ಶಶಿಕಲಾ ರವಿಶಂಕರ್
ಶಶಿಕಲಾ ರವಿಶಂಕರ್
ನಮ್ಮೆಲ್ಲರ ಆತ್ಮೀಯರಾದ ಶಶಿಕಲಾ ರವಿಶಂಕರ್ ಅದ್ಭುತ ಕ್ರಿಯಾಶೀಲ ವ್ಯಕ್ತಿ.
ಜನವರಿ 1 ಶಶಿಕಲಾ ಅವರ ಜನ್ಮದಿನ. ಕನ್ನಡ ಎಂ.ಎ. ಓದಿರುವ ಅವರು ಹಿರಿಯೂರಿನವರು.
ಶಶಿಕಲಾ ಅವರು ಸಮಾಜ ಸೇವಕಿ. ಬರಹದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಗಳಿಸಿದವರು. ರೈಫಲ್ ಶೂಟಿಂಗ್ನಲ್ಲಿ ರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದವರು. ಜೇಸೀಸ್ ವಲಯದಲ್ಲಿ ಹಲವು ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದವರು. ಇಂಡಿಯನ್ ರೆಡ್ ಕ್ರಾಸ್ ವಲಯ ನಿರ್ದೇಶಕಿಯಾಗಿ ಕೆಲಸ ಮಾಡಿದವರು. ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಚಿತ್ರದುರ್ಗ ಜಿಲ್ಲಾ ಮಟ್ಟದ ಸಹ ಆಯುಕ್ತರು, ಉಡುವಳ್ಳಿ ಜೆಎನ್‍ವಿ ನವೋದಯ ಶಾಲೆ ನಿರ್ದೇಶಕಿ, ಹಿರಿಯೂರಿನ ಬ್ರಷ್‍ಕಿಂಗ್ ವಿದ್ಯಾಸಂಸ್ಥೆಯ ಸಲಹಾ ಸಮಿತಿ ಚೇರ್ಮನ್, ನೀಡ್ಸ್ ಎನ್‍ಜಿಓ ರಾಣಿಬೆನ್ನೂರು ಅಧ್ಯಕ್ಷೆ, ಹಿರಿಯೂರಿನ ಗಂಗಾ ಸೆಂಟ್ರಲ್ ಶಾಲೆ ನಿರ್ದೇಶಕಿ, ಹಿರಿಯೂರಿನ ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ, ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ರಾಜ್ಯ ನಿರ್ದೇಶಕಿ ಹೀಗೆ ಅನೇಕ ಜವಾಬ್ದಾರಿ ಹೊರುತ್ತ ಅಪಾರ ಕೆಲಸ ಮಾಡುತ್ತ ಬಂದವರು.
ಶಶಿಕಲಾ ಅನೇಕರಿಗೆ ಬದುಕಿಗೆ ಮಾರ್ಗದರ್ಶನ ನೀಡುತ್ತ ಬೆಳಕಾದವರು. ಅನೇಕ ಗೌರವಗಳು ಶಶಿಕಲಾ ಅವರನ್ನರಸಿ ಬಂದಿವೆ.
ಏನೆಲ್ಲ ಸಾಧಿಸಿದ್ದರೂ ನಮ್ಮ ನಡುವೆ ಸರಳತೆಯ ಆತ್ಮೀಯ ಸ್ವರೂಪರು. ಶಶಿಕಲಾ ರವಿಶಂಕರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Shashikala Ravishankar

ಕಾಮೆಂಟ್‌ಗಳು