ಶನಿವಾರ, ಅಕ್ಟೋಬರ್ 26, 2013

ನಾದಮಯ ಈ ಲೋಕವೆಲ್ಲ

ನಾದಮಯ….
ನಾದಮಯ ಈ ಲೋಕವೆಲ್ಲ
ಕೊಳಲಿಂದ ಗೋವಿಂದ ಆನಂದ ತಂದಿರಲು
ನದಿಯ ನೀರು ಮುಗಿಲ ಸಾಲು
ಮುರಳಿಯ ಸ್ವರದಿ ಬೆರೆತು ಚಲನೆ ಮರೆತು ನಿಂತಿರಲು
ನಾದಮಯ ಈ ಲೋಕವೆಲ್ಲಾ
ನಾದಮಯ

ಸ್ವರಗಳ ಮಾಧುರ್ಯ ರಾಗದ ಸೌಂದರ್ಯ
ಮೃಗಗಳ ತಣಿಸೆ, ಖಗಗಳ ಕುಣಿಸೆ
ಸಡಗರದಿಂದ ಗಗನದ ಅಂಚಿಂದ,
ಸಡಗರದಿಂದ ಗಗನದ ಅಂಚಿಂದ
ಸುರರು ಬಂದು, ಹರಿಯ ಕಂಡು ಹರುಷದಿ
ಭುವಿಯೆ ಸ್ವರ್ಗ ಭುವಿಯೆ ಸ್ವರ್ಗ ಎನುತಿರಲು
ನಾದಮಯ ಈ ಲೋಕವೆಲ್ಲಾ
ಕೊಳಲಿಂದ ಗೋವಿಂದ ಆನಂದ ತಂದಿರಲು
ನಾದಮಯ....

ಚಿತ್ರ: ಜೀವನ ಚೈತ್ರ
ಸಾಹಿತ್ಯ:  ಚಿ. ಉದಯಶಂಕರ್
ಸಂಗೀತ: ಎಂ. ರಂಗರಾವ್
ಗಾಯನ: ರಾಜ್‌ ಕುಮಾರ್ಕಾಮೆಂಟ್‌ಗಳಿಲ್ಲ: