ಶನಿವಾರ, ಸೆಪ್ಟೆಂಬರ್ 7, 2013

ಭಾವವೆಂಬ ಹೂವು ಅರಳಿ

ಭಾವವೆಂಬ ಹೂವು ಅರಳಿ
ಗಾನವೆಂಬ ಗಂಧ ಚೆಲ್ಲಿ
ರಾಗವೆಂಬ ಜೇನ ಹೊನಲು
ತುಂಬಿ ಹರಿಯಲಿ
ಜಗವ ಕುಣಿಸಿ ತಣಿಸಲಿ

ಗಾನಕೆ ನಲಿಯದ ಮನಸೇ ಇಲ್ಲ
ಗಾನಕೆ ಮಣಿಯದ ಜೀವವೆ ಇಲ್ಲ
ಗಾನಕೆ ಒಲಿಯದ ದೇವರೆ ಇಲ್ಲ
ಗಾನವೇ ತುಂಬಿದೆ ಈ ಜಗವೆಲ್ಲಾ

ದಾಸರು ಹರಿಯ ಸ್ಮರಣೆಯ ಮಾಡಿ
ದರುಶನ ಪಡೆದರು ಅನುದಿನ ಪಾಡಿ
ಶರಣರು ಹರನಾ ನೆನೆಯುತ ಬೇಡಿ
ಶಿವನಾ ಕಂಡರು ವಚನವ ಹಾಡಿ

ವಿಶ್ವವೆ ಅರಳಿತು ಓಂಕಾರದಲಿ
ವಾಣಿಯ ವೀಣೆಯ ಝೇಂಕಾರದಲಿ
ಕುಣಿಯಿತು ನಾರದನ ಗಾನದಲ್ಲೀ
ತಣಿಯಿತು ಕೃಷ್ಣನ ಮುರಳಿಯಲೀs...

ಚಿತ್ರ: ಉಪಾಸನೆ
ರಚನೆ: ಚಿ. ಉದಯಶಂಕರ್
ಸಂಗೀತ : ವಿಜಯಭಾಸ್ಕರ್
ಗಾಯನ : ವಾಣಿ ಜಯರಾಂ
  
Tag: bhavavemba hoovu arali, bhaavavemba huvu arali,

ಕಾಮೆಂಟ್‌ಗಳಿಲ್ಲ: