ಬುಧವಾರ, ಸೆಪ್ಟೆಂಬರ್ 4, 2013

ಚೆಲುವಿನ ಕಲೆ ಬಾಳ ಲೀಲೆ


ಚೆಲುವಿನ ಕಲೆ ಬಾಳ ಲೀಲೆ 
ಭಾವದ ಅಲೆ ಮೇಲೆ 
ಜೀವದ ಉಯ್ಯಾಲೆ

ಮೌನದ ಭಾಷೆಯ ಮನಸಿನ ಗೀತೆ 
ನಾದದ ಲೀಲೆಯ ಆಡಿದೆಯಂತೆ
ಎಂದಿಗು ಒಂದೇ ಪಲ್ಲವಿಯಂತೆ
ಆದರು ಅದುವೆ ಹೊಸ ಕವಿತೆ
ಚೆಲುವಿನ ಕಲೆ ಬಾಳ ಲೀಲೆ 
ಭಾವದ ಅಲೆ ಮೇಲೆ 
ಜೀವದ ಉಯ್ಯಾಲೆ

ಪ್ರೀತಿಯ ಪ್ರಭೆಯೆ ಚಿರವಾಗಿರಲಿ 
ನೂರು ವಸಂತವೂ ಸಂತಸ ತರಲಿ
ನಾಳಿನನಾಟ ಔತಣದಲ್ಲಿ
ರಸಿಕತೆಯೆಲ್ಲ ತುಂಬಿಸಿ ನಗಲಿ
ಚೆಲುವಿನ ಕಲೆ ಬಾಳ ಲೀಲೆ 
ಭಾವದ ಅಲೆ ಮೇಲೆ 
ಜೀವದ ಉಯ್ಯಾಲೆ

ಸಾಹಿತ್ಯ:  ವಿಜಯನಾರಸಿಂಹ


Tag: Cheluvina kale baala leele

ಕಾಮೆಂಟ್‌ಗಳಿಲ್ಲ: