ಮಂಗಳವಾರ, ಅಕ್ಟೋಬರ್ 29, 2013

ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರು

ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರು

ಕನ್ನಡದಲ್ಲಿ ಭಾವಗೀತೆಗಳೆಂದರೆ ನೆನಪಾಗುವ ಒಂದು  ಪ್ರಮುಖ ಹೆಸರು ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರು’.  ನಮ್ಮ ಭಾವಗೀತೆಗಳ ಲಕ್ಷ್ಮೀನಾರಾಯಣ ಭಟ್ಟರಿಗೆ  ಅಕ್ಟೋಬರ್ 29ರಂದು ಹುಟ್ಟುಹಬ್ಬ.  ಅವರು ಜನಿಸಿದ ವರ್ಷ 1936.  ತಮ್ಮ ಗೀತೆಗಳಲ್ಲಿ ಸೊಗಸಾದ ನವಯೌವನವನ್ನು ತುಂಬಿತುಳುಕಿಸುವ ಈ ಕವಿ ಎಪ್ಪತ್ತೆಂಟು ವಸಂತಗಳನ್ನು ಪೂರೈಸಿ ತಮ್ಮ ಕಾವ್ಯದಲ್ಲಿ ಸುಮಧುರ ವಂಸತಗಳ ಹರ್ಷಭಾವಗಳನ್ನು ಚೆಲ್ಲುತ್ತಲೇ ಸಾಗಿದ್ದಾರೆ. 

ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ ಅಂದ ತಕ್ಷಣ ನೆನಪಿಗೆ ಬರುವುದು ಸುಂದರ ಭಾವ ಗೀತೆಗಳು.   ಶಿಶುನಾಳ ಷರೀಫ್ ಅಂತ ಮಹಾನ್ ಪಾರಮಾರ್ಥಿಕ ಕವಿಯ ಹಾಡುಗಳನ್ನು ನಮಗೆಲ್ಲ ಪರಿಚಯಿಸಿ ಷರೀಫ್ ಭಟ್ರು’ ಎಂದೇ ವಿದ್ವಾಂಸರಿಂದ  ಕರೆಸಿಕೊಳ್ಳುತ್ತಿದ್ದ ಕವಿವರೇಣ್ಯರಿವರು.  ಅಂದಿನ ಭಾವ ಸಂಗಮದಲ್ಲಿ ಈ ಬಾನು ಈ ಚುಕ್ಕಿಈ ಹೂವು ಈ ಹಕ್ಕಿತೇಲಿಸಾಗುವ ಮುಗಿಲು ಹರುಷ ಉಕ್ಕಿ’ ಎಂದು ಹರುಷ ಹಂಚುತ್ತ ಬಂದ ಭಟ್ಟರುಸಾಹಿತ್ಯ ಗೊತ್ತಿಲ್ಲದೆ ಲಘು ಸಂಗೀತದ ರುಚಿಯಿಂದ ಸಾಹಿತ್ಯದ ಬಾಗಿಲಾಚೆ ಓಡಾಡುತ್ತಿದ್ದ ನಮ್ಮಂತವರಿಗೂ  ಒಂದಿಷ್ಟು ಸಾಹಿತ್ಯದ ನಶೆ ಹತ್ತುವಂತೆ ಮಾಡಿದ್ದನ್ನು  ಮರೆಯುವಂತೆಯೇ ಇಲ್ಲ. 

ಮುಂದೆ ದೀಪಿಕಾ’, ಭಾವೋತ್ಸವ’, ‘ಬಾರೋ ವಸಂತ’, ‘ನೀಲಾಂಜನ’, ‘ಅರುಣಗೀತೆ’, ‘ಹೊಳೆ ಸಾಲಿನ ಮರ’, ‘ಬೆಳಕಿನ ಹಾಡು’  ಹೀಗೆ ಹಲವಾರು ಕ್ಯಾಸೆಟ್ಗಳ ಮೂಲಕ ಮಾತ್ರವಲ್ಲದೆ,  ಅದನ್ನು ಕೇಳಿದ ಮೇಲೆ ಗುನುಗಲಿಕ್ಕಾಗಿ ಹುಡುಕಿ ಹೊರಟ ಆ ಪದ್ಯ  ಪುಸ್ತಕಗಳ ಮೂಲಕ ಕೂಡಾ ಹತ್ತಿರವಾಗುತ್ತಲೇ ಬಂದವರು.  ಶಿಶುನಾಳ ಶರೀಫ್ ಸಾಹೇಬರ ಹಾಡುಗಳನ್ನು ಅವರು ಪ್ರಖ್ಯಾತಿ ಪಡಿಸಿದ ರೀತಿಯಂತೂ ಅನನ್ಯವಾದದ್ದು. ಕವಿತೆಗಳ ರಚನೆಯಲ್ಲದೆನುರಿತ ವಿಮರ್ಶಕಾರಾಗಿಸಮರ್ಥ ಅನುವಾದಕರಾಗಿಅಪ್ರತಿಮ ವಾಗ್ಮಿಗಳಾಗಿ ಭಟ್ಟರುಅಪಾರವಾಗಿ ಕೆಲಸ ಮಾಡಿದ್ದಾರೆ.  ಶಿವಮೊಗ್ಗದಲ್ಲಿ ಜನಿಸಿದ ಭಟ್ಟರುಮೈಸೂರಿನಲ್ಲಿ ಕಾಲೇಜು ವ್ಯಾಸಂಗ ನಡೆಸಿಬೆಂಗಳೂರಿನಲ್ಲಿ ಅಧ್ಯಾಪನ ವೃತ್ತಿ ನಡೆಸಿದವರು.  ನಂತರದಲ್ಲಿ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸಹಾ ಕೆಲಸ ನಿರ್ವಹಿಸಿದ್ದರು. 

ಭಟ್ಟರ ಮೊದಲ ಕಾವ್ಯ ಸಂಕಲನ ವೃತ್ತ’.  ಇತ್ತೀಚಿನ ವರ್ಷದಲ್ಲಿ  ಬಿಡುಗಡೆಯಾದ ಅವರ ಸಮಗ್ರ ಕಾವ್ಯ ಸಂಪುಟ’ 830 ಪುಟಗಳಷ್ಟು ವಿಸ್ತಾರವಾದುದು.  ಅದರಲ್ಲಿ ವೃತ್ತ’, ‘ಸುಳಿ’, ‘ನೆನ್ನೆಗೆ ಮಾತು’, ‘ಚಿತ್ರಕೂಟ’, ‘ಹೊಳೆ ಸಾಲಿನ ಮರ’, ‘ಅರುಣ ಗೀತೆ’, ‘ದೆವ್ವದ ಜತೆ ಮಾತುಕತೆ’, ಎಂಬ ಏಳು ಸ್ವತಂತ್ರ ಕವನ ಸಂಗ್ರಹಗಳೂ, ‘ಬೇಲಿಯಾಚೆಯ ಹೂವು’ ಎಂಬ ಬಂಗಾಳಿ ಕವಿತೆಗಳ ಅನುವಾದವೂಅಂಗ್ಲ ಕವಿಗಳ ಕವಿತಾನುವಾದಗಳೂ ಸೇರಿವೆ.  ಇದರೊಂದಿಗೆ ಅವರ ನಾನೂರಕ್ಕೂ ಹೆಚ್ಚು ಭಾವಗೀತೆಗಳೂನೂರಕ್ಕೂ ಹೆಚ್ಚು ಮಕ್ಕಳ ಪದ್ಯಗಳೂ ಇವೆ.  ಶೇಕ್ಸ್ಪಿಯರ್ಯೇಟ್ಸ್ ಮತ್ತು ಎಲಿಯಟ್ ಮುಂತಾದ ಅಪ್ರತಿಮ ಕವಿತೆಗಳನ್ನು  ಕನ್ನಡೀಕರಿಸಿದ ಕೀರ್ತಿ ಕೂಡಾ ಭಟ್ಟರಿಗೆ ಸಲ್ಲುತ್ತದೆ.

ಬಹುಭಾಷಾ ವಿದ್ವಾಂಸರಾದ ಲಕ್ಷ್ಮೀನಾರಾಯಣ ಭಟ್ಟರು ಸಂಸ್ಕೃತದ ಪ್ರಸಿದ್ಧ ನಾಟಕ ಶೂದ್ರಕನ ಮೃಚ್ಚಕಟಿಕವನ್ನು ಕನ್ನಡದಲ್ಲಿ ಸೊಗಸಾಗಿ ಮೂಡಿಸಿದ್ದು ಆ ಕೃತಿ ಅಪಾರ ಮೆಚ್ಚುಗೆ ಗಳಿಸಿದೆ.  ಅವರ ಊರ್ವಶೀ’ ಕಾವ್ಯ ನಾಟಕವು ‘’ಪೌರಾಣಿಕಸಮಕಾಲೀನಸಾಮಾಜಿಕ ಚಿಂತನೆಗಳ ಸ್ವರೂಪಗಳನ್ನು ಒಳಗೊಂಡಿದ್ದುಕಾವ್ಯ-ಸೌಂದರ್ಯ-ಶಕ್ತಿಗಳ ಪ್ರತೀಕವಾಗಿವೆ’ ಎಂದು ಮಹಾನ್ ಪಂಡಿತರುಗಳು ಅಭಿಪ್ರಾಯ ಪಡುತ್ತಾರೆ. ಕನ್ನಡದಲ್ಲಿ ಮೂಡಿಬಂದ ನವ್ಯಕಾವ್ಯದ ಅಲೆಗಳ ರಭಸಕ್ಕೆ  ಭಾವಗೀತೆಗಳ ಕಾಲ ಆಗಿಹೊಯಿತೇನೋ ಎಂಬಂತಹ ಸಮಯದಲ್ಲಿ ಅದಕ್ಕೆ ಕಾಯಕಲ್ಪ’ ನೀಡಿ ನೂರಾರು ಭಾವಗೀತೆಗಳನ್ನು ರಚಿಸಿದವರು ಭಟ್ಟರು.

ಧ್ವನಿಮುದ್ರಿಕೆಗಳ ಮೂಲಕ ಭಾವಗೀತೆಗಳನ್ನು ಮಾತ್ರವಲ್ಲದೆ,  ‘ಕನ್ನಡ ಸಾಹಿತ್ಯ ಚರಿತ್ರೆಯನ್ನು’ ಸಹಾ ಧ್ವನಿಮುದ್ರಿಕೆಗಳ ಮೂಲಕ ಪರಿಚಯ ಮಾಡಿಕೊಟ್ಟಿದ್ದಾರೆ.  ಸಿ.ಡಿ ಯಲ್ಲಿ ಕನ್ನಡ ಭಾಷೆ ಕ್ರಿ.ಶ. 250ರಿಂದ ಇಂದಿನವರೆಗೂ ಹಾದು ಬಂದಿರುವ ವಿಷಯದ ದಿಗ್ದರ್ಶನವಿದೆ.  ಒಂದು ಸಾವಿರ ವರ್ಷಕ್ಕೂ ಹೆಚ್ಚಿನ ಇತಿಹಾಸವುಳ್ಳ ಕನ್ನಡ ಸಾಹಿತ್ಯವನ್ನು ನಾಲ್ಕು ಮಜಲುಗಳಲ್ಲಿ ಚಿತ್ರಿಸಲಾಗಿದೆ.  ಕವಿರಾಜಮಾರ್ಗದ ಹಿಂದಿದ್ದ ಪೂರ್ವದ ಹಳೆಗನ್ನಡ ಕಾಲಪಂಪರನ್ನಪೊನ್ನರ ಹಳಗನ್ನಡ ಕಾಲವಚನಕಾರರಿಂದ ಆರಂಭಿಸಿ ಕುಮಾರವ್ಯಾಸಚಾಮರಸಲಕ್ಷ್ಮೀಶಷಡಕ್ಷರಿ, ಮುದ್ದಣ್ಣರ ನಡುಗನ್ನಡ ಕಾಲನಂತರದ ಹೊಸ ಕನ್ನಡ ಬೆಳವಣಿಗೆಯ ಸವಿಸ್ತಾರ ಚಿತ್ರಣ ಈ ಧ್ವನಿಮುದ್ರಿಕೆಗಳ ವಸ್ತು.  ಇವುಗಳ ನಿರೂಪಣೆಯಲ್ಲಿ  ಲಕ್ಷ್ಮೀನಾರಾಯಣ ಭಟ್ಟರು ಹಲವಾರು ಬಾರಿ ಆಹ್ವಾನಿತರಾಗಿ ಅಮೆರಿಕಾಗೆ ತೆರಳಿ ನೂರಾರು ಸಾಹಿತ್ಯೋಪನ್ಯಾಸಗಳನ್ನು ನೀಡಿದ್ದಾರೆ.

ಭಟ್ಟರಿಗೆ ಹಲವಾರು ಗೌರವಗಳು ಸಂದಿವೆ.  ರಾಜ್ಯ ಸಾಹಿತ್ಯ ಅಕಾಡೆಮಿಯು ಮೂರು ಬಾರಿ ಪ್ರಶಸ್ತಿ ನೀಡಿ ಗೌರವಿಸಿದೆ.  ರಾಜ್ಯೋತ್ಸವ ಪ್ರಶಸ್ತಿಶಿವಾರಾಮ ಕಾರಂತ ಪ್ರಶಸ್ತಿವರ್ಧಮಾನ್ ಪ್ರಶಸ್ತಿಮಾಸ್ತಿ ಪ್ರಶಸ್ತಿ  ಹೀಗೆ ಬಹಳಷ್ಟು ಪ್ರಶಸ್ತಿಗಳೂ ಬಂದಿವೆ.  ಇವೆಲ್ಲಕ್ಕೂ ಮಿಗಿಲಾಗಿ  ಕನ್ನಡಿಗರ ಪ್ರೀತಿಯ ಸಿಂಹಾಸನದಲ್ಲಿ ಅವರು ಸದಾ ವಿರಾಜಮಾನರಾಗಿದ್ದಾರೆ.  ಬಹಳಷ್ಟು ಕಾಲ ಅವರ ಸಾಹಿತ್ಯ ಸಿಂಚನ ಕನ್ನಡ ಲೋಕಿಗರಿಗೆ ದೊರಕುತ್ತಿರಲಿಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರ ಜೀವನ ಸಂತಸವಾಗಿರಲಿ ಎಂಬುದು ನಮ್ಮ ನಲ್ಮೆಯ ಹಾರೈಕೆ.

Tag: N. S. Lakshminarayana Bhat

ಕಾಮೆಂಟ್‌ಗಳಿಲ್ಲ: