ಶುಕ್ರವಾರ, ಸೆಪ್ಟೆಂಬರ್ 6, 2013

ಆಕಾಶದೀಪವು ನೀನು

ಆಕಾಶದೀಪವು ನೀನು
ನಿನ್ನ ಕಂಡಾಗ ಸಂತೋಷವೇನು
ಆ ನೋಟದಲ್ಲೆ ಹಿತವೇನು
ಮರೆಯಾದಾಗ ನೋವೇನು 

ಕಂಡಂದೆ ಕುಣಿಯಿತು ಮನವು
ಹೂವಾಗಿ ಅರಳಿತು ತನುವು
ಹೃದಯದಾ ವೀಣೆಯನು
ಹಿತವಾಗಿ ನುಡಿಸುತಲೀ
ಆನಂದ ತುಂಬಲು ನೀನು
ನಾ ನಲಿದೆನು 

ಅನುರಾಗ ಮೂಡಿದ ಮೇಲೆ
ನೂರಾರು ಬಯಕೆಯ ಮಾಲೆ
ಹೃದಯವೂ ಧರಿಸಿದೆ
ಈ ಜೀವ ಸೋಲುತಿದೆ
ಸಂಗಾತಿಯಾದರೆ ನೀನು
ನಾ ಉಳಿವೆನು

ಚಿತ್ರ: ಪಾವನಗಂಗಾ
ರಚನೆ: ಚಿ. ಉದಯಶಂಕರ್
ಗಾಯನ: ಎಸ್ ಪಿ ಬಾಲಸುಬ್ರಮಣ್ಯಮ್
ಸಂಗೀತ: ರಾಜನ್ ಮತ್ತು ನಾಗೇಂದ್ರ

Tag: Akasha Deepavu Neenu, Aakaasha Deepavu neenuಕಾಮೆಂಟ್‌ಗಳಿಲ್ಲ: