ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕಾಪಾಡು ಶ್ರೀ ಸತ್ಯನಾರಾಯಣ

ಸತ್ಯಾತ್ಮ ಸತ್ಯ ಕಾಮ ಸತ್ಯ ರೂಪ ಸತ್ಯ ಸಂಕಲ್ಪ
ಸತ್ಯ ದೇವ ಸತ್ಯ ಪೂರ್ಣ ಸತ್ಯಾನಂದ

ಕಾಪಾಡು ಶ್ರೀ ಸತ್ಯನಾರಾಯಣ
ಪನ್ನಗ ಶಯನ ಪಾವನ ಚರಣ
ನಂಬಿಹೆ ನಿನ್ನ
ನಾರಾಯಣ ಲಕ್ಷ್ಮಿನಾರಾಯಣ
ನಾರಾಯಣ ಸತ್ಯನಾರಾಯಣ

ಮನವೆಂಬ ಮಂಟಪ ಬೆಳಕಾಗಿದೆ
ಹರಿನಾಮದಾ ಮಂತ್ರವೇ ತುಂಬಿದೆ
ಎಂದೆಂದು ಸ್ಥಿರವಾಗಿ ನೀನಿಲ್ಲಿರು
ನನ್ನಲ್ಲಿ ಒಂದಾಗಿ ಉಸಿರಾಗಿರು

ನನಗಾಗಿ ಏನನ್ನು ನಾ ಬೇಡೆನು
ಧನಕನಕ ಬೇಕೆಂದು ನಾ ಕೇಳೆನು
ಈ ಮನೆಯು ನೀನಿರುವ ಗುಡಿಯಾಗಲಿ
ಸುಖ ಶಾಂತಿ ನೆಮ್ಮದಿಯ ನೆಲೆಯಾಗಲಿ

ಕಣ್ಣೀರ ಅಭಿಷೇಕ ನಾ ಮಾಡಿದೆ
ಕರುಣಾಳು ನೀ ನನ್ನ ಕಾಪಾಡಿದೆ
ಬರಿದಾದ ಮಡಿಲನ್ನು ನೀ ತುಂಬಿದೆ
ನಾ ಕಾಣದಾನಂದ ನೀ ನೀಡಿದೆ.

ಚಿತ್ರ: ದಾರಿ ತಪ್ಪಿದ ಮಗ
ಸಾಹಿತ್ಯ: ವಿಜಯನಾರಸಿಂಹ
ಸಂಗೀತ: ಜಿ. ಕೆ. ವೆಂಕಟೇಶ್
ಗಾಯನ: ಪಿ. ಬಿ. ಶ್ರೀನಿವಾಸ್, ಎಸ್. ಜಾನಕಿ, ಮತ್ತು ಎ. ಪಿ. ಕೋಮಲ

Tag: Kaapaadu sree satyanaarayana, kapadu sri satya narayana

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ