ಸಂಜೆಯ ರಾಗಕೆ
ಸಂಜೆಯ ರಾಗಕೆ ಬಾನು ಕೆಂಪೇರಿದೆ
ತಿಂಗಳು ಮೂಡಿ ಬೆಳಕಿನ ಕೋಡಿ ಚೆಲ್ಲಾಡಿದೆ
ಈಗ ರಂಗೇರಿದೆ
ಮರಗಿಡ ನೆಲದ ಮೇಲೆ ನೆರಳನು ಹಾಸಿದೆ
ಹೂಗಳ ದಳಗಳ ನಡುವೆ ನಿನದೇ ಬೆರಳಿದೆ
ಗಾಳಿಯ ಜೊತೆಯ ಗಂಧವು ನನ್ನನ್ನು ಸವರಿದೆ
ಒಳಗೂ ಹೊರಗೂ ವ್ಯಾಪಿಸಿ ಯೌವ್ವನ ಕೆರಳಿದೆ
ಕೊಳದಲಿ ಮೂಡಿದ ಬಿಂಬವು ಹೂಗಳ ಮರೆಸಿದೆ
ಕಣ್ಣಲಿ ಎಂತಹ ಕನಸಿನ ಲೋಕವು ತೆರೆದಿದೆ
ಸಾಹಿತ್ಯ: ಸುಬ್ರಾಯ ಚೂಕ್ಕಾಡಿ
Tag: Sanjeya Ragake
ಕಾಮೆಂಟ್‌ಗಳು