ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಾನುಷಿ ಛಿಲ್ಲರ್


 ಮಾನುಷಿ ಛಿಲ್ಲರ್ 


ಮಾನುಷಿ ಛಿಲ್ಲರ್ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಗೆದ್ದ ಸೌಂದರ್ಯವತಿ.

ಮಾನುಷಿ ಛಿಲ್ಲರ್ 1997ರ ಮೇ  14ರಂದು ಜಜ್ಜರ್ ಜಿಲ್ಲೆಯ ಬಮ್ನೋಲಿ ಗ್ರಾಮದಲ್ಲಿ ಹರಿಯಾನ್ವಿ ಕುಟುಂಬದಲ್ಲಿ ಜನಿಸಿದರು. ತಂದೆ ಡಾ. ಮಿತ್ರಾ ಬಸು ಛಿಲ್ಲರ್ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ಯಲ್ಲಿ ವೈದ್ಯ ಮತ್ತು ವಿಜ್ಞಾನಿ.  ವೈದ್ಯರಾದ  ತಾಯಿ ಡಾ. ನೀಲಂ ಛಿಲ್ಲರ್ ಇನ್‌ಸ್ಟಿಟ್ಯೂಟ್ ಆಫ್ ಹ್ಯೂಮನ್ ಬಿಹೇವಿಯರ್‌ ಅಂಡ್ ಅಲೈಡ್ ಸೈನ್ಸಸ್ ಸಂಸ್ಥೆಯಲ್ಲಿ  ನ್ಯೂರೋಕೆಮಿಸ್ಟ್ರಿ ವಿಭಾಗದ ಮುಖ್ಯಸ್ಥರು.

ಛಿಲ್ಲರ್ ನವದೆಹಲಿಯ ಸೇಂಟ್ ಥಾಮಸ್ ಶಾಲೆಯಲ್ಲಿ ಅಧ್ಯಯನ ಮಾಡಿದಾಗ 12ನೇ ತರಗತಿಯಲ್ಲಿ ಇಂಗ್ಲಿಷ್ ವಿಷಯದಲ್ಲಿ ಅಖಿಲ ಭಾರತ ಸಿಬಿಎಸ್ಇ ಟಾಪರ್ ಆಗಿ  ಒಟ್ಟಾರೆಯಾಗಿಯೂ ಪ್ರತಿಶತ 96 ಅಂಕಗಳನ್ನು ಗಳಿಸಿದ ಬುದ್ಧಿವಂತೆ. ಆಕೆ ತನ್ನ ಮೊದಲ ಪ್ರಯತ್ನದಲ್ಲೇ ಅಖಿಲ ಭಾರತ ವೈದ್ಯಕೀಯ ಪೂರ್ವ ಪರೀಕ್ಷೆಯಲ್ಲಿ ಉತ್ತೀರ್ಣರಾದವರು. ಸೋನಿಪತ್‌ನ ಭಗತ್ ಫೂಲ್ ಸಿಂಗ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಪದವಿ ವ್ಯಾಸಂಗ ಮಾಡುತ್ತಿದ್ದರು.  ಆಕೆ ತಮ್ಮ ಮಾತೃಭಾಷೆಯಾದ ಹರ್ಯಾನ್ವಿ ಅಲ್ಲದೆ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ. ಕೂಚಿಪುಡಿ ನೃತ್ಯಗಾರ್ತಿಯಾಗಿ ರಾಜಾ ಮತ್ತು ರಾಧಾ ರೆಡ್ಡಿ ಅವರಲ್ಲಿ ತರಬೇತಿ ಪಡೆದಿದ್ದಾರೆ.

ಮಾನುಷಿ ಛಿಲ್ಲರ್ 2017ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಜಯಶಾಲಿಯಾದರು.  ಅದಕ್ಕೆ ಮುಂಚೆ ಆಕೆ ಫೆಮೀನಾ ಮಿಸ್ ಇಂಡಿಯಾ ಕಿರೀಟವನ್ನು ಸಹಾ ಧರಿಸಿದವರು. 

ಮಾನುಷಿ ಛಿಲ್ಲರ್ ಅವರಿಗೆ ಚಲನಚಿತ್ರ, ಜಾಹೀರಾತು ಲೋಕದಲ್ಲಿ ಅನೇಕ ಅವಕಾಶಗಳು ಹರಿದು ಬಂದಿವೆ.

ಬೆಳೆದು ನಲಿಯುವ ಈ ಹುಡುಗಿಗೆ ಯಶಸ್ಸಿನ ಕಿರೀಟಗಳು ಭಾರವಾಗದಿರಲಿ. ಬದುಕಿನ ಮಹತ್ವದ ಸಾಧನೆಗಳು ಕೈಗೂಡುವಂತಾಗಲಿ.

On the birthday of winner of the Miss World 2017 pageant Manushi Chhillar 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ