ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜರಗನಹಳ್ಳಿ




 ಜರಗನಹಳ್ಳಿ ಶಿವಶಂಕರ್ 


ಕವಿ ಜರಗನಹಳ್ಳಿ ಶಿವಶಂಕರ್ ಕನ್ನಡಕ್ಕಾಗಿ ಅಭಿಮಾನದಿಂದ ದುಡಿದ ಸಹೃದಯರು.  


ಶಿವಶಂಕರ್  1949 ಸೆಪ್ಟೆಂಬರ್ 18ರಂದು ಜರಗನಹಳ್ಳಿಯಲ್ಲಿ ಜನಿಸಿದರುಅವರುವಾಣಿಜ್ಯವಿಭಾಗದಲ್ಲಿ ಪದವಿ ಪಡೆದಿದ್ದರುಬ್ಯಾಂಕ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಅವರು, 2001ರಲ್ಲಿ ಸ್ವಯಂ ನಿವೃತ್ತಿ ಪಡೆದು ಸಾಹಿತ್ಯ ಚಟುವಟಿಕೆಗಳಲ್ಲಿ  ಸಕ್ರಿಯರಾಗಿದ್ದರು.


 ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ ಜರಗನಹಳ್ಳಿಶಿವಶಂಕರ್ಸಾವಿರಕ್ಕೂ ಹೆಚ್ಚು ಹನಿಗವನಗಳನ್ನು ಪ್ರಕಟಿಸಿದ್ದಾರೆ. "ಮಳೆ ", “ಆಲಿಕಲ್ಲು”, “ದೇವರನೆರಳು” ಮೊದಲಾದ ಕವನ ಸಂಕಲಗಳು ಅವರ ಸಾಹಿತ್ಯ ಕೃಷಿಯ ಮಜಲುಗಳುಇವರಹನಿಗವನಗಳ ಸಂಕಲನ ‘ಝರಿ’ ಉರ್ದುಇಂಗ್ಲಿಷ್ಹಿಂದಿತಮಿಳುತೆಲುಗುಗುಜರಾತಿಭಾಷೆಗಳಿಗೂ ಅನುವಾದಗೊಂಡಿವೆ.


ಜರಗನಹಳ್ಳಿ ಶಿವಶಂಕರ್ ಅವರು ಅಂಕಣಕಾರರಾಗಿ ಮತ್ತು ಅನೇಕ ಕೃತಿಗಳಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದರು.


ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿದಿನಕರ ದೇಸಾಯಿ ಸಾಹಿತ್ಯ ಪ್ರಶಸ್ತಿಸುವರ್ಣ ಕರ್ನಾಟಕಭೂಷಣ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಜರಗನಹಳ್ಳಿ ಶಿವಶಂಕರ್ ಅವರಿಗೆ ಸಂದಿದ್ದವು.


ದೆಹಲಿಯಲ್ಲಿ ನಡೆದ ಹೊರನಾಡಿನ ಕನ್ನಡಿಗರ ಸಮಾವೇಶದಲ್ಲಿನ ಕವಿಗೋಷ್ಠಿಯ ಅಧ್ಯಕ್ಷತೆವಹಿಸಲು ಬಂದಿದ್ದ ಜರಗನಹಳ್ಳಿ ಶಿವಶಂಕರ್ ಅವರು  ಸಂದರ್ಭದಲ್ಲಿ ನನ್ನೊಡನೆ ಅತ್ಯಂತಆಪ್ತರಾಗಿ ಬಹಳಷ್ಟು ಸಮಯ ಮಾತುಕತೆಯಾಡಿದ್ದರು.


ಸರಳ ಸಜ್ಜನಿಕೆಯ ಕನ್ನಡಭಿಮಾನಿ ಕವಿಗಳಾದ ಜರಗನಹಳ್ಳಿ ಶಿವಶಂಕರ್ 2021 ಮೇ 5ರಂದು ನಿಧನರಾದರು ಅವರ ನೆನಪು ಅತ್ಯಂತ ಆಪ್ತವಾದದ್ದು


On Remembrance Day of poet Jaraganahalli Shivashankar 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ