ಭಗೀರಥ್ ಎಸ್. ಎನ್.
ಎಸ್. ಎನ್. ಭಗೀರಥ್
ಕನ್ನಡಿಗರಾದ ಡಾ. ಎಸ್. ಎನ್. ಭಗೀರಥ್ ಅವರು ಯುನೈಟೆಡ್ ಕಿಂಗ್ಡಂ ದೇಶದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸೀನಿಯರ್ ಕ್ಲಿನಿಕಲ್ ಫೆಲೊ ಆಗಿ ಹೆಸರಾಗಿರುವುದರ ಜೊತೆಗೆ, ಅಮೂಲ್ಯ ಬರಹಗಾರರೂ ಆಗಿದ್ದು, ತಮ್ಮ ತಾತ ಭಾರತದ ಹೆಮ್ಮೆಯ ಶ್ರೇಷ್ಠ ಇತಿಹಾಸ ಸಂಶೋಧಕರೂ ವಿದ್ವಾಂಸರೂ ಆದ, ಡಾ. ಎಸ್. ಶ್ರೀಕಂಠಶಾಸ್ತ್ರೀ ಅವರ ಹೆಸರು ಅಜರಾಮರವಾಗಿ ಉಳಿಯುವಂತಹ ಕೆಲಸ ಮಾಡಿದ್ದಾರೆ.
ಶ್ರೀಕಂಠಶಾಸ್ತ್ರೀ ಅವರದ್ದು ಇತಿಹಾಸ, ಸಾಹಿತ್ಯ, ಅಧ್ಯಾತ್ಮ, ಸಂಸ್ಕೃತಿ, ಚಿತ್ರಕಲೆ, ಶಾಸನಶಾಸ್ತ್ರ, ಪುರಾತತ್ವ, ಮೂರ್ತಿಶಿಲ್ಪ, ಅಲಂಕಾರಶಾಸ್ತ್ರ, ರಾಜ್ಯಶಾಸ್ತ್ರ- ಹೀಗೆ ಹತ್ತು ಹಲವು ವಿಷಯಗಳಲ್ಲಿ ತಲಸ್ಪರ್ಶಿಯಾದ ಪಾಂಡಿತ್ಯವಾಗಿತ್ತು. ಕನ್ನಡ, ತೆಲುಗು, ಸಂಸ್ಕೃತ, ಇಂಗ್ಲಿಷ್ ಭಾಷೆಗಳಲ್ಲಿ ಮಾತ್ರವಲ್ಲದೆ, ಜರ್ಮನ್, ಫ್ರೆಂಚ್ ಮುಂತಾದ ವಿದೇಶಿ ಭಾಷೆಗಳಲ್ಲೂ ಪ್ರಭುತ್ವ ಸಂಪಾದಿಸಿದ್ದ ಅವರು ಮೂಡಿಸಿದ ಬರಹಗಳು ಮತ್ತು ಕೃತಿಗಳು ವಿಶ್ವಾದ್ಯಂತ ಪ್ರಸಿದ್ಧವೆನಿಸಿವೆ.
ಭಗೀರಥ್ ಅವರು ನಿರ್ಮಿಸಿರುವ ಎಸ್. ಶ್ರೀಕಂಠಶಾಸ್ತ್ರೀ ಅವರ ಕುರಿತಾದ https://www.srikanta-sastri.org ತಾಣದಲ್ಲಿ ಶಾಸ್ತ್ರೀ ಅವರ ನೆನಪಿನ ಬಹು ಅಮೂಲ್ಯ ಚಿತ್ರಗಳು, ಹಸ್ತಪ್ರತಿಗಳು, ಮಾಹಿತಿಗಳು, ಲೇಖನಗಳು ಹಾಗೂ ಪುಸ್ತಕಗಳ ಲಭ್ಯತೆ ಮುಂತಾದ ಅಮೂಲ್ಯ ಕೊಡುಗೆಗಳಿವೆ.
ಭಗೀರಥ್ ಅವರು ಕನ್ನಡ ನಾಡಿನ ಮಹಾನ್ ಚೇತನಗಳ ಬಗ್ಗೆ ಪತ್ರಿಕೆಗಳಲ್ಲಿ ಅಮೂಲ್ಯ ಲೇಖನಗಳನ್ನು ಬರೆದಿದ್ದಾರೆ.
ಸರಳ ಸಹೃದಯಿ ಸಾಧಕರಾದ ಡಾ. ಎಸ್. ಎನ್. ಭಗೀರಥ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Bhagirath S N🌷🌷🌷
ಕಾಮೆಂಟ್‌ಗಳು