ಅಹಲ್ಯಾಬಾಯಿ
ಅಹಲ್ಯಾಬಾಯಿ ಹೋಳ್ಕರ್
ಅಹಲ್ಯಾಬಾಯಿ ಹೋಳ್ಕರ್ ಆಧುನಿಕ ಭಾರತದ ಇತಿಹಾಸದಲ್ಲಿ ಅತ್ಯಂತ ಪ್ರಸಿದ್ಧ ಸ್ತ್ರೀಯರಲ್ಲಿ ಒಬ್ಬರು.
ಅಹಲ್ಯಾಬಾಯಿ 1725ರ ಮೇ 31ರಂದು ಮಹಾರಾಷ್ಟ್ರದ ಜಮಖೇಡ್ ಬಳಿಯ ಚೋಂಡಿ ಎಂಬಲ್ಲಿ ಜನಿಸಿದರು. ಅಹಲ್ಯಾಬಾಯಿ ಅವರು ಹೋಳ್ಕರ್ ವಂಶದ ಮುಲ್ಲಾರ್ ರಾವ್ ಹೋಳ್ಕರನ ಮಗ ಖಂಡೇರಾಯನ ಪತ್ನಿಯಾದರು.
ಗಂಡ 1754ರಲ್ಲಿ ಕುಂಭೇರ್ ಮುತ್ತಿಗೆಯಲ್ಲಿ ಸತ್ತಾಗ ಅಹಲ್ಯಾಬಾಯಿ ತಾನೇ ರಾಜ್ಯಸೂತ್ರಗಳನ್ನು ವಹಿಸಿದರು. (1754-1795). 1767ರಲ್ಲಿ ರಘೋಬ ಐಶ್ವರ್ಯವನ್ನೂ ರಾಜ್ಯವನ್ನೂ ಅಪಹರಿಸಲು ಯತ್ನಿಸಿದಾಗ ಧೃತಿಗೆಡದೆ ಅವನನ್ನು ಎದುರಿಸಿದರು. ರಘೋಬ ನಾಚಿಕೆಯಿಂದ ಹಿಂದಿರುಗಿದ. ಈಕೆ ಒಟ್ಟು ಮೂವತ್ತು ವರ್ಷಗಳ ಕಾಲ ರಾಜ್ಯವನ್ನು ಆದರ್ಶ ರೀತಿಯಲ್ಲಿ ಆಳಿದರು. ಅತ್ಯಂತ ದಕ್ಷತೆಯಿಂದ ಒಳಾಡಳಿತ ಸರ್ಕಾರವನ್ನು ಸ್ಥಾಪಿಸಿ ಶಾಂತಿಯನ್ನು ನೆಲೆಗೊಳಿಸಿದರು. ಪ್ರಜೆಗಳ ಸೌಖ್ಯಸಾಧನೆಯೇ ಈಕೆಯ ಮುಖ್ಯ ಧ್ಯೇಯವಾಗಿತ್ತು.
ಅಹಲ್ಯಾಬಾಯಿ ಮಾಳವಪ್ರಾಂತ್ಯದಲ್ಲಿ ಎಂದೂ ಕಾಣದಂಥ ಸುಖೀರಾಜ್ಯ ಸ್ಥಾಪನೆ ಮಾಡಿದರು. ಈಗಿನ ಇಂದೂರು ಪಟ್ಟಣ ಈಕೆಯಿಂದಲೇ ಅಭಿವೃದ್ಧಿಗೆ ಬಂತು. ಅಹಲ್ಯಾಬಾಯಿ ಉದಾರಚರಿತರೂ, ಧರ್ಮಿಷ್ಠರೂ ಆಗಿ ಮತಗ್ರಂಥಗಳ ಅಧ್ಯಯನದಲ್ಲಿ ಹೆಚ್ಚುಕಾಲ ಕಳೆಯುತ್ತಿದ್ದರು. ದುರಭಿಮಾನ ಲವಲೇಶವೂ ಇವರಲ್ಲಿ ಇರಲಿಲ್ಲ. ಸರ್ ಜಾನ್ ಮ್ಯಾಲ್‍ಕೋಮ್ ಅತ್ಯಂತ ಪರಿಶುದ್ಧಳಾದ ಅತ್ಯಂತ ಆದರ್ಶಪ್ರಾಯಳಾದ ರಾಜ್ಯಾಡಳಿತಗಾರಳೆಂದು ಈಕೆಯ ಬಗ್ಗೆ ಹೇಳಿದ್ದಾನೆ.
ಅಹಲ್ಯಾಬಾಯಿ ಹೋಳ್ಕರ್ 1795ರ ಆಗಸ್ಟ್ 13ರಂದು ಈ ಲೋಕವನ್ನಗಲಿದರು.

On the birth anniversary of great queen Ahilyabai Holkar
ಕಾಮೆಂಟ್‌ಗಳು