ಚಂದ್ರಶೇಖರ್ ಉಡುಪ
ಡಿವೈನ್ ಪಾರ್ಕ್ ಸಂಸ್ಥಾಪಕ ಡಾ. ಎ.ಚಂದ್ರಶೇಖರ್ ಉಡುಪ ನಿಧನ
Respects to departed divine soul Dr. Chandrashekhar Udupa ji 🌷🙏🌷
ವೈದ್ಯರಾಗಿದ್ದು ಸಾಲಿಗ್ರಾಮ ಡಿವೈನ್ ಪಾರ್ಕ್ ಸಂಸ್ಥಾಪಕರಾಗಿ 'ಡಾಕ್ಟರ್ ಜಿ' ಎಂದು ಖ್ಯಾತರಾದ ಡಾ. ಎ.ಚಂದ್ರಶೇಖರ್ ಉಡುಪ ಅವರು ಇಂದು ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು.
ಚಂದ್ರಶೇಖರ್ ಉಡುಪ ಅವರು ಎಪ್ಪತ್ತರ ದಶಕದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಸಂದರ್ಭದಲ್ಲಿ ವಿವೇಕಾನಂದರ ಚಿಂತನೆಗಳ ಪ್ರಭಾವಕ್ಕೆ ಒಳಗಾಗಿ 'ಡಿವೈನ್ ಪಾರ್ಕ್' ಎಂಬ ಸಂಸ್ಥೆಯನ್ನು ಆರೋಗ್ಯ ಮತ್ತು ಅಧ್ಯಾತ್ಮದ ಚಿಂತನೆಯಲ್ಲಿ ಪ್ರಾರಂಭಿಸಿ ಅನೇಕ ಜನಹಿತ ಸೇವಾ ಕಾರ್ಯಗಳನ್ನು ನಡೆಸುತ್ತ ಬಂದಿದ್ದರು.
ಮುಂದೆ ಡಿವೈನ್ ಪಾರ್ಕ್‌ನ ಸಹಸಂಸ್ಥೆಯಾಗಿ ಎಸ್‌ಎಚ್‌ಆರ್‌ಎಫ್ (ಯೋಗಬನ) ಸ್ಥಾಪಿಸಿದ ಚಂದ್ರಶೇಖರ್ ಉಡುಪ ಅವರು ಅವರು, ಯೋಗ, ಪ್ರಕೃತಿ, ಆಯುರ್ವೇದಗಳ ಜತೆಗೆ ಆಧ್ಯಾತ್ಮಿಕ ಚಿಕಿತ್ಸಕ ಕ್ರಮವನ್ನೂ ಮುನ್ನೆಲೆಗೆ ತಂದಿದ್ದರು.
ಚಂದ್ರಶೇಖರ್ ಉಡುಪ ಅವರು ಪುತ್ರ ಡಾ. ವಿವೇಕ ಉಡುಪ ಮತ್ತು ತಮ್ಮ ಪತ್ನಿಯನ್ನು ಅಗಲಿದ್ದಾರೆ. ವಿಶ್ವದೆಲ್ಲೆಡೆ ಅಪಾರ ಅಭಿಮಾನಿಗಳನ್ನು ಗಳಿಸಿದ್ದ ಅವರು ಎಲ್ಲರಿಂದಲೂ ಆಪ್ತವಾಗಿ 'ಡಾಕ್ಟರ್ ಜಿ' ಎಂದೇ ಕರೆಯಲ್ಪಡುತ್ತಿದ್ದರು.
ಅಗಲಿದ ಚೇತನಕ್ಕೆ ನಮನ 🌷🙏🌷

ಕಾಮೆಂಟ್‌ಗಳು