ಹೊನವಳ್ಳಿ ಕೃಷ್ಣ
ಹೊನವಳ್ಳಿ ಕೃಷ್ಣ
ಅರಕಲಗೂಡು ತಾಲ್ಲೂಕಿನ ಹೊನವಳ್ಳಿಯ ಕೃಷ್ಣ ಎಂಬ ಹುಡುಗ ಒಂದು ದಿನ ರಾಜ್‍ಕುಮಾರ್ ಅವರ ಮನೆಯ ವಿಳಾಸ ಹುಡುಕುತ್ತ ಬೆಂಗಳೂರಿಗೆ ಬಂದಾಗ, ರಾಜ್‍ಕುಮಾರ್ ಮನೆ ವಾಸ್ತವ್ಯ ಚೆನ್ನೈಗೆ ಬದಲಾಗಿದೆ ಎಂದು ತಿಳಿಯಿತು. ಕಪಾಲಿ ಚಿತ್ರಮಂದಿರದ ಹತ್ತಿರ ಇರುವ ಶ್ರೀರಾಮ ಪುಸ್ತಕ ಮಳಿಗೆಯಲ್ಲಿ 6 ಆಣೆ ಕೊಟ್ಟು ಫಿಲ್ಮ್ ಡೈರಿ ಕೊಂಡರು. ಆ ಡೈರಿಯಲ್ಲಿ ಎಲ್ಲಾ ಕನ್ನಡ ಕಲಾವಿದ ಮತ್ತು ಚಿತ್ರರಂಗದವರ ವಿಳಾಸ ಮತ್ತು ದೂರವಾಣಿ ಸಂಖ್ಯೆ ಇತ್ತಂತೆ.
ನಂತರ ಕೆಲದಿನಗಳಲ್ಲೇ ಮದ್ರಾಸ್ ಗೆ ಹೋದ ಹೊನವಳ್ಳಿ ಕೃಷ್ಣ ಅಲ್ಲಿಯ ಹೋಟೆಲ್ ಒಂದರಲ್ಲಿ ಕ್ಲೀನರ್ ಆಗಿ ಕೆಲಸಕ್ಕೆ ಸೇರಿಕೊಂಡರು. ಸಲ್ಪ ದಿನಗಳಲ್ಲೇ ರಾಜ್ ಮನೆ ವಿಳಾಸ ಪತ್ತೆ ಮಾಡಿದ ಇವರು ರಾಜಕುಮಾರ್ ಅವರನ್ನು ಪ್ರಥಮ ಬಾರಿಗೆ ನೋಡಿದ್ದು ಗೋಲ್ಡನ್ ಸ್ಟುಡಿಯೋದಲ್ಲಿ. ನೋಡಿದ ತಕ್ಷಣ ರಾಜ್ ಕಾಲಿಗೆ ಎರಗಿದ ಇವರನ್ನು ಎತ್ತಿ ಯಾರು ಎತ್ತ ಎಂದು ಅಣ್ಣಾವ್ರು ಕೇಳಿದಾಗ ಆನಂದದಿಂದ ಕೃಷ್ಣರಿಗೆ ಮಾತೇ ಹೊರಡಲಿಲ್ಲವಂತೆ.
ಮುಂದೆ ಹೊನವಳ್ಳಿ ಕೃಷ್ಣ ರಾಜ್ ಕುಟುಂಬಕ್ಕೆ ತುಂಬಾ ಹತ್ತಿರವಾದರು. ಈ ಸಮಯದಲ್ಲಿಯೇ ಚಿತ್ರಗಳಲ್ಲಿ ನಟಿಸಲಾರಂಭಿಸಿದರು. ಪುನೀತ್ ರಾಜ್‍ಕುಮಾರ್ ಬಾಲನಟನಾಗಿದ್ದಾಗ ಅವರಿಗೆ
ಅಕ್ಕರೆಯಿಂದ ನಟನೆ ಮಾಡಲು ತೋರಿಸಿಕೊಟ್ಟವರು ಹೊನ್ನವಳ್ಳಿ ಕೃಷ್ಣ. ಈ ಮಾತನ್ನು ಸ್ವಯಂ ಪುನೀತ್ ಅವರೇ ಹೇಳಿದ್ದರು.
ಹೊನವಳ್ಳಿ ಕೃಷ್ಣ ನಟಿಸಿದ ಚಿತ್ರಗಳ ಸಂಖ್ಯೆ ಸಾವಿರ ಮೀರಿದ್ದು. ಹೀಗೆ ಅವರು ಸಾವಿರ ಚಿತ್ರದ ಗಡಿ ದಾಟಿದಾಗ ಪುನೀತ್ ರಾಜಕುಮಾರ್ ರವರೇ ಸನ್ಮಾನಿಸಿದ್ದರು.
ಕಲೆಯನ್ನು ಹೀಗೆ ತಪಸ್ಸಿನಂತೆ ಆಚರಿಸುತ್ತ ಬಾಳ್ವೆ ನಡೆಸುತ್ತಿದ್ದಾರೆ ಈ ಹೊನವಳ್ಳಿ ಕೃಷ್ಣ. ಈ ತಪಸ್ವಿಗೆ ಹಿರಿಯ ವಯಸ್ಸಿನ ಬಾಳು ಹಿತಕರವಾಗಿರಲಿ🌷🙏🌷
Happy birthday to lovely actor of Kannada film industry Honavalli Krishna 🌷🙏🌷
ಕಾಮೆಂಟ್‌ಗಳು