ಶುಕ್ರವಾರ, ಸೆಪ್ಟೆಂಬರ್ 6, 2013

ಸದಾ ಕಣ್ಣಲಿ ಪ್ರಣಯದ ಕವಿತೆ ಹಾಡುವೆ

ಸದಾ ಕಣ್ಣಲಿ ಪ್ರಣಯದ ಕವಿತೆ ಹಾಡುವೆ,
ಸದಾ ನನ್ನಲಿ ಒಲವಿನಬಯಕೆ ತುಂಬುವೆ
ಸದಾ ಕಣ್ಣಲಿ ಪ್ರಣಯದ ಕವಿತೆ ಹಾಡುವೆ

ಕನ್ನೆರಡು ಕಮಲಗಳಂತೆ, ಮುಂಗುರುಳು ದುಂಬಿಗಳಂತೆ,
ನಾಸಿಕವು ಸಂಪಿಗೆಯಂತೆ, ನೀ ನಗಲು ಹೂಬಿರಿದಂತೆ,
ನಡೆಯುತಿರೆ ನಾಟ್ಯದಂತೆರತಿಯೇ ಧರೆಗಿಳಿದಂತೆ
ಈ ಅಂದಕೆ ಸೋತೆನು, ಸೋತೆ ನಾನು
ಸದಾ ಕಣ್ಣಲಿ ಪ್ರಣಯದ ಕವಿತೆ ಹಾಡುವೆ

ಗುಡುಗುಗಳು ತಾಳದಂತೆ, ಮಿಂಚುಗಳು ಮೇಳದಂತೆ,
ಸುರಿವ ಮಳೆ ನೀರೆಲ್ಲ, ಪನ್ನೀರ ಹನಿ ಹನಿಯಂತೆ,
ಜೊತೆಯಾಗಿ ನೀನಿರೆ ಸಾಕು ಭೂಲೋಕ ಸ್ವರ್ಗದಂತೆ ,
ಈ ಪ್ರೇಮಕೆ ಸೋತೆನು, ಸೋತೆ ನಾನು
ಸದಾ ಕಣ್ಣಲಿ ಪ್ರಣಯದ ಕವಿತೆ ಹಾಡುವೆ

ಸದಾ ಕಣ್ಣಲಿ ಪ್ರಣಯದ ಕವಿತೆ ಹಾಡುವೆ,
ಸದಾ ನನ್ನಲಿ ಒಲವಿನಬಯಕೆ ತುಂಬುವೆ
ಸದಾ ಕಣ್ಣಲಿ ಪ್ರಣಯದ ಕವಿತೆ ಹಾಡುವೆ

ಚಿತ್ರ: ಕವಿರತ್ನ ಕಾಳಿದಾಸ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಎಂ. ರಂಗರಾವ್
ಗಾಯನ: ರಾಜ್ ಕುಮಾರ್ ಮತ್ತು ವಾಣಿ ಜಯರಾಂ


Tag: Sadaa kannali pranayada kavite haaduve

ಕಾಮೆಂಟ್‌ಗಳಿಲ್ಲ: