ಸರಿಗಮ ವಿಜಿ
ಸರಿಗಮ ವಿಜಿ
ಸರಿಗಮ ವಿಜಿ ಅವರು ರಂಗಭೂಮಿ, ಸಿನಿಮಾ ಮತ್ತು ಕಿರುತೆರೆಗಳಲ್ಲಿ ತಮ್ಮ ಛಾಪನ್ನು ವಿಶಿಷ್ಟವಾಗಿ ಹರಡಿದ್ದವರು.
ಸರಿಗಮ ವಿಜಿ ಅವರ ಮೂಲ ಹೆಸರು ಆರ್. ವಿಜಯಕುಮಾರ್. ಅವರು 1948 ರಲ್ಲಿ ಜನಿಸಿದರು. ಚಲನಚಿತ್ರ ಲೋಕಕ್ಕೆ ಬರುವ ಮುನ್ನ ಅವರು ಎನ್‍ಜಿಇಎಫ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು.
ಸರಿಗಮ ವಿಜಿ ಅವರು ರಂಗಭೂಮಿ ಸಾಧಕರು. ಅವರ 'ಸಂಸಾರದಲ್ಲಿ ಸರಿಗಮ' ನಾಟಕ 1300ಕ್ಕೂ ಪ್ರದರ್ಶನಗಳನ್ನು ಕಂಡಿತು. ತಮ್ಮ ಸಹಜ ಹಾಸ್ಯಾಭಿನಯಕ್ಕೆ ಹೆಸರಾಗಿದ್ದ ವಿಜಿ ಸುಮಾರು 260ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದರು. ಅನೇಕ ಚಲನಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿದ್ದರು. ಕಿರುತೆರೆಯಲ್ಲೂ ವ್ಯಾಪಿಸಿದ್ದರು.
ಸರಿಗಮ ವಿಜಿ ಅವರು 2025ರ ಜನವರಿ 15ರಂದು ಈ ಲೋಕವನ್ನಗಲಿದರು🌷🙏🌷
On Remembrace Day of Great artiste Sarigama Viji 🌷🙏🌷

ಕಾಮೆಂಟ್‌ಗಳು