ಶನಿವಾರ, ಸೆಪ್ಟೆಂಬರ್ 7, 2013

ಎಂದೆಂದೂ ನಿನ್ನನು ಮರೆತೂ,

ಎಂದೆಂದೂ ನಿನ್ನನು ಮರೆತೂ, ಬದುಕಿರಲಾರೆ
ಇನ್ನೆಂದೂ  ನಿನ್ನನು ಅಗಲೀ,  ನಾನಿರಲಾರೆ
ಒಂದು ಕ್ಷಣ ನೊಂದರು ನೀ, ನಾ ತಾಳಲಾರೆ
ಒಂದು ಕ್ಷಣ ವಿರಹವನೂ,  ನಾ ಸಹಿಸಲಾರೆ

ಸಾಗರ ಹುಣ್ಣಿಮೆ ಕಂಡು, ಉಕ್ಕುವ ರೀತಿ
ನಿನ್ನನು ಕಂಡ ದಿನವೇ, ಹೊಮ್ಮಿತು ಪ್ರೀತಿ
ಓಹೋಹೋಹೊ, ನೀ ಕಡಲಾದರೆ, ನಾ ನದಿಯಾಗುವೆ,
ನಿಲ್ಲದೆ ಓಡಿ, ಓಡಿ, ನಿನ್ನ
ಸೇರುವೆ, ಸೇರುವೆ, ಸೇರುವೇ

ನೀ ಹೂವಾದರೆ ನಾನು, ಪರಿಮಳವಾಗಿ
ಸೇರುವೆ ನಿನ್ನೊಡಲನ್ನು, ಬಲು ಹಿತವಾಗಿ
ಹೋಹೋಹೋಹೊ, ನೀ ಮುಗಿಲಾದರೆ, ನಾ ನವಿಲಾಗುವೆ,
ತೇಲುವ ನಿನ್ನ ನೋಡಿ, ನೋಡಿ
ಹಾಡುವೆ, ಕುಣಿಯುವೆ, ನಲಿಯುವೇ

ಸಾವಿರ ಜನುಮವೆ ಬರಲಿ, ಬೇಡುವುದೊಂದೇ,
ನನ್ನವಳಾಗಿರು ನೀನೂ, ಎನ್ನುವುದೊಂದೇ
ಓಹೋಹೋಹೊ, ನೀನಿರುವುದಾದರೆ, ಸ್ವರ್ಗವು ಈ ಧರೆ,
ನಾನಿನ್ನ ಜೋಡಿಯಾಗಿ ಎಂದೂ
ಬಾಳುವೆ, ಬಾಳುವೆ, ಬಾಳುವೇ
ಎಂದೆಂದೂ,,, ಎಂದೆಂದೂ
ನಿನ್ನನು ಮರೆತೂ, ಬದುಕಿರಲಾರೇ
ಇನ್ನೆಂದೂ ... ಇನ್ನೆಂದೂ
ಇನ್ನೆಂದೂ  ನಿನ್ನನು ಅಗಲೀ,  ನಾನಿರಲಾರೆ
ಒಂದು ಕ್ಷಣ ನೊಂದರು ನೀ, ನಾ ತಾಳಲಾರೆ
ಒಂದು ಕ್ಷಣ ವಿರಹವನೂ,  ನಾ ಸಹಿಸಲಾರೆ

ಚಿತ್ರ: ಎರಡು ಕನಸು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್ ನಾಗೇಂದ್ರ
ಗಾಯನ: ಪಿ. ಬಿ. ಶ್ರೀನಿವಾಸ್ ವಾಣಿ ಜಯರಾಂ


Tag: Endendu ninnanu maretu, endendoo ninnanu maretoo

ಕಾಮೆಂಟ್‌ಗಳಿಲ್ಲ: