ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೆ.ಟಿ. ಶಿವಪ್ರಸಾದ್

 


ಕೆ.ಟಿ. ಶಿವಪ್ರಸಾದ್ 


ಕೆ.ಟಿ. ಶಿವಪ್ರಸಾದ್ ಅವರು ನಾಡಿನ ಹೆಸರಾಂತ ಚಿತ್ರಕಲಾವಿದರು, ಶಿಲ್ಪ ಕಲಾವಿದರು, ಛಾಯಾಗ್ರಾಹಕರು,  ಸಾಮಾಜಿಕ ಬದ್ಧತೆಯ ಚಿಂತಕರು ಮತ್ತು ಹೋರಾಟಗಾರರು.  ತಮಗೆ ಸಂದ ದೊಡ್ಡ ಪ್ರಶಸ್ತಿಯಾದ ವರ್ಣಶಿಲ್ಪಿ ವೆಂಕಟಪ್ಪ  ಪ್ರಶಸ್ತಿಯನ್ನೂ, ಅದರ ಹಣವನ್ನೂ ಸರ್ಕಾರಕ್ಕೆ ಹಿಂದೆ ಮುಂದೆ ನೋಡದೆ ಹಿಂದಿರುಗಿಸಿದವರು.

ಹಾಸನದ ಮೂಲದವರಾದ ಶಿವಪ್ರಸಾದ್ ಕಾರ್ಲೆ ಅವರು 1947ರ ಆಗಸ್ಟ್ 5ರಂದು ಜನಿಸಿದರು.  ತಮ್ಮ ತಂದೆ ರಾಜಕೀಯ ಮತ್ತು ಉದ್ಯಮದಲ್ಲಿ ಹೆಸರಾಗಿದ್ದರೂ,  ತಾವು ಸಾಮಾನ್ಯತೆಯ ಬಾಳನ್ನು ಹಿಡಿದವರು.  ಮುಂಬೈ ವಿಶ್ವವಿದ್ಯಾಲಯದಲ್ಲಿ ಓದಿದರು.

ಕಲಾವಿದರಾಗಿ ಪ್ರಯೋಗಶೀಲರಾಗಿ ಹೆಸರಾದ ಶಿವಪ್ರಸಾದ್ ಅವರ ಕಲಾಕೃತಿಗಳು, ಅನೇಕ ಪ್ರದರ್ಶನಗಳು, ಚಿತ್ರ ಗ್ಯಾಲರಿಗಳು ಮತ್ತು ಕಲಾರಸಿಕರ ಸಂಗ್ರಹಗಳಲ್ಲಿ ಕಂಗೊಳಿಸಿವೆ. 
ಅವರು ರೈತ ಸಂಘ ಮತ್ತು ದಲಿತ ಸಂಘರ್ಷ ಸಮಿತಿಯೊಂದಿಗೆ ಸಕ್ರಿಯರಾದವರು. ಅವರು ವಾಸ್ತುಶಿಲ್ಪಿ ಮತ್ತು ಛಾಯಾಗ್ರಾಹಕರಾಗಿಯೂ ಕ್ರಿಯಾಶೀಲರಾಗಿದ್ದಾರೆ. 

ಶಿವಪ್ರಸಾದ್ ಅವರ ಕಲಾಕೃತಿಗಳಿಗಾಗಿ ಅನೇಕ ಪ್ರಶಸ್ತಿಗಳು ಸಂದಿವೆ.  ಸೈದ್ಧಾಂತಿಕ ನೆಲೆಯಲ್ಲಿ ಹಲವು ಗೌರವಗಳನ್ನು ಹಿಂದಿರುಗಿಸಿದ್ದಾರೆ.

ಹಿರಿಯ ಸಮಾಜಮುಖಿ ಕಲಾವಿದರಾದ ಶಿವಪ್ರಸಾದ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday to our Great Artiste Shivaprasadkarle Karle 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ