ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಆಕಾಶದಲ್ಲಿ ಬಾನಾಡಿಯಾಗಿ


ಆಕಾಶದಲ್ಲಿ ಬಾನಾಡಿಯಾಗಿ
ದನಿಯ ಬೆರೆಸಿ ಹಾಡುವ
ನಲಿ ನಲಿವ ನಗು ನಗುವ ಬಾ
ಆನಂದದಿಂದ ಒಂದಾದ ಬಂಧ
ಸೊಗದ ಶುಭದ ಸಂಗಮ
ಮೃದು ಮಧುರ ಇದು ಅಮರ
ಬಾ….
ಆನಂದದಿಂದ ಒಂದಾದ ಬಂಧ 

ತೇಲಿ ತೇಲಿ ಹೋಗುವ
ದೂರ ದೂರ ಸಾಗುವ
ಮಧುರ ಮಿಲನ ಸುಧೆಯ ಪಾನ
ಇಲ್ಲೆ ಇಂದ್ರ ವೈಭವ 
ಹೃದಯ ಮೌನ ಭಾಷೆಯ
ಕಣ್ಣ ಮಿಂಚು ಸನ್ನೆಯ
ಒಲವ ಕರೆಯ ಸರಸ ಸಮಯ
ನೋಡು ಪ್ರೇಮ ಮಾಯೆಯ 
ಆಕಾಶದಲ್ಲಿ ಬಾನಾಡಿಯಾಗಿ
ದನಿಯ ಬೆರೆಸಿ ಹಾಡುವ
ನಲಿ ನಲಿವ ನಗು ನಗುವ ಬಾ
ಆನಂದದಿಂದ ಒಂದಾದ ಬಂದ.... 

ಜಾತಿ ಮತವ ಮೀರಿದ
ಪ್ರೇಮ ರಾಜ್ಯ ಸಂಪದ
ನಿನಗೆ ನನಗೆ ಅವನ
ಕೊಡುಗೆ ಅದನೆ ಹಂಚಿಕೊಳ್ಳುವ
ಆಕಾಶದಲ್ಲಿ ಬಾನಾಡಿಯಾಗಿ
ದನಿಯ ಬೆರೆಸಿ ಹಾಡುವ
ನಲಿ ನಲಿವ ನಗು ನಗುವ ಬಾ
ಆನಂದದಿಂದ ಒಂದಾದ ಬಂದ

ಹೊನ್ನ ಮಳೆಯು ಬೀಳಲಿ
ನಮ್ಮ ಒಲವ ಬಾಳಲಿ
ನನಗೆ ನೀನು ನಿನಗೆ ನಾನು
ಒಂದೇ ತಾಣವಾಗುವಾ

ಚಿತ್ರ: ಕಾವೇರಿ
ರಚನೆ: ವಿಜಯನಾರಸಿಂಹ
ಸಂಗೀತ: ಎಂ. ರಂಗರಾವ್
ಗಾಯನ: ಪಿ. ಬಿ. ಶ್ರೀನಿವಾಸ್ ಮತ್ತು ಎಸ್. ಜಾನಕಿ


Tag: Aakashadalli baanaadiyaagi, Akashadalli banadiyagi



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ