ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಚಿದಾನಂದರೂಪಃ ಶಿವೋsಹಂ ಶಿವೋsಹಂ



ಮನೋ ಬುದ್ಧಿ ಅಹಂಕಾರ ಚಿತ್ತಾನಿ ನಾಹಂ
ನ ಚ ಶ್ರೋತ್ರ ಜಿಹ್ವೆ ನಚ ಘ್ರಾಣನೇತ್ರೆ
ನ ಚ ವ್ಯೋಮ ಭೂಮೀರ್ ನ ತೇಜೋ ನ ವಾಯುಃ
ಚಿದಾನಂದರೂಪಃ ಶಿವೋsಹಂ ಶಿವೋsಹಂ

(ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ ಇವಾವುವೂ ನಾನಲ್ಲ.  
ಕಿವಿ ಕಣ್ಣು ಮುಂತಾದ ಪಂಚೇಂದ್ರಿಯಗಳೂ ನಾನಲ್ಲ
ಆಕಾಶ, ಭೂಮಿ, ಅಗ್ನಿ, ವಾಯು ಮುಂತಾದ ಪಂಚಭೂತಗಳೂ ನಾನಲ್ಲ.
ಆನಂದಸ್ವರೂಪನಾದ ಸದಾಶಿವನೇ ನಾನಾಗಿದ್ದೇನೆ.)

ನ ಚ ಪ್ರಾಣ ಸಂಜ್ಞೋ  ನ ವೈ ಪಂಚ ವಾಯುಃ
ನ ವಾ ಸಪ್ತಧಾತುರ್ನ ವಾ ಪಂಚ ಕೋಶಃ
ನ ವಾಕ್ಪಾಣಿ ಪಾದೌ ನ ಚೋಪಸ್ಥಪಾಯು
ಚಿದಾನಂದರೂಪಃ ಶಿವೋsಹಂ ಶಿವೋsಹಂ

(ಪ್ರಾಣವೆಂಬ ಹೆಸರಿನವನು ನಾನಲ್ಲ.  ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ ಈ ಪಂಚಪ್ರಾಣವಾಯುವೂ ನಾನಲ್ಲ.
ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ, ಆನಂದಮಯ ಮುಂತಾದ ಪಂಚಕೋಶಗಳೂ ನಾನಲ್ಲ.
ಚರ್ಮ, ಮಾಂಸ, ರಕ್ತ, ಮೇದಸ್ಸು, ಮಜ್ಜಾ, ನರ, ಎಲುಬುಗಳೆಂಬ ಸಪ್ತಧಾತುಗಳೂ ನಾನಲ್ಲ.
ವಾಗೀಂದ್ರಿಯ, ಕೈ, ಕಾಲು ಮುಂತಾದ ಕರ್ಮೇಂದ್ರಿಯಗಳೂ, ವಿಸರ್ಜನಾಂಗಗಳೂ ನಾನಲ್ಲ. 
ಚಿದಾನಂದಸ್ವರೂಪನಾದ ಸದಾಶಿವನೇ ನಾನಾಗಿದ್ದೇನೆ.)

ನ  ಮೇ ದ್ವೇಷ ರಾಗೌ ನ ಮೇ ಲೋಭ ಮೋಹೌ
ಮದೋ ನೈವ ಮೇ ನೈವ ಮಾತ್ಸರ್ಯ ಭಾವಃ
ನ ಧರ್ಮೋ ನ ಚಾರ್ಥೋನ ಕಾಮೋ ನ ಮೋಕ್ಷಃ
ಚಿದಾನಂದರೂಪಃ ಶಿವೋsಹಂ ಶಿವೋsಹಂ

(ನನಗೆ ರಾಗದ್ವೇಷಗಳಾಗಲಿ, ಲೋಭ-ಮೋಹಗಳಾಗಲಿ
ಗರ್ವವಾಗಲಿ, ಹಗೆತನವಾಗಲಿ ಇಲ್ಲ,
ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ಚತುರ್ವಿಧ ಪುರುಷಾರ್ಥಗಳೂ ನನಗಿಲ್ಲ.
ಚಿನ್ಮಾತ್ರಸ್ವರೂಪನಾದ ಸದಾಶಿವನೇ ನಾನು.)

ನ ಪುಣ್ಯಂ ನ ಪಾಪಂ ನ ಸೌಖ್ಯಂ ನ ದುಃಖಂ
ನ ಮಂತ್ರೋ ನ ತೀರ್ಥಂ ನ ವೇದೋ ನ ಯಜ್ಞಾಃ
ಅಹಂ ಭೋಜನಂ ನೈವ ಭೋಜ್ಯಂ ನ ಭೋಕ್ತಾ
ಚಿದಾನಂದರೂಪಃ ಶಿವೋsಹಂ ಶಿವೋsಹಂ

(ಪುಣ್ಯ-ಪಾಪಗಳೂ, ಸುಖ-ದುಃಖಗಳೂ
ಮಂತ್ರ-ತೀರ್ಥಗಳೂ, ವೇದ-ಯಜ್ಞಗಳೂ ನಾನಲ್ಲ.
ಭೋಜನವೂ, ಭೋಜನದ ಪದಾರ್ಥಗಳೂ, ಭೋಜನ ಮಾಡುವವನೂ ನಾನಲ್ಲ.
ಚಿತ್ ಸ್ವರೂಪನಾದ ಸದಾಶಿವನೇ ನಾನು.)

ನ ಮೇ ಮೃತ್ಯುರ್ನ ಶಂಕಾ ನ ಮೇ ಜಾತಿಭೇಧಃ
ಪಿತಾ ನೈವ ಮೇ ನೈವ ಮಾತಾ ನ ಜನ್ಮ
ನ ಬಂಧುರ್ನ ಮಿತ್ರಂ ಗುರುರ್ನೈವ ಶಿಷ್ಯಃ
ಚಿದಾನಂದರೂಪಃ ಶಿವೋsಹಂ ಶಿವೋsಹಂ

(ನನಗೆ ಮರಣವಾಗಲಿ, ಸಂಶಯವಾಗಲಿ ಇಲ್ಲ.
ಜಾತಿಭೇದವೂ ಇಲ್ಲ, ತಂದೆ-ತಾಯಿಯರೂ, ಬಂಧು-ಮಿತ್ರರೂ ಇಲ್ಲ.
ಜನ್ಮವೂ ಇಲ್ಲ. ಗುರು-ಶಿಷ್ಯರೂ ಇಲ್ಲ.
ಅಮರನೂ ಜ್ಞಾನಸ್ವರೂಪನೂ ಆದ ಪರಮಾತ್ಮನೇ ನಾನು.)

ಅಹಂ ನಿರ್ವಿಕಲ್ಪೋ ನಿರಾಕಾರರೂಫೋ
ವಿಭುರ್ ವ್ಯಾಪ್ಯ ಸರ್ವತ್ರ ಸರ್ವೆಂದ್ರಿಯಾಣಾಂ
ನ ಚಾಸಂಗಂತಂ ನೈವ ಮುಕ್ತಿರ್ನ ಬಂಧಃ
ಚಿದಾನಂದರೂಪಃ ಶಿವೋsಹಂ ಶಿವೋsಹಂ

(ನಾನು ನಾನಾವಿಕಲ್ಪಗಳಿಲ್ಲದವನು.  ನಿರಾಕಾರನೂ
ಎಲ್ಲಕಡೆ ಇರುವವನೂ ಆಗಿದ್ದೇನೆ.  ಎಲ್ಲ ಇಂದ್ರಿಯಗಳೊಡನೆ ಸಂಗತನೂ ನಾನಾಗಿದ್ದೇನೆ
ನನಗೆ ಬಂಧವೂ ಇಲ್ಲ.  ಮುಕ್ತಿಯೂ ಇಲ್ಲ.  
ಕೇವಲ ಆನಂದಸ್ವರೂಪನಾದ ಸದಾಶಿವನೇ ನಾನು.)

ಸಾಹಿತ್ಯ: ಆದಿ ಶಂಕಾರಾಚಾರ್ಯ




Tag: Chidananda roopah shivoham shivoham

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ