ಹೀಗೇ ಆಗುತ್ತೆ....
ಹೀಗೇ ಆಗುತ್ತೆ....
ಪುಟ್ಟಣ್ಣನಿಗೆ ಆಗಿನ್ನೂ ಆರು ವರ್ಷ ವಯಸ್ಸು. ಅಪ್ಪನ ಜೊತೆ ಕಾರಲ್ಲಿ ಹೊರಟಿದ್ದಾಗ ವೇಗ ಹೆಚ್ಚಾಯ್ತು ಅಂತ ಪೊಲೀಸಿನವ ಹಿಡಿದ. ಅಪ್ಪ ಪೋಲೀಸರಿಗೆ ತನ್ನ ಲೈಸೆನ್ಸ್ ಜೊತೆಯಲ್ಲಿ ಇನ್ನೂರು ರೂಪಾಯಿ ಕೊಟ್ರು. ಮುಂದೆ ಹೋಗುತ್ತಾ ಅಪ್ಪಾ ಹೇಳಿದರು, “ಹೀಗಾಗುತ್ತೆ ಪುಟ್ಟ, ಎಲ್ರೂ ಇದನ್ನ ಮಾಡ್ತಾರೆ”
ಪುಟ್ಟಣ್ಣನಿಗೆ ಎಂಟು ವರ್ಷ ಆದಾಗ ಕುಟುಂಬದ ಕೂಟವೊಂದರಲ್ಲಿ ಮಾಮ ವೆಂಕಣ್ಣ ಅಲ್ಲಿದ್ದ ಅಂಕಲ್ಗಳಿಗೆಲ್ಲಾ ವಿವರಿಸ್ತಾ ಇದ್ರು. “ನೋಡಿ ಹೀಗೆ ಹೀಗೆ ಮಾಡಿದ್ರೆ ನೀವು ಇಷ್ಟಿಷ್ಟು ಆದಾಯ ತೆರಿಗೆ ತಪ್ಪಿಸಿಕೋಬಹ್ದು. ಎಲ್ಲಾ ಬುದ್ಧಿವಂತ್ರೂ ಹೀಗೇ ಮಾಡ್ತಾರೆ”
ಅವನಿಗೆ ಒಂಭತ್ತು ವರ್ಷ ಆಗಿದ್ದಾಗ, ಪುಟ್ಟಣ್ಣನನ್ನು ಅವನ ಅಮ್ಮ ಅದೇ ಮೊದಲಬಾರಿಗೆ ಸಿನಿಮಾಕ್ಕೆ ಕರೆದುಕೊಂಡು ಹೋದ್ರು. “ಹೌಸ್ ಫುಲ್” ಅಂತ ಬೋರ್ಡು ಹಾಕಿತ್ತು. ಅಮ್ಮ ಅತ್ತಿತ್ತ ಕಣ್ಣುಬಿಟ್ಟರು. ಸಿನಿಮಾ ಮಂದಿರದ ನೌಕರನೊಬ್ಬ ಟಿಕೆಟ್ ಬೇಕಾ ಮೇಡಂ ಅಂದ. ಅಮ್ಮ ನೋಟು ಕೊಟ್ರು. ಸಿನಿಮಾ ಮಂದಿರದಲ್ಲಿ ಕುಳಿತಾಗ ಅಮ್ಮಾ ಅಂದ್ರು “ಹೀಗಾಗುತ್ತೆ ಪುಟ್ಟ. ಎಲ್ರೂ ಹೀಗೇ ಮಾಡ್ತಾರೆ”
ಆಗ ಪುಟ್ಟಣ್ಣನಿಗೆ ಹದಿನೈದು ವರ್ಷ. ಶಾಲೆಯಲ್ಲಿ ಫುಟ್ಬಾಲ್ ತಂಡಕ್ಕೆ ಆಯ್ಕೆಯಾಗಿದ್ದ. “ಕೋಚ್ ವಿವರಿಸ್ತಾ ಇದ್ರು. ಚೆಂಡನ್ನು ಹೇಗೆ ಬ್ಲಾಕ್ ಮಾಡೋದು ಜೊತೆಗೆ ರೆಫರಿಗೆ ಗೊತ್ತಾಗದ ಹಾಗೆ, ಹೇಗೆ ಎದುರಾಳಿಯ ಅಂಗಿಯನ್ನು ಸೂಕ್ಷ್ಮವಾಗಿ ಎಳೆದಿರಬೇಕು” ಅಂತ. ಮತ್ತೊಮ್ಮೆ ಕೋಚ್ ಹೇಳಿದರು. “ಆದ್ರೆ ಹುಷಾರಾಗಿ ಮಾಡ್ಬೇಕು! ಎಲ್ರೂ ಹೀಗೇ ಮಾಡ್ತಾರೆ.”
ಪುಟ್ಟಣ್ಣನಿಗೆ ಹದಿನಾರು ವರ್ಷ ಆಯ್ತು. ಬೇಸಿಗೆಯಲ್ಲಿ ಸೂಪರ್ ಮಾರ್ಕೆಟ್ಟಿನಲ್ಲಿ ರಜಾ ಅವಧಿಯ ಕೆಲಸಕ್ಕೆ ಸೇರಿದ. ಆತನಿಗೆ ಹಿರಿಯನೊಬ್ಬ ಯಾವ ರೀತಿಯಲ್ಲಿ ಬಲಿತ ಹಣ್ಣುಗಳನ್ನು ಅಡಗಿಸಿ ಸುಂದರವಾದ ಹಣ್ಣುಗಳನ್ನು ಅಲ್ಲಲ್ಲಿ ಮಿಂಚುವಂತೆ ಮಾಡಬೇಕೆಂದು ತೋರಿಸಿ ಹೇಳಿದ, “ಹೆದರ್ಕೋಬೇಡ ತಮ್ಮಾ, ಇಲ್ಲಿ ಎಲ್ರೂ ಕೆಲಸ ಮಾಡೋದೇ ಹೀಗೆ”
ಹದಿನೆಂಟನೆಯ ಹುಟ್ಟು ಹಬ್ಬ ಆಚರಿಸಿದ ಪುಟ್ಟಣ ಕಾಲೇಜಿನಲ್ಲಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಯಸಿದ. ಆದರೆ ಅದೇ ತರಗತಿಯಲ್ಲಿದ್ದ ಪಕ್ಕದ ಮನೆಯ ಹುಡುಗನಿಗೆ ಹೆಚ್ಚು ಅಂಕಗಳಿದ್ದವು. ಆದರೆ ಆ ಬುದ್ಧಿವಂತ ಹುಡುಗನಿಗೆ ವಿದ್ಯಾರ್ಥಿವೇತನ ಗಳಿಸುವುದಕ್ಕೆ ಬೇಕಿದ್ದ ಗುಟ್ಟು ತಿಳಿದಿರಲಿಲ್ಲ. ನಮ್ಮ ಪುಟ್ಟಣ್ಣನಿಗೇ ವಿದಾರ್ಥಿವೇತನ ಸಂದಿತು. ಅಪ್ಪ, ಅಮ್ಮ ಪುಟ್ಟಣ್ಣನಿಗೆ ಹೇಳಿದರು, “ಹೇಗೋ, ವಿದ್ಯಾರ್ಥಿವೇತನ ನಿಂಗೇ ಸಿಕ್ಕಿದ್ದು ನಮಗೆ ಸಂತೋಷವಾಯ್ತು. ಸಾಧನೆ ಮಾಡೋದು ಅಂದ್ರೆ ಹೀಗೇ, ಕಷ್ಟಪಡಬೇಕಾಗುತ್ತೆ!”
ಪುಟ್ಟಣ್ಣನಿಗೆ ಹತ್ತೊಂಬನೇ ವರ್ಷ. ಪುಟ್ಟಣ್ಣನ ಕಾಲೇಜಿನ ಹಿರಿಯ ವಿದಾರ್ಥಿಯೊಬ್ಬ “ಐದು ಸಾವಿರ ಕೊಟ್ರೆ ನಿನ್ನ ಪರೀಕ್ಷೆಯನ್ನು ನಾನೇ ಚೆನ್ನಾಗಿ ಬರೆದು ನಿನಗೆ ಉತ್ತಮ ಅಂಕ ಬರೋ ಹಾಗೆ ಮಾಡ್ತೀನಿ” ಅಂದ. “ಏನೂ ತೊಂದ್ರೆ ಆಗೋಲ್ವಾ” ಅಂತ ಪ್ರಶ್ನಿಸಿದ ಪುಟ್ಟಣ್ಣ. “ಏನೂ ಹೆದರ್ಕೋಬೇಡಾಮ್ಮ, ಎಲ್ರೂ ಮಾಡೋದೇ ಹೀಗೇ” ಹಿರಿಯ ಧೈರ್ಯ ತುಂಬಿದ.
ಪುಟ್ಟಣ್ಣನ ಕಥೆ ಕಾಲೇಜಿನ ಮುಖ್ಯಸ್ಥರಿಗೆ ಗೊತ್ತಾಗಿ ಆತ ಮನೆ ಸೇರುವಂತಾಯ್ತು. ಅಪ್ಪಾ ಹೇಳಿದರು “ನನಗೂ ನಿಮ್ಮಮ್ಮನಿಗೂ ಇಂಥಹ ಅವಮಾನ ಆಗೋ ತರಹ ನಡೆದುಕೊಳ್ಳೋಕೆ ನಿನಗೆ ಹೇಗೆ ತಾನೇ ಮನಸ್ಸು ಬಂತು. ನಮ್ಮ ವಂಶದಲ್ಲಿ ಎಂದಾದ್ರೂ ಹೀಗಾಗಿತ್ತ?”.
(ಬೆನ್ ಇ ಬೆಂಜಮಿನ್ ಮತ್ತು ಚೆರಿ ಸೋಹ್ನೇನ್-ಮೋ ಅವರ 'ದಿ ಎಥಿಕ್ಸ್ ಆಫ್ ಟಚ್' ಕೃತಿಯ It's OK, Son, Everybody does it' ನಿರೂಪಕ್ಕೊಂದು ಕನ್ನಡ ರೂಪ)
Tag: Heege Agutte

ಕಾಮೆಂಟ್‌ಗಳು