ಕೋಟಿ ಪಲ್ಲವಿ ಹಾಡುವ ಕನಸು ಇದು
ಕೋಟಿ
ಪಲ್ಲವಿ ಹಾಡುವ ಕನಸು ಇದು
ಕನಸುಗಾರನ ಕಣ್ಣಿನ ಬೆಳಕು ಇದು
ಈ ಯೌವನ ತುಂಬಿದ ಬದುಕಿನಲಿ
ದಿನ ಬೆಳ್ಳಿಹಬ್ಬದ ನಗುವಿನಲಿ
ಒಂದೇ ಇಬ್ಬನಿಯೊಳಗೆ ಕೋಟಿ ಸೂರ್ಯನ ಬಿಂಬವಿದೆ
ಒಂದೇ ಕೊರಳಿನ ದನಿಗೇ ಕೋಟಿ ಹೃದಯದ ಸ್ಪರ್ಶವಿದೆ
ಕೋಟಿ ಪಲ್ಲವಿ ಹಾಡುವ ಕನಸು ಇದು
ಕನಸುಗಾರನ ಕಣ್ಣಿನ ಬೆಳಕು ಇದು
ಮನಸು ಮರೆತು ಹಾಡಿದರೆ ಪದಗಳೇ ಇಂಚರ
ಮೈಯ ಮರೆತು ಹಾಡಿದರೆ ಪದಗಳೇ ಪಂಜರ
ಕೋಗಿಲೆಗಳ ಗುಂಪಲಿ ಹುಟ್ಟೋ ಗುಟ್ಟಿನ ಮಾತುಗಳು
ಪ್ರತಿ ಕವಿಗಳ ಕಿವಿಗಳ ಸೇರಿ ಮೂಡಿತು ಸಾಲುಗಳು
ಏಳು ಸ್ವರಗಳೇ ನಮ್ಮ ಏಳೂ ಜನ್ಮದಲೂ
ಧಮನೀ ಧಮನಿಲಿ ಸರಿಗಮಪದನಿ ಮೀಟೋ ತಂತಿಗಳು
ಕೋಟಿ ಪಲ್ಲವಿ ಹಾಡುವ ಕನಸು ಇದು
ಕನಸುಗಾರನ ಕಣ್ಣಿನ ಬೆಳಕು ಇದು
ನೂರು ನೂರು ತಿರುವುಗಳು ಬದುಕಿನ ದಾರಿಗೆ
ಯಾರೋ ದಾರಿದೀಪಗಳು ಅವರವರ ಪಾಲಿಗೆ
ಭರವಸೆಯಲಿ ನಡೆಯುವ ರೀತಿ ತುಂಬಿದೆ ಎದೆಯಲ್ಲಿ
ಬಯಸುವ ಪ್ರತಿನಿಮಿಷಕು ಸ್ಫೂರ್ತಿ ದೇವರೇ ನಮಗಿಲ್ಲಿ
ಕೋಟಿ ಪಲ್ಲವಿ ಹಾಡುವ ಕನಸು ಇದು
ಕನಸುಗಾರನ ಕಣ್ಣಿನ ಬೆಳಕು ಇದು
ರಚನೆ: ಕಲ್ಯಾಣ್
ಸಂಗೀತ: ರಾಜೇಶ್ ರಾಮನಾಥನ್
ಗಾಯನ: ಚಿತ್ರಾ
ಕನಸುಗಾರನ ಕಣ್ಣಿನ ಬೆಳಕು ಇದು
ಈ ಯೌವನ ತುಂಬಿದ ಬದುಕಿನಲಿ
ದಿನ ಬೆಳ್ಳಿಹಬ್ಬದ ನಗುವಿನಲಿ
ಒಂದೇ ಇಬ್ಬನಿಯೊಳಗೆ ಕೋಟಿ ಸೂರ್ಯನ ಬಿಂಬವಿದೆ
ಒಂದೇ ಕೊರಳಿನ ದನಿಗೇ ಕೋಟಿ ಹೃದಯದ ಸ್ಪರ್ಶವಿದೆ
ಕೋಟಿ ಪಲ್ಲವಿ ಹಾಡುವ ಕನಸು ಇದು
ಕನಸುಗಾರನ ಕಣ್ಣಿನ ಬೆಳಕು ಇದು
ಮನಸು ಮರೆತು ಹಾಡಿದರೆ ಪದಗಳೇ ಇಂಚರ
ಮೈಯ ಮರೆತು ಹಾಡಿದರೆ ಪದಗಳೇ ಪಂಜರ
ಕೋಗಿಲೆಗಳ ಗುಂಪಲಿ ಹುಟ್ಟೋ ಗುಟ್ಟಿನ ಮಾತುಗಳು
ಪ್ರತಿ ಕವಿಗಳ ಕಿವಿಗಳ ಸೇರಿ ಮೂಡಿತು ಸಾಲುಗಳು
ಏಳು ಸ್ವರಗಳೇ ನಮ್ಮ ಏಳೂ ಜನ್ಮದಲೂ
ಧಮನೀ ಧಮನಿಲಿ ಸರಿಗಮಪದನಿ ಮೀಟೋ ತಂತಿಗಳು
ಕೋಟಿ ಪಲ್ಲವಿ ಹಾಡುವ ಕನಸು ಇದು
ಕನಸುಗಾರನ ಕಣ್ಣಿನ ಬೆಳಕು ಇದು
ನೂರು ನೂರು ತಿರುವುಗಳು ಬದುಕಿನ ದಾರಿಗೆ
ಯಾರೋ ದಾರಿದೀಪಗಳು ಅವರವರ ಪಾಲಿಗೆ
ಭರವಸೆಯಲಿ ನಡೆಯುವ ರೀತಿ ತುಂಬಿದೆ ಎದೆಯಲ್ಲಿ
ಬಯಸುವ ಪ್ರತಿನಿಮಿಷಕು ಸ್ಫೂರ್ತಿ ದೇವರೇ ನಮಗಿಲ್ಲಿ
ಕೋಟಿ ಪಲ್ಲವಿ ಹಾಡುವ ಕನಸು ಇದು
ಕನಸುಗಾರನ ಕಣ್ಣಿನ ಬೆಳಕು ಇದು
ರಚನೆ: ಕಲ್ಯಾಣ್
ಸಂಗೀತ: ರಾಜೇಶ್ ರಾಮನಾಥನ್
ಗಾಯನ: ಚಿತ್ರಾ
Tag: Koti pallavi haaduva kansoo idu, koti pallavi haduva kanasu idu
ಕಾಮೆಂಟ್‌ಗಳು