ಮೂಡಲ್ ಕುಣಿಗಲ್ ಕೆರೆ
ಮೂಡಲ್ ಕುಣಿಗಲ್ ಕೆರೆ ನೋಡೋರಿಗೊಂದ್ವೈಭೋಗ
ಮೂಡಿ ಬರ್ತಾನೆ ಚಂದಿರಾಮ! ತಾನಂದನ್ನೊ!
ಅಂತಂತ್ರೀಸಿ ನೋಡೋರ್ಗೆ ಎಂಥಾ ಕುಣಿಗಲುಕೆರೆ
ಸಂತೆ ಹಾದೀಲಿ ಕಲ್ಲು ಕಟ್ಟೆ! ತಾನಂದನ್ನೊ!
ಬಾಳೆಯ ಹಣ್ಣಿನಂತೆ ಬಾಗಿ ಕುಣಿಗಲು ಕೆರೆ
ಭಾವಾ ತಂದಾನೆ ಬಣ್ಣದ್ ಸೀರೆ! ತಾನಂದನ್ನೊ!
ನಿಂಬೇಯ ಹಣ್ಣಿನಂತೆ ತುಂಬಿ ಕುಣಿಗಲು ಕೆರೆ
ಅಂದ ನೋಡಲು ಶಿವ ಬಂದ್ರು! ತಾನಂದನ್ನೊ!
ಅಂದಾವ ನೋಡಲು ಶಿವಬಂದು ಶಿವಮೊಗ್ಗಿ
ಕಬ್ಬಕ್ಕಿ ಬಾಯ ಬಿಡುತಾವೆ! ತಾನಂದನ್ನೊ!
ಕಬ್ಬಕ್ಕಿನೇ ಬಾಯ ಬಿಡುತಾವೆ ಇಬ್ಬೀಡ
ಗಬ್ಬದ್ ಹೊಂಬಾಳೆ ನಡುಗ್ಯಾವೆ! ತಾನಂದನ್ನೊ!
ಹಾಕ್ಕೋಕೊಂದಾರುಗೋಲು ನೋಕೋಕ್ಕೊಂದೂರು ಗೋಲು
ಬೊಬ್ಬೆ ಹೊಡೆದಾವು ಬಾಳೆಮೀನು! ತಾನಂದನ್ನೊ!
ಬೊಬ್ಬೆಯ ಹೊಡೆದಾವೆ ಬಾಳೆಮೀನು ಕೆರೆಯಾಗ
ಗುಬ್ಬಿ ಸಾರಂಗ ನಗುತಾವೆ! ತಾನಂದನ್ನೊ!
ಸಾಹಿತ್ಯ: ಜಾನಪದ
Tag: Moodal kunigal kere, Mudal Kunigal kere
Tag: Moodal kunigal kere, Mudal Kunigal kere
ಕಾಮೆಂಟ್‌ಗಳು