ಶರಣೆಂಬೆ ನಾ ಶಶಿಭೂಷಣ
ಶರಣೆಂಬೆ ನಾ ಶಶಿಭೂಷಣ
ಗೌರೀಪ್ರಿಯಾ ಜಗನ್ಮೊಹನ
ಶರಣೆಂಬೆ ನಾ ಶಶಿಭೂಷಣ
ಗೌರೀಪ್ರಿಯಾ ಜಗನ್ಮೊಹನ
ಶರಣೆಂಬೆ ನಾ ಶಶಿಭೂಷಣ
ಕೆಂಜಡೆ ಮುಡಿಯ ಕಾಪಾಲಿಕನೆ
ನಂಜು ನುಂಗಿದ ನಂಜುಂಡೇಶನೆ
ಅಂಜಿದ ಬಾಲನ ಅಪ್ಪಿ ಮುದ್ದಾಡಿದ
ಮೃತ್ಯುಂಜಯ, ನೀ ದಯಾಮಯ
ಶರಣೆಂಬೆ ನಾ ಶಶಿಭೂಷಣ
ಗೌರೀಪ್ರಿಯಾ ಜಗನ್ಮೊಹನ
ಶರಣೆಂಬೆ ನಾ ಶಶಿಭೂಷಣ
ಬೇಡರ ಕಣ್ಣನ ಪೂಜೆಗೆ ನೀನೊಲಿದೆ
ಅಲ್ಲಮ ಪ್ರಭುವಾಗಿ ಮಾಯೆಯಗೆಲಿದೆ
ಬಲ್ಲಿದ ಬಸವಂಗೆ ಕುಲದೈವ ನೀನಾದೆ
ಮಹಾದೇವಿ ಅಕ್ಕನ ಚನ್ನಮಲ್ಲಿಕಾರ್ಜುನ
ಶರಣೆಂಬೆ ನಾ ಶಶಿಭೂಷಣ
ಗೌರೀಪ್ರಿಯಾ ಜಗನ್ಮೊಹನ
ಶರಣೆಂಬೆ ನಾ ಶಶಿಭೂಷಣ
ಚಿತ್ರ: ಮಲ್ಲಮ್ಮನ ಪವಾಡ
ಸಾಹಿತ್ಯ: ಕಣಗಾಲ್ ಪ್ರಭಾಕರ ಶಾಸ್ತ್ರಿ
ಸಂಗೀತ: ವಿಜಯಭಾಸ್ಕರ್
ಗಾಯನ: ಪಿ. ಸುಶೀಲ
Tag: Kanagal Prabhakara Shastry
ಕಾಮೆಂಟ್‌ಗಳು