ಚಂದಿರನೇತಕೆ ಓಡುವನಮ್ಮ
ಚಂದಿರನೇತಕೆ
ಓಡುವನಮ್ಮ
ಮೋಡಕೆ
ಹೆದರಿಹನೇ
ಬೆಳ್ಳಿಯ
ಮೋಡದ ಅಲೆಗಳ ಕಂಡು
ಚಂದಿರ
ಬೆದರಿಹನೆ?
ಹಿಂಜಿದ
ಅರಳೆಯು ಗಾಳಿಗೆ ಹಾರಿ
ಮೋಡಗಳಾಗಿಹವೇ?
ಅರಳೆಯು
ಮುತ್ತಿ ಮೈಯನು ಸುತ್ತಿ
ಚಂದ್ರನ
ಬಿಗಿಯುವವೇ?
ಮಂಜಿನಗಡ್ಡೆಯ
ಮೋಡವು ಕರಗಲು
ಚಂದಿರ
ನಗುತಿಹನು
ಕರಗಿದ
ಮೋಡದ ಸೆರೆಯನು ಹರಿಯುತ
ಬಾನಲಿ
ತೇಲುವನು
ಚಂದಿರನೆನ್ನಯ
ಗೆಳೆಯನು ಅಮ್ಮಾ
ನನ್ನೊಡನಾಡುವನು
ನಾನೂ
ಓಡಲು ತಾನೂ ಓಡುವ
ಚೆನ್ನಿಗ
ಚಂದಿರನು
ಬಾ
ಬಾ ಚಂದಿರ ಬೆಳ್ಳಿಯ ಚಂದಿರ
ನಮ್ಮಯ
ಮನೆಗೀಗ
ನಿನ್ನಯ
ಬೆಳಕನು ಎಲ್ಲೆಡೆ ಚೆಲ್ಲಿ
ಮನವನು
ಬೆಳಗೀಗ
ಸಾಹಿತ್ಯ: ನೀ. ರೆ. ಹೀರೇಮಠ
Tag: Chandiranetake Oduvanamma
ಇದರ ಬಗ್ಗೆ ಸಾರಾಂಶ ಬೇಕು
ಪ್ರತ್ಯುತ್ತರಅಳಿಸಿಈ ಹಾಡಿನ ಬಗ್ಗೆ ಸಾರಾಂಶ ಬೇಕು
ಅಳಿಸಿ