ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪ್ರಸನ್ನಾ ವಿ ಚೆಕ್ಕೆಮನೆ


ಪ್ರಸನ್ನಾ ವಿ ಚೆಕ್ಕೆಮನೆ 


ಕಾಸರಗೋಡಿನಲ್ಲಿರುವ ಪ್ರಸನ್ನಾ ವಿ ಚೆಕ್ಕೆಮನೆ ಅವರು ಕನ್ನಡ, ಹವ್ಯಕ ಮತ್ತು ಮಲಯಾಳಂ ಭಾಷೆಗಳ ಬರಹಗಾರ್ತಿ.

ಜನವರಿ 5, ಪ್ರಸನ್ನಾ ಅವರ ಜನ್ಮದಿನ.
ಹುಟ್ಟಿದ ಊರು ಕಾಸರಗೋಡಿನ ಬಾಡೂರು ಗ್ರಾಮದ ಪಳ್ಳ. ತಂದೆ ಸರ್ಪಂಗಳ ಹರಿಯಪ್ಪ ಭಟ್.  ತಾಯಿ ರಮಾ ಎಚ್. ಭಟ್.   ಪತಿ ವೆಂಕಟಕೃಷ್ಣ ಚೆಕ್ಕೆಮನೆ.

ಪ್ರಸನ್ನಾ ವಿ ಚೆಕ್ಕೆಮನೆ ‍ಅವರು ಕನ್ನಡ, ಮಲೆಯಾಳಂ ಹಾಗೂ ಹವ್ಯಕ ಭಾಷೆಗಳಲ್ಲಿ ಕಥೆ, ಕಾದಂಬರಿ, ಕವನ, ಭಾವಗೀತೆ, ಭಕ್ತಿಗೀತೆ, ಲೇಖನಗಳನ್ನು ಬರೆಯುತ್ತಿದ್ದಾರೆ  ಇವರ ಹವ್ಯಕ ಕಾದಂಬರಿ 'ಸ್ವಯಂವರ'  ಅಂತರಜಾಲ ಮಾಧ್ಯಮದಲ್ಲಿ ಧಾರಾವಾಹಿಯಾಗಿ ಮೂಡಿತ್ತು.  ಇವರ ಬಹುಮುಖಿ ಬರಹಗಳು ಪ್ರಸಿದ್ಧ ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ. ಇವರ ಮೊದಲ ಕವನ ಸಂಕಲನ 'ಇನಿದನಿ' ಯು 2014 ರಲ್ಲಿ ಕರ್ನಾಟಕ ಪುಸ್ತಕ ಪ್ರಾಧಿಕಾರದಿಂದ ಪ್ರಕಟವಾಯಿತು. ನಂತರ ಮನದ ಮಲ್ಲಿಗೆ, ಕರಿಮಣಿ ಮಾಲೆ ( ಹವ್ಯಕ), ನೀಲಾಂಬರಿ ಎಂಬ ಕಥಾಸಂಕಲನಗಳು ಪ್ರಕಟಗೊಂಡವು.  ಅನೇಕ ಕಾದಂಬರಿಗಳು ಸೇರಿದಂತೆ ಇವರ ನಂತರದ ಪ್ರಕಟಿತ ಕೃತಿಗಳಲ್ಲಿ ತುಳಸೀಹಾರ, ಗರಿಕೆಯಂಚಿನ ಹಿಮಬಿಂದು, ಸಿಂಧೂರ ರೇಖೆಯ ಮಿಂಚು, ನಿನಗಾಗಿ ತೆರೆದ ಬಾಗಿಲು, ಯಾವ ಕಾಣಿಕೆ ನೀಡಲಿ ನಿನಗೆ, ನನ್ನೆದೆಯು ಮಿಡಿಯುತಿದೆ ನಿನ್ನ ಹೆಸರು, ಸ್ವಯಂವರ, ಇರಬೇಕಿತ್ತು ನೀ ಹತ್ತಿರ, ಬಾನಂಚಿನ ಹೊಸಗಾನ, ಪೋಗದೆ ಇರೆಲೋ ರಂಗ, ಉಲಿಯುವ ಗೆಜ್ಜೆ ನಲಿಯುವ ಹೆಜ್ಜೆ, ಹೃದಯ ಮುರಳಿ ಮಿಡಿದ ರಾಗ ಮುಂತಾದವು ಸೇರಿವೆ. 

ಪ್ರಸನ್ನಾ ವಿ ಚೆಕ್ಕೆಮನೆ ಅವರಿಗೆ ಅಖಿಲ ಭಾರತ ಮಟ್ಟದ ಕೊಡಗಿನ ಗೌರಮ್ಮ ಕಥಾ ಸ್ಪರ್ಧೆಯಲ್ಲಿ ಪ್ರಶಸ್ತಿ, ಚುಟುಕು ಸಾಹಿತ್ಯ ಪರಿಷತ್ತು ನಡೆಸಿದ ಕಥಾಸ್ಪರ್ಧೆಯಲ್ಲಿ ಪ್ರಶಸ್ತಿ, ತಿರುವನಂತಪುರಂನ ಸಂಸ್ಕೃತಂ ಪ್ರತಿಷ್ಠಾನದ ವಿಶೇಷ ಪುರಸ್ಕಾರ, ಅನೇಕ ಸ್ಪರ್ಧೆಗಳಲ್ಲಿನ ಬಹುಮಾನಗಳು ಸೇರಿದಂತೆ ಅನೇಕ ಗೌರವಗಳು ಸಂದಿವೆ. ಕೇರಳ ಸರಕಾರದ ಎರಡನೇ ತರಗತಿಯ ಪಠ್ಯಪುಸ್ತಕದಲ್ಲಿ ಇವರ ಕವನವೊಂದು ಪಠ್ಯವಾಗಿ ಸೇರ್ಪಡೆಗೊಂಡಿದೆ.

ಪ್ರಸನ್ನಾ ವಿ ಚೆಕ್ಕೆಮನೆ  ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday Prasanna Venkatakrishna Chekkemane 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ