ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಮ್ಮಾ ಬಾರಮ್ಮಾ

ಅಮ್ಮಾ ಬಾರಮ್ಮಾ ನಮ್ಮ ತಾಯಿ ಬಾರಮ್ಮಾ
ಅಮ್ಮಾ ಬಾರಮ್ಮಾ ಜಗದಾಂಬ ಬಾರಮ್ಮಾ

ಮೂರುಲೋಕದ ಒಡೆಯ ಶಿವನ ರಾಣಿಯೆ ಬಾರಮ್ಮ
ಗಜಮುಖ ಜನನಿಯೆ ಧೀರ ಗಂಭೀರಳೆ ಗಾಯತ್ರಿದೇವಿಯೆ ಬಾರಮ್ಮ 

ಅಂಬಾಭವಾನಿ ಪರಶಿವನರಗಿಣಿ ಗಂಗಾಭವಾನಿಯೆ ಬಾರಮ್ಮ
ಖಡ್ಗಧಾರಿಣಿ ತ್ರಿಶೂಲಪಾಣಿ ಚಾಮುಂಡೇಶ್ವರಿ ಬಾರಮ್ಮ

ರಾಜಾಧಿರಾಜರಿಂದ ಪೂಜಿಸಲ್ಪಡುವ ರಾಜರಾಜೇಶ್ವರಿ ಬಾರಮ್ಮ
ಜಪವನು ಅರಿಯೆನು ತಪವನು ಅರಿಯೆನು ಮೂಢಳ ಕರುಣಿಸಿ ಬಾರಮ್ಮ 

ಮೂಜಗವಂದಿತೆ ಮುರಹರವಲ್ಲಭೆ ಮೂಕಾಂಬಿಕೆ ತಾಯಿ ಬಾರಮ್ಮ
ಶಂಕರಸ್ತುತಿಪೆ ಶ್ರೀಚಕ್ರಪೂಜಿತೆ ಶಾರದ ದೇವಿಯೆ ಬಾರಮ್ಮ

ಶೃಂಗೇರಿಯಲ್ಲಿ ನಗುನಗುತಿರುವ ಭಾರತಿದೇವಿಯೆ ಬಾರಮ್ಮ
ಕಂಚಿ ಕಾಮಾಕ್ಷಿ ಮಧುರೆ ಮೀನಾಕ್ಷಿ ಕಾಶಿ ವಿಶಾಲಾಕ್ಷಿ ಬಾರಮ್ಮ

ಮಹಿಷಾಪುರದಲಿ ನೆಲಸಿರುವಂತಹ ಮಹಿಷಮರ್ದಿನಿ ಬಾರಮ್ಮ
ಶ್ರೀ ಸಿರಿಲಕ್ಷ್ಮಿ ಪ್ರಸನ್ನ ಲಕ್ಷ್ಮಿ ಭಾಗ್ಯದ ಲಕ್ಷ್ಮಿಯೆ ಬಾರಮ್ಮ 

ಶ್ರಾವಣಮಾಸದಲಿ ಪೂಜಿಸಲ್ಪಡುವ ವರಮಹಾಲಕ್ಷ್ಮಿಯೆ ಬಾರಮ್ಮ
ಗಜಮುಖಗೌರಿ ವರಸಿರಿಗೌರಿ ಮಂಗಳಗೌರಿಯೆ ಬಾರಮ್ಮ 

ಭಾದ್ರಪದಮಾಸದಲಿ ಪೂಜಿಸಲ್ಪಡುವ ಸ್ವರ್ಣಗೌರಿಯೆ ಬಾರಮ್ಮ
ನವರಾತ್ರಿದೇವಿ ಮೂಲಸರಸ್ವತಿ ಅಷ್ಟಮಿ ದುರ್ಗಿಯೆ ಬಾರಮ್ಮ 

ದಶಮಿಯ ದಿನದೊಳು ವಿಜಯಂಗೈವ ವಿಜಯಲಕ್ಷ್ಮಿಯೆ ಬಾರಮ್ಮ
ಕಾಮಾಕ್ಷಿದೇವಿ ಮೀನಾಕ್ಷಿದೇವಿ ಇಂದ್ರಾಕ್ಷಿದೇವಿಯೆ ಬಾರಮ್ಮ
ಕಾಮಿತಫಲಗಳ ನೀಡುವಂಥ ಕರುಣಾಸಾಗರಿ ಬಾರಮ್ಮ



Tag: Amma Baramma

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ