ಶುಕ್ರವಾರ, ಸೆಪ್ಟೆಂಬರ್ 6, 2013

ಮ್ಯಾಲೆ ಕವ್ಕೊಂಡ ಮುಂಗಾರ ಮೋಡ

ಮ್ಯಾಲೆ ಕವ್ಕೊಂಡ ಮುಂಗಾರ ಮೋಡ
ತೂರಿ ಬರ್ತಾನ ಚಂದ್ರಾಮ ನೋಡ

ಒತ್ತರಿಸಿ ಕತ್ತಲ ರಾಹು ಕೇತು
ಚಂದುಳ್ಳ ಚಿಗರಿ ಹೆಗಲೇರಿ ಕೂತು
ಬೆಂದಂತ ಬಾಳಿಗೆ ಬೆಳ್ದಿಂಗಳ್ ಸುರಿಸಿ
ಲೋಕವ ತುಂಬಿದ ವ್ಯಾಕುಲ ಹರಿಸಿ
ಮ್ಯಾಲೆ ಕವ್ಕೊಂಡ ಮುಂಗಾರ ಮೋಡ
ತೂರಿ ಬರ್ತಾನ ಚಂದ್ರಾಮ ನೋಡ

ನೀಲಿಯ ನವುಲ ಹಾರಿಸಿಕೊಂಡು
ಚುಕ್ಕಿಯ ಬಾವುಟ ಏರಿಸಿಕೊಂಡು
ಅಂಗಳಕೆ ಬರುತಾನೆ ಆವರೆಗೂ ತಾಳು
ಬಂದಾಗ ಮಾವಯ್ಯ ಬೇಕಾದ್ದು ಕೇಳು
ಮ್ಯಾಲೆ ಕವ್ಕೊಂಡ ಮುಂಗಾರ ಮೋಡ
ತೂರಿ ಬರ್ತಾನ ಚಂದ್ರಾಮ ನೋಡ

ಮೋಡದ ನಾಡಿಗೆ ನಿನ್ನನ್ನು ಒಯ್ದು
ತೂಗಿ ತೊಟ್ಟಿಲನೆಂದು ರಂಭೇರ ಬೈದು
ಮುತ್ತನ ನಿದ್ದಿಗೆ ಕನಸೆಳೆಯೋ ಹೊತ್ತು
ಕೊಡ್ತಾನೆ ಮಾವಯ್ಯ ಬೆಚ್ಚನೆ ಮುತ್ತು
ಮ್ಯಾಲೆ ಕವ್ಕೊಂಡ ಮುಂಗಾರ ಮೋಡ
ತೂರಿ ಬರ್ತಾನ ಚಂದ್ರಾಮ ನೋಡ

ಸಾಹಿತ್ಯ: ಡಾ. ಎಚ್ ಎಸ್. ವೆಂಕಟೇಶಮೂರ್ತಿ

ಚಿತ್ರ: ಚಿನ್ನಾರಿಮುತ್ತ
ಸಂಗೀತ: ಸಿ. ಅಶ್ವಥ್
ಗಾಯನ: ಮಂಜುಳಾ ಗುರುರಾಜ್
Tag: myale kavkonda mugaaru moda, mele kavkonda mungaru moda

ಕಾಮೆಂಟ್‌ಗಳಿಲ್ಲ: