ಎತ್ತ ಪೋದನೇ ಗೆಳತಿ
ಇತ್ತಲಿತ್ತ
ದಿಟ್ಟಿಗೆಟುಕೆ ಮತ್ತೆ ಮಾಯವಾದನೆಲ್ಲೋ !
ಎತ್ತ
ಪೋದನೇ ಗೆಳತಿ, ಚಿತ್ತಚೋರ ಚೆಲುವರಸ
ಗೊಂಬೆಯೆಂದೇ
ಮಂದಿಯನೆಲ್ಲ ನಂಬಿಸುತೆನಗೆ ನಿಜವ ತೋರಿ
ತುಂಬುಲುಮೆಯನೆರೆದ
ಸೆಲ್ವ ನಂಬಿ, ಎತ್ತ ಪೋದನವ್ವ !
ಚಿತ್ತಚೋರ
ಚೆಲುವರಸ
ಬಂಧುಬಳಗ ಐಸಿರಿ ಸೊಗ ಒಂದು ಸೇರದಂತೆ ಗೈದ
ಚೆಂದದವನ ಕಾಣದಿಂತು, ಬೆಂದು ಹೋಗುತಿಹೆನೆ ಗೆಳತಿ!
ಚಿತ್ತ ಚೋರ ಚೆಲುವರಸ
ಎತ್ತ
ಪೋದನೇ ಗೆಳತಿ ಚಿತ್ತ ಚೋರ ಚೆಲುವರಸ
ಚಿತ್ರ: ಸುಬ್ಬಾಶಾಸ್ತ್ರಿ
ಸಾಹಿತ್ಯ: ಪು. ತಿ. ನರಸಿಂಹಾಚಾರ್
ಗಾಯನ: ಶ್ರೀರಂಗಂ ಗೋಪಾಲರತ್ನಂ
ಸಂಗೀತ: ವೀಣಾ ದೊರೆಸ್ವಾಮಿ ಅಯ್ಯಂಗಾರ್
ಕಾಮೆಂಟ್‌ಗಳು