ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ದತ್ತಾತ್ರಿ ಎಂ. ಎನ್.

ದತ್ತಾತ್ರಿ ಎಂ. ಎನ್.

ಎಂ. ಎನ್. ದತ್ತಾತ್ರಿ ನಮ್ಮ ನಡುವಿನ ಪ್ರತಿಭಾನ್ವಿತ ವ್ಯಂಗ್ಯಚಿತ್ರ ಕಲಾವಿದರು. 

ಜೂನ್ 6 ದತ್ತಾತ್ರಿ ಅವರ ಜನ್ಮದಿನ.  ಇವರು ಹುಟ್ಟಿದ್ದು ಮಲೆನಾಡಿನ ತೀರ್ಥಹಳ್ಳಿ ಸಮೀಪದ ಕಟ್ಟೆಹಕ್ಕಲು ಎಂಬಲ್ಲಿ. ಪ್ರಸಕ್ತ  ಬೆಂಗಳೂರಿನಲ್ಲಿ ವೃತ್ತಿ ಹಾಗೂ ಪ್ರವೃತ್ತಿಯಲ್ಲಿ ತೊಡಗಿದ್ದಾರೆ. ಖಾಸಗಿ ಜಾಹಿರಾತು ಸಂಸ್ಥೆಯಲ್ಲಿ ದೃಶ್ಯ ವಿನ್ಯಾಸಕರಾಗಿ ಕೆಲಸ ಮಾಡುತ್ತಿರುವ ದತ್ತಾತ್ರಿ ಅವರಿಗೆ ವ್ಯಂಗಚಿತ್ರ ಬರೆಯುವುದು ಹವ್ಯಾಸ.

ದತ್ತಾತ್ರಿ ಅವರ ವ್ಯಂಗ್ಯಚಿತ್ರಗಳು ನಿಯತಕಾಲಿಕಗಳಲ್ಲಿ ಹಾಗೂ ಅಂತರಜಾಲ ಮಾಧ್ಯಮಗಳಲ್ಲಿ ಪ್ರಖ್ಯಾತವಾಗಿವೆ.  ಸ್ನೇಹಪ್ರಿಯರಾದ ಇವರ ಛಾಯಾಗ್ರಹಣ ಮತ್ತು ಹಾಸ್ಯಪ್ರಜ್ಞೆಯೂ ಸೊಬಗಿನದು.

ಪ್ರತಿಭಾನ್ವಿತ 'ದತ್ತಾ3' ಖ್ಯಾತನಾಮದ ದತ್ತಾತ್ರಿ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು 

Happy birthday Dattathri MN 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ