ವಿಜಯ ನಾಗ್
ಮೈಸೂರಿನ ಸಿಟಿ ಸೆಂಟ್ರಲ್ ಲೈಬ್ರರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿ. ವಿಜಯ ನಾಗ್ ಅನುವಾದ ಕ್ಷೇತ್ರದಲ್ಲಿ ಹೆಸರಾಗಿದ್ದಾರೆ.
ವಿಜಯ ನಾಗ್ ಅವರು ಇಂಗ್ಲಿಷ್ ಮತ್ತು ಜಪಾನಿ ಭಾಷೆಯಿಂದ ಹಲವಾರು ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ. ಇವುಗಳಲ್ಲಿ ಜಿಮ್ ಗ್ರೀನ್ ಅವರ ಆಂಗ್ಲ ಕೃತಿ ಅನುವಾದ 'ಆಲ್ಬರ್ಟ್ ಐನ್‍ಸ್ಟೀನ್: ಆಯ್ದ ಬರಹಗಳು', ಥಾಮಸ್ ಹೂವರ್ ಅವರ ಕೃತಿ ಅನುವಾದ 'ಜೆನ್ ಅನುಭವ', ಯೀ ಥಿಯೊಡೋರಾ ಒಸಾಕಿ ಅವರ ಕಥಾ ಸಂಕಲನದ ರೂಪಾಂತರ 'ಜಪಾನಿನ ಕಾಲ್ಪನಿಕ ಕಥೆಗಳು', ಎಡಿಟಾ ಮೊರಿಸ್ ಅವರ ಕೃತಿ ರೂಪಾಂತರ 'ಹಿರೋಶಿಮಾದ ಹೂವುಗಳು', ನಾತಮೆ ಸೋಸಿಕಿ ಅವರ ಕೃತಿ ರೂಪಾಂತರ 'ಹೃದಯ', ಜುನ್ ಇಚಿರಾ ಟನಿಸಾಕಿ ಅವರ ಕಾದಂಬರಿ ಅನುವಾದ 'ಬೀಗದ ಕೈ', ರೊನಾಲ್ಡ್ ಕೀನ್ ಅವರ ಕೃತಿ ಅನುವಾದ 'ಮನುಷ್ಯನಾಗಿ ಉಳಿದಿಲ್ಲ', ಖ್ಯಾತ ಪಾಶ್ಚಾತ್ಯ ಕವಿತೆಗಳ ಅನುವಾದಗಳಾದ 'ಪರಿಮಳ', 'ಕೆಂಗುಲಾಬಿ' ಮುಂತಾದವು ಸೇರಿವೆ. 'ಜಪಾನಿನ ಸಾಹಿತ್ಯ ಚರಿತ್ರೆ', 'ಅವಿಪ್ಸ' ಕೃತಿಗಳನ್ನೂ ಪ್ರಕಟಿಸಿದ್ದಾರೆ.
ವಿಜಯ ನಾಗ್ ಅವರಿಗೆ ಕುವೆಂಪು ಕಲಾನಿಕೇತನ, ಬೆಂಗಳೂರು ಇವರಿಂದ ಕುವೆಂಪು ಕನ್ನಡ ರತ್ನ ಪ್ರಶಸ್ತಿ, ಅನುವಾದ ಕ್ಷೇತ್ರದ ಗಣನೀಯ ಸಾಧನೆಗಾಗಿ ಆಸ್ಟ್ರೇಲಿಯಾದ ಎಸ್.ಎಂ. ಟಿ.ಯು ನಿಂದ ಗೌರವ ಡಾಕ್ಟರೇಟ್ ಸೇರಿದಂತೆ ಹಲವಾರು ಗೌರವಗಳು ಸಂದಿವೆ.
ವಿಜಯ ನಾಗ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Vijaya Nag 🌷🌷🌷

ಕಾಮೆಂಟ್‌ಗಳು