ತಾ  ಬಂದಿದ್ದೆ.  ಅವರ ಹೆಸರು  ವೆಂಕಟಗಿರಿಯಪ್ಪ.  ನಾನು  ಬೆಳಿಗ್ಗೆ  6.30ರ  ಸಮಯದಲ್ಲಿ  ಲಾಲ್ಬಾಗ್  ಪ್ರವೇಶಿಸುವಾಗ, ಅವರು  ಪ್ರತೀದಿನ  ಮಾರುವ  ಎಳೆಯ  ಸೌತೇಕಾಯಿ, ಅವರ ಸೈಕಲ್  ಹಿಂಬದಿಯ  ಬುಟ್ಟಿ  ಮತ್ತು  ಪಕ್ಕದಲ್ಲಿನ  ಚೀಲಗಳಲ್ಲಿ  ತುಂಬಿದ್ದು,  ನಾನು ಹೊರಬರುವ 7.30ರ  ವೇಳೆಗೆ  ಬಹುತೇಕ  ಮಾರಾಟವಾಗಿ ಬಿಟ್ಟಿರುತ್ತಿತ್ತು.    ಕೆಲವೊಂದು ದಿನ  ಅದು  ಪೂರ್ಣ  ಖಾಲಿಯಾಗಿದ್ದನ್ನೂ  ನೋಡಿದ್ದೆ.  ಲಾಲ್ಬಾಗ್  ಬಾಗಿಲಿನಲ್ಲಿ  ಹಲವಾರು  ಜನ  ಮಾರುವರಿದ್ದಾರೆ.  ಆದರೆ  ಇವರ  ಮಾರಾಟ  ಮಾತ್ರಾ  ಯಾಕೆ  ಹೆಚ್ಚು?  ಇವರು  ತರುತ್ತಿದ್ದ ತರಕಾರಿಯಾದರೊ  ಸೌತೇಕಾಯಿ  ಮಾತ್ರಾ.  ಇವರು  ತರುತ್ತಿದ್ದ ಸೌತೇಕಾಯಿಗಳು  ನಾನು  ಕಂಡ  ಬಹುತೇಕ  ದಿನ  ಎಳೆಯದಾಗಿಯೇ  ಇರುತ್ತಿತ್ತು.  ಮತ್ತೊಂದು, ಅವರ  ಪ್ರಶಾಂತ  ಮುಖ.  ತನ್ನ ಬಳಿ ಕೊಳ್ಳುವವರ  ಬಳಿ  ಅವರು  ನಡೆದುಕೊಳ್ಳುತ್ತಿದ್ದ  ಸೌಜನ್ಯಯುತ  ನಡವಳಿಕೆ.   ಇವರು ವಾಸವಿದ್ದದ್ದು   ಜೆ.ಪಿ.  ನಗರದಲ್ಲಿ.  ಬೆಳಿಗ್ಗೆ  ನಾಲ್ಕರ  ವೇಳೆಗೇ  ಕೃಷ್ಣರಾಜ  ಮಾರುಕಟ್ಟೆ ತಲುಪಿ  ಅಲ್ಲಿ  ಸೌತೇಕಾಯಿಗಳನ್ನು  ಸೈಕಲ್ಲಿನಲ್ಲಿ  ಹೊತ್ತು ತಂದು  ಸುಮಾರು  ಆರುಗಂಟೆಯ ವೇಳೆಗೆ  ಲಾಲ್ಬಾಗ್  ಬಾಗಿಲ  ಬಳಿ  ಇರುತ್ತಿದ್ದರು.    ಎಲ್ಲರೂ  ಏಳುವುದಕ್ಕೆ  ಬಹುತೇಕ  ಮುಂಚೆಯೇ  ಎದ್ದು  ನಡೆಸಬೇಕಾದ ತನ್ನ  ಬದುಕಿನ  ಬಗೆಗಾಗಲಿ, ತನ್ನ  ಮುಂದಿನ  ಪ್ರಪಂಚದ ಬಗೆಗಾಗಲೀ  ಯಾವುದೇ  ಬೇಸರವಿಲ್ಲದೆ,  ತನ್ನ ಬಳಿ  ಬರುವವರನ್ನೆಲ್ಲಾ  ಆತ್ಮೀಯ  ಭಾವದಿಂದ  ನೋಡುತ್ತಾ  ತನ್ನ  ಬದುಕನ್ನು  ನೆಮ್ಮದಿಯಿಂದ  ಸಾಗಿಸುತ್ತಿದ್ದ  ಈ  ಹಿರಿಯರನ್ನು ಕಂಡಾಗಲೆಲ್ಲ  ಎಂತದ್ದೋ  ಹೃದಯದಲ್ಲಿ  ಆಪ್ತಭಾವ  ಮೂಡುತ್ತಿತ್ತು. (ಅವರ ಕುರಿತು ನಾನು ಮೊದಲು ಬರೆದದ್ದು 4.7.2016ರಂದು. ಇತ್ತೀಚಿನ ವರ್ಷಗಳಲ್ಲಿ ಇವರನ್ನು ಕಾಣಲಿಲ್ಲ. ಅವರೆಲ್ಲಿದ್ದರೂ, ಅವರಿರುವ ಲೋಕ ಅವರಿಗೆ ಸುಂದರವಾಗಿರಲಿ.

This Gentleman’s  name was Venkatagiriyappa.  Everyday while entering Lalbagh at around 6.30 a.m, I used to see this man with a pleasant attitude, having his basket and side bag full of Cucumbers.  By the time I used to come out at around 7.30 a.m.  from Lalbagh, most of his stock were emptied and many a times I saw his stocks were exhausted as well.  He was not the only one who sells vegetables around Lalbagh.  Quite a many are there, but what made him successful or made him different from others?  He used to bring only one vegetable that was cucumber.  The cucumber he used to sell were always fresh.  Another important thing I noticed was, the pleasant way he used to deal with the variety of people who came near him.  At his old age, he used to leave his residence at J. P. Nagar to reach Krishnaraja Market by 4 a.m. in his bicycle and ensured that he reached Lalbagh West Gate everyday by 6 a.m.  Although he used to get up very early when the whole world around him was in deep sleep state, he never seemed to carry any regrets for that, nor he was having complaints about the world in front of him. He lead the life of fulfillment by  always exchanging pleasantries with the people who came near him, with his sheer simplicity.  That  is something Great to feel and and it used to touch my heart everyday (I wrote about him for the first time on 4.7.2016).  For the past few years I am not seeing this Gentleman.  May he remain happy in whichever the world he is.

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!