ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ದೇವ ತಾನೆ ಜಗದ ತಂದೆ


ದೇವ ತಾನೆ ಜಗದ ತಂದೆ
ನಾವು ಅವನ ಮಕ್ಕಳು
ಭೂಮಿ ದೇವಿ ನಮ್ಮ ತಾಯಿ
ಅವಳೆ ನಮ್ಮ ಹೆತ್ತಳು

ಒಂದೆ ಮನೆಯ ಮಂದಿ ನಾವು
ಬಂಧು ಬಳಗ ಎಲ್ಲವು
ಪ್ರೀತಿ-ಕರುಣೆ ಮೀರಿದಂಥ
ಧರ್ಮ ಬೇರೆ ಇಲ್ಲವು

ಒಂದೆ ಕೈಯ ಬೆರಳುಗಳಲು
ಒಂದೆ ಬಗೆಯು ಎಲ್ಲಿದೆ?
ಭಾಷೆ-ಬಣ್ಣ, ರೀತಿ-ನೀತಿ
ರೂಪ ಭೇದ ಇಲ್ಲಿದೆ

ಒಬ್ಬಗೊಬ್ಬ ನೆರವು ನೀಡಿ
ಸತ್ಯಪಥದಿ ನಡೆಯುವ
ಬದುಕಿ ಒಟ್ಟು ಬದುಕ ಬಿಟ್ಟು
ಶಾಂತಿ ಸುಖವ ಪಡೆಯುವ

ಸಾಹಿತ್ಯ: ಪಳಕಳ ಸೀತಾರಾಮಭಟ್ಟ

Tag: Deva tane jagada tande

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ