ತನ್ನಿರೆ ಹಾಲ ತನಿ ಎರೆಯೋಣ
ತನ್ನಿರೆ ಹಾಲ ತನಿ ಎರೆಯೋಣ 
ತಾಯ ಹಾಲ ಋಣ 
ತೀರಿಪ ಇಂದೆ ಪುಣ್ಯ ದಿನ 
ತಣ್ಣಗಿರಲಿ ಬೆನ್ನು ಉದರ
ಅಣ್ಣ ತಮ್ಮದಿರಾ 
ಕಾಯ ನೀಡಿದ ತಾಯಿ ಕರುಳು
ನೋಯದಿರಲೆಂದು 
ತವರಿನ ಕೀರ್ತಿ ಗಳಿಸೆ
ಬೆಳಗಲೆಂದೆಂದು 
ಒಂದೇ ಬಸಿರು, ಒಂದೇ ಉಸಿರು,
ಹಂಚಿಕೊಂಡಂಥಾ 
ನನ್ನ ಅಣ್ಣನ ಬಾಳ ಬಳ್ಳಿ
ಬಾಡದಿರಲೆಂದು 
ನಲಿವಿನ ತುಂಬು ಜೀವನ
ಆಗಲೆಂದೆಂದು  
ತಂದೆ ಯಾರೋ ತಾಯಿ ಯಾರೋ 
ಯಾವುದೂ ಅರಿಯೇ 
ದೇವರಂಥ ಅಣ್ಣನಿರಲು ಸಂತಸಕೆ
ಕೊರೆಯೆ 
ಆತನ ಪ್ರೀತಿ ಆಧರ ಎಂದಿಗೂ
ಮರೆಯೆ.
ಚಿತ್ರ: ದೇವರು ಕೊಟ್ಟ ತಂಗಿ
ಸಾಹಿತ್ಯ: ಕು. ರ. ಸೀತಾರಾಮ ಶಾಸ್ತ್ರಿ
ಸಂಗೀತ: ವಿಜಯಭಾಸ್ಕರ್ 
ಗಾಯನ: ಎಸ್. ಜಾನಕಿ
 
 
 
 
 
 
ಕಾಮೆಂಟ್‌ಗಳು