ಶೀಲಾ ನಾಯಕ್
ಶೀಲಾ ನಾಯಕ್
ಶೀಲಾ ನಾಯಕ್ ಅವರು ಚಿತ್ರಕಲೆ, ಕರ ಕುಶಲ ಕಲೆ, ಸಾಹಿತ್ಯ ಹೀಗೆ ನಿರಂತರ ಸೃಜನಶೀಲ ವ್ಯಕ್ತಿ.
ಆಗಸ್ಟ್ 20 ಶೀಲಾ ಅವರ ಜನ್ಮದಿನ. ಮಂಗಳೂರಿನವರಾದ ಶೀಲಾ ವಿಜ್ಞಾನ ಪಧವೀಧರೆ.
ಶೀಲಾ ಅವರ ಚಿತ್ರಕಲೆಯಲ್ಲಿ ಜೀವಂತಿಕೆಯ ಹೊರಹೊಮ್ಮುವಿಕೆ ಇದೆ. ಅನೇಕ ಬಗೆಯ ಕರಕುಶಲ ಕಲೆಗಳಲ್ಲಿ ಅವರಿಗೆ ಪ್ರಾವೀಣ್ಯತೆ ಇದೆ. ಕಥೆ, ಕವನ ಇತ್ಯಾದಿ ಬರಹಗಳೂ ಇವರಿಗೆ ಪ್ರಿಯ. ಫೋಟೋಗ್ರಫಿ ಅವರ ಮತ್ತೊಂದು ಹವ್ಯಾಸ. ಯೋಗ ಕಲೆಯಲ್ಲೂ ಈಕೆ ಪರಿಣತೆ.. ಆಕಾಶವಾಣಿಯಲ್ಲೂ ಕಾರ್ಯಕ್ರಮ ನೀಡಿದ್ದಾರೆ. ಸದಾ ಸೃಜನಶೀಲೆಯಾದ ಈಕೆಯ ಪ್ರತಿಭೆಗಳು ಇನ್ನೆಷ್ಟೊ. ಲೈನ್ಸ್ ಅಂಡ್ ಕರ್ವ್ಸ್ ಅಕಾಡೆಮಿ ಸ್ಥಾಪಿಸಿ ಮಕ್ಕಳಿಗೆ ಕಲೆ ಬೋಧಿಸಿ, ಮಾರ್ಗದರ್ಶಿಸುತ್ತಿದ್ದಾರೆ.
ತುಂಬು ನಗೆಮೊಗದಿಂದ ಹೃದಯತುಂಬಿ ಅಣ್ಣಾ ಎಂದು ಸಂಬೋಧಿಸುವ ಇಂಥ ತಂಗಿಯನ್ನು ಹೊಂದಿರುವ ನನ್ನ ಭಾಗ್ಯಕ್ಕೆ ಎಣೆಯುಂಟೆ. ಆತ್ಮೀಯ ನಮಸ್ಕಾರ ಮತ್ತು ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು ತಂಗಿ. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ.
🎂🎉🍰🎁🍦💐😊
Happy birthday Shiela Nayak
ಕಾಮೆಂಟ್ಗಳು